Site icon nadubadenews.com

ಕಮಸಾಪ, ಕೊಡಗು ಜಿಲ್ಲಾ ಸಮಿತಿಗೆ ಆಯ್ಕೆ…

ಕಮಸಾಪ, ಕೊಡಗು ಜಿಲ್ಲಾ ಸಮಿತಿಗೆ ಆಯ್ಕೆ…
ಕಮಸಾಪ, ಕೊಡಗು ಜಿಲ್ಲಾ ಸಮಿತಿಗೆ ಆಯ್ಕೆ…

ವಿರಾಜಪೇಟೆ, ಫೆ.22: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌, ಕೊಡಗು ಜಿಲ್ಲಾ ಘಟಕಕ್ಕೆ ನೂತನ ಆಡಳಿತ ಮಂಡಳಿಯನ್ನು ರಚಿಸಿ, ಜಿಲ್ಲಾಧ್ಯಕ್ಷ ಚಾಮೆರ ದಿನೇಶ್‌ಬೆಳ್ಯಪ್ಪ ಅವರು ಆದೇಶಿಸಿದ್ದಾರೆ.

          ಸಂಘಟನೆಯ ಉಪಾಧ್ಯಕ್ಷರಾಗಿ ಶ್ರೀಮತಿ ಸುಮಿತ್ರ ಸಿ.ಎಸ್.‌, ಪ್ರಧಾನ ಕಾರ್ಯದರ್ಶಿಯಾಗಿ ಕರಿನೆರವಂಡ ಡ್ಯಾನಿ ಕುಶಾಲಪ್ಪ, ಸದಸ್ಯರುಗಳಾಗಿ ಮಲ್ಲಂಡ ಶೃತಿಯಮುದ್ದಪ್ಪ, ಮೀತಲತಂಡ ಇಸ್ಮಾಯಿಲ್‌, ಶರಣುಗೌಡ ಹರಗ, ಕಡೇಮಡ ಸುವಿತ್‌ ಸೋಮಣ್ಣ, ಚೊಕ್ಕಂಡ ನಝೀರ್‌ ಪಾಲಿಬೆಟ್ಟ, ಎಂ.ಬಿ. ವಿನ್ಸೆಂಟ್‌ ವಿನೋದ್‌ ಅವರನ್ನು ಆಯ್ಕೆ ಮಾಡಿದ್ದು ಮುಂದಿನ ದಿನಗಳಲ್ಲಿ ಸಂಘಟನೆಯ ನೇತೃತ್ವದಲ್ಲಿ ಮಕ್ಕಳ  ಸಾಹಿತ್ಯ ಸಾಂಸ್ಕೃತಿಕ ಬೆಳವಣಿಗೆಗೆ  ಪೂರಕವಾದ ಕಾರ್ಯಚಟುವಟಿಕೆಯೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಚಾಮೆರ ದಿನೇಶ್‌ ಬೆಳ್ಯಪ್ಪ ಹೇಳಿದ್ದಾರೆ.

Exit mobile version