ಭೂ ಕುಸಿತ ಸಂತ್ರಸ್ತರ  ಮನೆ ಹಂಚಿಕೆಗೆ ಅಪಸ್ವರ, ನ್ಯಾಯಾಲಯದ ಕದ ತಟ್ಟಲು ಚಿಂತನೆ…

ವಿರಾಜಪೇಟೆ, ಫೆ.28:- ಕೊಡಗು ಜಿಲ್ಲೆಯಲ್ಲಿ  2018ರಲ್ಲಿ ನಡೆದ  ಪೃಕೃತಿ ವಿಕೋಪದಿಂದ ಮನೆ ಕಳೆದು ಕೋಂಡವರಿಗೆ ಸರ್ಕಾರ ಮತು ಹಲವು ಖಾಸಗೀ ಸಂಸ್ಥೆ, ವ್ಯಕ್ತಿಗಳೂ ಮನೆ ಕಟ್ಟಿಸಿ ಕೊಟ್ಟಿದ್ದಾರೆ.  ಈಗಾಗಲೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು 800+ ಮನೆಗಳನ್ನು ಹಂಚಿಕೆ ಮಾಡಿರುವುದಾಗಿ ಜಿಲ್ಲಾಡಳಿತ ಹೇಳಿಕೊಂಡಿದೆ. ಆದರೆ ಈ ಮನೆ ಹಂಚಿಕೆಯಲ್ಲಿ ಹಲವು ನೈಜ ಸಂತ್ರಸ್ತರಿಗೆ ಮನೆ ಸಿಕ್ಕಿಲ್ಲ ಎಂಬ ಅಪಸ್ವರ ಎದ್ದಿದ್ದು, ಕೆಲವರು  ನ್ಯಾಯಾಲಯದ ಮೊರೆ ಹೋಗುವ ಚಿಂತನೆಯಲ್ಲೂ ಇದ್ದಾರೆ ಎಂಬ ಮಾಹಿತಿ ಲಭಿಸಿದೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ […]

Continue Reading

ಐವತ್ತು ಚಿನ್ನದೊಂದಿಗೆ ಅಂತರಾಷ್ಟ್ರೀಯ ನೃತ್ಯ ಸ್ಪರ್ಧೆಗೆ ಆಯ್ಕೆ…

ಗೋಣಿಕೊಪ್ಪ, ಫೆ.28: ರಾಷ್ಟ್ರೀಯ ಸ್ಪೋರ್ಟ್‌ ಡ್ಯಾನ್ಸ್‌ನಲ್ಲಿ ಐವತ್ತು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಮೂಲಕ  ಗೋಣಿಕೊಪ್ಪದ ಸೈಕ್ಲೋನ್ ನೃತ್ಯ ಶಾಲೆಯ ವಿದ್ಯಾರ್ಥಿಗಳು ನೇಪಾಳದಲ್ಲಿ ನಡೆಯುವ ಅಂತರಾಷ್ಟ್ರೀಯ  ಮಟ್ಟದ ನೃತ್ಯ ಸ್ವರ್ದೆಗೆ ಆಯ್ಕೆಯಾಗಿದ್ದಾರೆ.         ಗೋವಾ ರಾಜ್ಯದ ಮಾರ್ಗೋ ರವೀಂದ್ರ ಭವನ ಸಭಾಂಗಣದಲ್ಲಿ, ಸ್ಪೋಟ್ರ್ಸ್ ಅಸೋಸಿಯೇಷನ್​​, ಸ್ಪೋರ್ಟ್ ಡಾನ್ಸ್ ಫೆಡರೇಶನ್ ಆಫ್ ಇಂಡಿಯಾ, ಏಷ್ಯನ್ ಸ್ಪೋರ್ಟ್ ಡಾನ್ಸ್ ಕೌನ್ಸಿಲ್, ಇಂಟನ್ರ್ಯಾಷನಲ್ ಸ್ಪೋಟ್ರ್ಸ್ ಫೆಡರೇಶನ್, ಅಂತರರಾಷ್ಟ್ರೀಯ ನೃತ್ಯ ಮಂಡಳಿ, ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ, ಇಂಟನ್ರ್ಯಾಷನಲ್ ಕೌನ್ಸಿಲ್ ಆಫ್ […]

Continue Reading

ಮಾರ್ಚ್‌ 13ಕ್‌, ಇಗ್ಗುತಪ್ಪಂಡ ಕುಂಬ್ಯಾರ್‌  ಕಲಾಡ್ಚ…

ಕಕ್ಕಬ್ಬೆ, ಫೆ.28:- ಕೊಡವಡ ಕುಲದೇವ, ಮಳೆದೇವ, ಅನ್ನದಾತಂದ್‌ ಕೇಳಿ ಪೋಯಿತುಳ್ಳ, ಪಾಡಿ ಶ್ರೀ ಇಗ್ಗುತಪ್ಪ ದೇವಂಡ ಕುಂಬ್ಯಾರ್‌ ಕಲಾಡ್ಚ ನಮ್ಮೆ,  ಇದೇ ಫೆಬ್ರವರಿ 13 (ಕುಂಬ್ಯಾರ್‌ 29)ನೇ ಬ್ಯಾಳಾಚೆ ನಡ್ಪಾಂದ ದ್ಯಾವ ತಕ್ಕಂಗಳಾನ ಪರದಂಡ ಒಕ್ಕಕಾರ ಅರಿಚಿಟ್ಟಿತ್.‌           ಆ ಮಾರೀಪತ್‌ ಇಂದ್‌ ಮಜ್ಜಣ (28/02/25) ಇಗ್ಗುತಪ್ಪಂಡ ಆದಿನೆಲೆ ಮಲ್ಮತ್‌ ನಮ್ಮೆ ಕಟ್ಟ್‌  ಬುದ್ದಿತ್.‌  ಪಾಡಿ ನಾಲ್‌ನಾಡ್‌ಕ್‌ ಮಾತ್ರ ಅಡ್ಂಗುವ ಈ ದೇಶಕಟ್ಟ್‌ ಮಾರ್ಚ್‌ 13ನೇ ಬ್ಯಾಳಾಚೆ ಮಜ್ಜಣ, ಮಲ್ಮತ್‌ ಕಟ್ಟ್‌ ಪೊಳಿವ. ಪಂಡೇತ ನಡೆ ನುಡಿಪೋಲೆ […]

Continue Reading

ಕರಾಮಸಾಪ ತಾಲೂಕು ಅಧ್ಯಕ್ಷರುಗಳ ನೇಮಕ

ವಿರಾಜಪೇಟೆ, ಫೆ.24: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ ಕೊಡಗು ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರನ್ನು ನೇಮಕಮಾಡಿ, ಜಿಲ್ಲಾ ಅಧ್ಯಕ್ಷ ಚಾಮೆರ ದಿನೇಶ್‌ ಬೆಳ್ಯಪ್ಪ ಅವರು ಆದೇಶಿಸಿದ್ದಾರೆ.           ಕೊಡಗು ಜಿಲ್ಲೆಯ ಎಲ್ಲಾ ಐದೂ ತಾಲೂಕುಗಳ ಪೈಕಿ, ಮಡಿಕೇರಿ ತಾಲೂಕು ಅಧ್ಯಕ್ಷರಾಗಿ ಪಾಲೇರ ಮಂದಣ್ಣ, ಸೋಮವಾರಪೇಟೆ ತಾಲೂಕು ಅಧ್ಯಕ್ಷರಾಗಿ ಅಪ್ಪುಡ ಸುದೀಶ್‌ಕುಶಾಲಪ್ಪ, ವಿರಾಜಪೇಟೆ ತಾಲೂಕು ಅಧ್ಯಕ್ಷರಾಗಿ ವಿಜಯ್‌ ಪೂಜಾರಿ, ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾಗಿ ಬೊಟ್ಟಂಗಡ ಸುಮನ್‌ ಸೀತಮ್ಮ, ಕುಶಾಲನಗರ ತಾಲೂಕು ಅಧ್ಯಕ್ಷರಾಗಿ ಕು. ಸಿಂಚನ ಸಿ.ಮೋಹನ್‌ ಅವರುಗಳನ್ನು […]

Continue Reading

ನಾಟಿಕೋಳಿ ಮರಿ ವಿತರಿಸಿದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ…

ವಿರಾಜಪೇಟೆ, ಫೆ.24:  ಕರ್ನಾಟಕ ರಾಜ್ಯ ಸರಕಾರದ ಕುಕ್ಕಟ ಮಹಾಮಂಡಳ ವತಿಯಿಂದ ಗ್ರಾಮೀಣ ಮಹಿಳೆಯರಿಗೆ ನಾಟಿ ಕೋಳಿಗಳ ಮರಿ ವಿತರಣೆ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರಾದ ಶ್ರೀ ಎ.ಎಸ್ ಪೊನ್ನಣ್ಣ ರವರು ಭಾಗವಹಿಸಿ. ಆಯ್ದ ಫಲಾನುಭವಿಗಳಿಗೆ ನಾಟಿ ಕೋಳಿ ಮರಿಗಳನ್ನು ವಿತರಿಸಿದರು. ವಿರಾಜಪೇಟೆಯ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾನ್ಯ ಶಾಸಕರು, ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಆ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.  […]

Continue Reading

ಕೊಡಗು ವಿವಿ ಎಂಬ ಜೇನು ಗೂಡಿಗೆ ಕಲ್ಲು ಹಾಕಿದ ಸರ್ಕಾರ…

ಸಂಪಾದಕೀಯ: ಪುರಾಣ ಇತಿಹಾಸದಲ್ಲಿ ದೇಶವಾಗಿದ್ದ ಕೊಡಗು,  ಸ್ವತಂತ್ರ್ಯ ನಂತರವೂ ಪ್ರತ್ಯೇಕ ರಾಜ್ಯವಾಗಿದ್ದು, ಆ ನಂತರದ ಬೆಳವಣಿಗೆಯಲ್ಲಿ ವಿಶಾಲ ಕರ್ನಾಟಕದೊಂದಿಗೆ ವೀಲೀನವಾಗಿ ಕೇವಲ ಒಂದು ಜಿಲ್ಲೆಯಾಗಿ ಉಳಿದಿದೆ.            ಹೀಗೆ  ಕರ್ನಾಟಕದೊಂದಿಗೆ ವಿಲೀನವಾಗುವಾಗ ಕೊಟ್ಟ ಯಾವ ಭರವಸೆಯನ್ನೂ, ಸರ್ಕಾರಗಳು ಅಂದಿನಿಂದ ಇಂದಿನವರೇಗೂ ಈಡೇರಿಸಲಿಲ್ಲ. ಆ ನಿರೀಕ್ಷೆ ಕೂಡ ಮುಂದೆಯೂ ಗಗನ ಕುಸುಮವೇ.  ಅಂದಿನಿಂದ ಇಂದಿನವರೆಗೂ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳೂ ಕೊಡಗನ್ನು ನೋಡಿದ್ದು ಎರಡನೇ ದರ್ಜೆಯ ಪ್ರದೇಶವಾಗಿಯೇ ಹೊರತು, ಕರ್ನಾಟಕದ ಒಂದು ಪ್ರಮುಖ ಭಾಗ ಎಂದು ಪರಿಗಣಿಸಿ ಅಭಿವೃದ್ದಿಗೆ […]

Continue Reading

ಮಾರ್ಚ್‌ 02 ಲಿಂಜ ಕಟ್ಟೆಮಾಡ್ ಶ್ರೀ ಭದ್ರಕಾಳಿ ನಮ್ಮೆ

ಕಟ್ಟೆಮಾಡ್‌, ಫೆ.22: ನೆಲ್ಲಿಪುದಿಕೇರಿ ನಾಡ್‌ಕ್ ಅಡ್ಂಗ್‌ನ ಕಟ್ಟೆಮಾಡ್ ಊರ್‌ರ ಶ್ರೀ ಭಗವತಿ ಭದ್ರಕಾಳಿ ಅಮ್ಮೆರ ಕೇಳಿ ಪೋನ ನಮ್ಮೆ  ಮಾರ್ಚ್ -02 ಲಿಂಜ ಮಾರ್ಚ್ 08-ಕತನೆ  ಕಟ್ಟೆಮಾಡ್‌ಲ್ ಉಳ್ಳ  ಶ್ರೀ  ಭದ್ರಕಾಳಿರ ದೇವನೆಲೆಲ್‌ ನಡ್ಪ. ಫೆ.7-ನೇ ತಾರೀಕ್ ಬಲ್ಯನಮ್ಮೆರ ಮಾರೀಪತ್. ಬೈಟಾಪಕ 4:00 ಗಂಟೆಕ್ ದೇವಡ ಅರಾಟ್ ಬೊಳಕ್  ಇಪ್ಪ. ಪೆರ್ತ್ ಚಾಯೋಡೆ ಭಕ್ತಿ ಭಾವತ್ ನಡ್’ಪ ಈ ನಮ್ಮೆಕ್ ನಿಂಗ ನಿಂಗಡ ಸಂಸಾರ ಸಮೇತ  ಬಂತ್ ನಮ್ಮೆನ ನೋಟಿತ್ ದೇವಡ ಆಶೀರ್ವಾದ ಎಡ್ತಂಡ್  ತೀರ್ಥ ಪ್ರಸಾದತ್’ರ […]

Continue Reading

ಫೆ.24 ರಂದು ಮಡಿಕೇರಿಯಲ್ಲಿ ಉದ್ಯೋಗ ಮೇಳ

ಮಡಿಕೇರಿ ಫೆ.22: – ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಫೆಬ್ರವರಿ 24 ರಂದು ಬೆಳಗ್ಗೆ 10.30 ರಿಂದ ಅಪರಾಹ್ನ 3  ಗಂಟೆವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ‘ಉದ್ಯೋಗ ಮೇಳ’ ನಡೆಯಲಿದೆ.  ಈ ಉದ್ಯೋಗ ಮೇಳದಲ್ಲಿ ಮಡಿಕೇರಿ ತಾಜ್ ರೆಸಾರ್ಟ್, ವಿರಾಜಪೇಟೆ ತಾಮರ ರೆಸಾರ್ಟ್, ಮಡಿಕೇರಿ ಕಲ್ಯಾಣಿ ಮೋಟಾರ್ಸ್, ಪ್ಯಾಲೇಸ್ ಟೊಯೋಟಾ ಕಾರ್ ಶೋ ರೂಮ್ ಕುಶಾಲನಗರ, ಪೆಂಟಾಟೆಕ್ ಮತ್ತು ಕ್ಲಬ್ ಮಹೀಂದ್ರ ರೆಸಾರ್ಟ್ ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಈ ಮೇಳದಲ್ಲಿ […]

Continue Reading

ಕಮಸಾಪ, ಕೊಡಗು ಜಿಲ್ಲಾ ಸಮಿತಿಗೆ ಆಯ್ಕೆ…

ವಿರಾಜಪೇಟೆ, ಫೆ.22: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌, ಕೊಡಗು ಜಿಲ್ಲಾ ಘಟಕಕ್ಕೆ ನೂತನ ಆಡಳಿತ ಮಂಡಳಿಯನ್ನು ರಚಿಸಿ, ಜಿಲ್ಲಾಧ್ಯಕ್ಷ ಚಾಮೆರ ದಿನೇಶ್‌ಬೆಳ್ಯಪ್ಪ ಅವರು ಆದೇಶಿಸಿದ್ದಾರೆ.           ಸಂಘಟನೆಯ ಉಪಾಧ್ಯಕ್ಷರಾಗಿ ಶ್ರೀಮತಿ ಸುಮಿತ್ರ ಸಿ.ಎಸ್.‌, ಪ್ರಧಾನ ಕಾರ್ಯದರ್ಶಿಯಾಗಿ ಕರಿನೆರವಂಡ ಡ್ಯಾನಿ ಕುಶಾಲಪ್ಪ, ಸದಸ್ಯರುಗಳಾಗಿ ಮಲ್ಲಂಡ ಶೃತಿಯಮುದ್ದಪ್ಪ, ಮೀತಲತಂಡ ಇಸ್ಮಾಯಿಲ್‌, ಶರಣುಗೌಡ ಹರಗ, ಕಡೇಮಡ ಸುವಿತ್‌ ಸೋಮಣ್ಣ, ಚೊಕ್ಕಂಡ ನಝೀರ್‌ ಪಾಲಿಬೆಟ್ಟ, ಎಂ.ಬಿ. ವಿನ್ಸೆಂಟ್‌ ವಿನೋದ್‌ ಅವರನ್ನು ಆಯ್ಕೆ ಮಾಡಿದ್ದು ಮುಂದಿನ ದಿನಗಳಲ್ಲಿ ಸಂಘಟನೆಯ ನೇತೃತ್ವದಲ್ಲಿ ಮಕ್ಕಳ  ಸಾಹಿತ್ಯ […]

Continue Reading