Site icon nadubadenews.com

ಭೂ ಕುಸಿತ ಸಂತ್ರಸ್ತರ  ಮನೆ ಹಂಚಿಕೆಗೆ ಅಪಸ್ವರ, ನ್ಯಾಯಾಲಯದ ಕದ ತಟ್ಟಲು ಚಿಂತನೆ…

ಭೂ ಕುಸಿತ ಸಂತ್ರಸ್ತರ  ಮನೆ ಹಂಚಿಕೆಗೆ ಅಪಸ್ವರ, ನ್ಯಾಯಾಲಯದ ಕದ ತಟ್ಟಲು ಚಿಂತನೆ…
Spread the love
ಭೂ ಕುಸಿತ ಸಂತ್ರಸ್ತರ  ಮನೆ ಹಂಚಿಕೆಗೆ ಅಪಸ್ವರ, ನ್ಯಾಯಾಲಯದ ಕದ ತಟ್ಟಲು ಚಿಂತನೆ…

ವಿರಾಜಪೇಟೆ, ಫೆ.28:- ಕೊಡಗು ಜಿಲ್ಲೆಯಲ್ಲಿ  2018ರಲ್ಲಿ ನಡೆದ  ಪೃಕೃತಿ ವಿಕೋಪದಿಂದ ಮನೆ ಕಳೆದು ಕೋಂಡವರಿಗೆ ಸರ್ಕಾರ ಮತು ಹಲವು ಖಾಸಗೀ ಸಂಸ್ಥೆ, ವ್ಯಕ್ತಿಗಳೂ ಮನೆ ಕಟ್ಟಿಸಿ ಕೊಟ್ಟಿದ್ದಾರೆ.  ಈಗಾಗಲೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು 800+ ಮನೆಗಳನ್ನು ಹಂಚಿಕೆ ಮಾಡಿರುವುದಾಗಿ ಜಿಲ್ಲಾಡಳಿತ ಹೇಳಿಕೊಂಡಿದೆ. ಆದರೆ ಈ ಮನೆ ಹಂಚಿಕೆಯಲ್ಲಿ ಹಲವು ನೈಜ ಸಂತ್ರಸ್ತರಿಗೆ ಮನೆ ಸಿಕ್ಕಿಲ್ಲ ಎಂಬ ಅಪಸ್ವರ ಎದ್ದಿದ್ದು, ಕೆಲವರು  ನ್ಯಾಯಾಲಯದ ಮೊರೆ ಹೋಗುವ ಚಿಂತನೆಯಲ್ಲೂ ಇದ್ದಾರೆ ಎಂಬ ಮಾಹಿತಿ ಲಭಿಸಿದೆ.

ಇತ್ತೀಚೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮನೆ ಹಂಚಿಕೆಯಾದ ಸುದ್ದಿ ಆದ ಕೂಡಲೇ, ನೈಜವಾಗಿಯೂ ಸಂತ್ರಸ್ಥರಾದ ಹಲವರು ತಮ್ಮ ಅಸಮಾಧಾನ ಹೊರಹಾಕುತಿದ್ದಾರೆ.  ಒಂದಿಬ್ಬರು ನ್ಯಾಯಾಲಯದ ಮೊರೆ ಹೋಗುವ ಚಿಂತನೆ ಮಾಡಿ, ಕಾನೂನು ತಜ್ಞರೊಂದಿಗೆ ಮಾತುಕತೆ ಮಾಡುತ್ತಿರುವ ಅರಿವು ನಡುಬಾಡೆ ನ್ಯೂಸ್‌ಗೆ ದೊರಕಿದೆ.

ಕೆಲವರು 2018ರಿಂದ 2024ರವರೆಗೂ  ಹಲವು ಭಾರಿ ಅರ್ಜಿ  ಹಾಕಿದ, ಮಡಿಕೇರಿ ಚಾಮುಂಡೇಶ್ವರಿ ನಗಹರದ  ನಿವಾಸಿಯೊಬ್ಬರ ಹೆಸರು, ಈ ಮೊದಲು ಬಿಡುಗಡೆಯಾದ ಪಟ್ಟಿಯಲ್ಲಿ ಇದ್ದರೂ, ಅಂತಿಮವಾಗಿ ಮನೆ ಘೋಷಣೆಯಲ್ಲಿ ಅವರ ಹೆಸರು ಇರಲಿಲ್ಲ, ಆಗಲೋ ಈಗಲೋ ಬೀಳಬಹುದಾದ ಮನೆ  ವಾಸಯೋಗ್ಯವಲ್ಲ ಎಂಬ ವರಧೀಯನ್ನು ಅಧಿಕಾರಿಗಳೇ ನೀಡಿದ್ದು, ಈಗ ಮನೆ ದೊರಕಿಲ್ಲ  ಮುಂದೇನು ಗತಿ ಎಂದು ನೋವು ತೋಡಿಕೊಂಡಿದ್ದಾರೆ.

ಮದೆ ಗ್ರಾಮ ಮಂಚಾಯತಿ, ಜೋಡುಪಾಲದ ವ್ಯಕ್ತಿಯೊಬ್ಬರು 2018ರಲ್ಲಿ ಮನೆ ಕಳೆದುಕೊಂಡು, ಬೇರೆಡೆ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಹಳೇ ಮನೆ ಇದ್ದ ಜಾಗದಲ್ಲಿ ಮರು ಮನೆ ಕಟ್ಟಲು ಯೋಗ್ಯವಲ್ಲ, ಅಲ್ಲಿ ಮನೆ ನಿರ್ಮಾಣ ಮಾಡಬಾರದು ಎಂಬ ಸೂಚನೆಯನ್ನು ಅಧಿಕಾರಿಗಳು ಕೊಟ್ಟಿದ್ದಾರೆ. ಸದರಿ ಸಂತ್ರಸ್ತರು ಜಿಲ್ಲಾಡಳಿತ ಮತ್ತು ಶಾಸಕರು ಸೇರಿದಂತೆ, ಜನಪ್ರತಿನಿಧಿಗಳಿಗೆ ಸಾಕಷ್ಟು ಭಾರಿ ಮನವಿ ಕೊಟ್ಟಿದ್ದಾರೆ. ಇಷ್ಟೂ ವರ್ಷ ಕಛೇರಿಗೆ ಅಲೆದು ಚಪ್ಪಲಿ ಸವೆಯಿತು ಹೊರತು ಮನೆ ದೊರಕಲಿಲ್ಲ, ಇದ್ದ ಜಾಗದಲ್ಲಿ ಮನೆ ಕಟ್ಟಲೂ ಬಿಡುತ್ತಿಲ್ಲ ಎಂದು ಕಂಗಾಲಾಗಿದ್ದಾರೆ.

ಗರ್ವಾಲೆ ಗ್ರಾಮ ಪಂಚಾಯತಿಯ, ಶಿರಂಗಳ್ಳಿ ಗ್ರಾಮದ ಸಂತ್ರಸ್ತರೊಬ್ಬರು ಮನವಿ ಕೊಟ್ಟಾಗ, ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಮನೆಯ ಯಜಮಾನನ ಹೆಸರಿನಲ್ಲಿ ಮನವಿ ಕೊಡಲು ಹೇಳಿದ್ದರು, ನಂತರ ಅವರನ್ನು ಊರು ಬಿಟ್ಟಿದ್ದಾರೆ ಎಂದು ವರಧಿ ಸಲ್ಲಿಸಿದ್ದಾರೆ ಎಂದು ಅವಲತ್ತು ಕೊಂಡಿದ್ದಾರೆ.

ಇದರ ಜೊತೆಗೆ ಹಲವು ಉಳ್ಳವರಿಗೆ ಮನೆ ನೀಡಲಾಗಿದೆ. ಒಂದೇ ಕುಟುಂಬದ ಹಲವರಿಗೂ ಮನೆ ದೊರಕಿದೆ, ಸಂತ್ರಸ್ಥರಲ್ಲದ ಕೆಲ ರಾಜಕೀಯ ಮುಖಂಡರ, ಉನ್ನತ ಜನ ಪ್ರತಿನೀಧಿಗಳ ಆತ್ಮೀಯರೂ ಎಂಬ ಕಾರಣಕ್ಕೂ ಕೆಲವು ಸಂತ್ರಸ್ಥರಲ್ಲದವರಿಗೆ ಮನೆ ನೀಡಲಾಗಿದೆ ಎಂಬ ಗುಸುಗುಸು ಕೇಳಿಬರಿತ್ತಿದೆ.

ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು, ಸಾಮಾಜಿಕ ಕಾರ್ಯಕರ್ತರೊಬ್ಬರು, ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ. ಈ ಕುರಿತು ಅವರು ಕುದ್ದು ಉಪ ವಿಭಾಗಾದಿಕಾರಿಗಳಿಗೆ ತಮ್ಮ ಅಸಮಧಾನವನ್ನು ವಾಟ್ಸಾಪ್‌ ಮೂಲಕ ಹೇಳಿಕೊಂಡಾಗ, ಅದಕ್ಕೆ ವಾಟ್ಸಾಪ್‌ನಲ್ಲಿಯೇ ಸ್ಪಂದಿಸಿರುವ ಎಸಿ ಅವರು, ಕಛೇರಿಗೆ ಬಂದು ಚರ್ಚಿಸುವಂತೆ ಕೋರಿದ್ದು, ಒಂದೆರಡು ದಿಗಳಲ್ಲಿ, ಉಪವಿಭಾಗಾಧೀಕಾರಿಗಳನ್ನು ಭೇಟಿ ಮಾಡಿ, ಅವರ ಸ್ಪಷ್ಟನೆ ನ್ಯಾಯಯುತವಾಗಿ ಇಲ್ಲದಿದ್ದರೆ, ಕೋರ್ಟ್‌ ಮೊರೆ ಹೋಗಿಯೇ ಸಿದ್ದ ಎಂದಿರುವ ಅವರು, ಅಮಾಯಕ ಸಂತ್ರಸ್ಥರ ಪರ ನಾಗರೀಕ ಸಮಾಜ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.

ಈ ಕುರಿತು, ನಡುಬಾಡೆ ನ್ಯೂಸ್‌,  ಮಾನ್ಯ ಉಪ ವಿಭಾಗಾಧಿಕಾರಿ ಕಛೇರಿ ಸಿಬ್ಬಂಧಿಯಿಂದ ಮಾಹಿತಿ ಬಯಸಿದಾಗ, ನೋಡಲ್‌ ಅಧಿಕಾರಿಗಳ ವರದಿಯಂತೆ ಮನೆ ಹಂಚಿಕೆ ಮಾಡಲಾಗಿದೆ, ಸಂತ್ರಸ್ಥರಿಗಾಗಿ ನಿರ್ಮಿಸಿದ್ದ ಮನೆ ಎಲ್ಲಾ ಖಾಲಿ ಆಗಿದೆ, ಏಂಬ ಹಾರಿಕೆ ಉತ್ತರವನ್ನಷ್ಟೇ ನೀಡಿದರು ಹೊರತು, ಯಾವುದೇ ನಿಖರ ಮಾಹಿತಿ ಒದಗಿಸಲಿಲ್ಲ.  

ಒಟ್ಟಿನಲ್ಲಿ ಅಮಾಯಕ ನೈಜ ಸಂತ್ರಸ್ಥರು ಹಲವರು, ಘಟನೆ ನಡೆದು  07 ವರ್ಷಗಳ ನಂತರವೂ, ಇಂದಿಗೂ ಸಂತ್ರಸ್ಥರಾಗಿಯೇ ಉಳಿದಿದ್ದು, ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತೆ,  ಯಾರ್ಯಾರೋ ಮನೆ ಹೊಂದಿಕೊಂಡಿದ್ದಾರೆ ಎಂಣಬ ಆರೋಪ ಕೇಳುತ್ತಿದೆ.

ಇದೀಗ ಕೇವಲ ಮನೆ ಸಂಖ್ಯೆ ಮಾತ್ರ ಹಂಚಿಕೆಯಾಗಿದ್ದು,  ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ  ನೇತೃತ್ವದಲ್ಲಿ ಮನೆಗಳ ಕೀ ವಿತರಿಸುವ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದು, ಆ ಮೊದಲು ಮತ್ತೊಮ್ಮ ಪರಿಶೀಲನೆ ಮಾಡಿ, ನೈಜ ಸಂತ್ರಸ್ಥರಿಗೆ ಅನ್ಯಾಯ ಆಗದಂತೆ ಕ್ರಮ ವಹಿಸಬೇಕಾಗಿದೆ.

ಒಂದು ವೇಳೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದರೆ, ಮತ್ತೊಂದಿಷ್ಟು ವರ್ಷಗಳ ಕಾಲ ಎಳೆದರೆ, ಈಗಾಗಲೆ ಮನೆ ಮಠ ಕಳೆದುಕೊಂಡು ಅಲೆಮಾರಿಳಂತೆ ಬಾಡಿಗೆ ಮನೆಗಳನ್ನು ಮಾಡಿಕೊಂಡು ಅಲೆಯುತ್ತಿರುವ ಸಂತ್ರಸ್ಥರ ಸ್ಥಿತಿ, ಬಾಣಲೆಯಿಂದ ಬೆಂಕಿಗೆ ಎಂಬಂತಾಗುತ್ತದೆ.

ಜನ ಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ‌ ತಕ್ಷಣ ನ್ಯಾಯೋಚಿತ ನಿರ್ಣಯಕ್ಕೆ ಬರಲಿ, ನೈಜ ಸಂತ್ರಸ್ತರಿಗೆ ನ್ಯಾಯ ದೊರಕಲಿ ಎಂಬುದು ನಡುಬಾಡೆ ನ್ಯೂಸ್‌ ಆಶಯ…

Exit mobile version