ವಿರಾಜಪೇಟೆಗೇ ಎಲ್ಲಾ, ಮಡಿಕೇರಿಗೆ ಏನೂ ಇಲ್ಲ: ಮಹೇಶ್‌ ತಿಮ್ಮಯ್ಯ

ಇದೊಂದು ತೇಪೆ ಹಚ್ಚುವ  ಬಡ್ಜೆಟ್‌ ಆಗಿದ್ದು, ಜನೋಪಯೋಗಿ ಯಾವುದೇ ಯೋಜನೆಗಳಿಲ್ಲ, ಅದರಲ್ಲೂ ಕೊಡಗಿನ ಪಾಲಿಗೆ ವಿರಾಜಪೇಟೆಗೇ ಅನುದಾನ ಮತ್ತು ಯೋಜನೆಗಳು ಬರುತಿದ್ದು ಮಡಿಕೇರಿ ಕ್ಷೇತ್ರ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗಿದೆ ಎಂದು ಬಿಜೆಪಿ ಯುವಮೋರ್ಚ ಜಿಲ್ಲಾಧ್ಯಕ್ಷ ಮಹೇಶ್‌ತಿಮ್ಮಯ್ಯ ಟೀಕಿಸಿದ್ದಾರೆ.  ಸಿದ್ದರಾಮಯ್ಯ ಅಲ್ಪ ಸಂಕ್ಯಾತರನ್ನು ಓಲೈಸುವ ದಾಖಲೆಯನ್ನು ಸೃಷ್ಟಿಸಿದ್ದು, ಅತಿ ಹೆಚ್ಚು ಸಾಲಮಾಡಿದ ಸಾಧನೆ ಮಾಡಿದ್ದಾರೆ. ಇನ್ನು ಯುವ ನಿಧಿ ಘೋಷಣೆಗೆ ಮಾತ್ರ ಸೀಮಿತವಾಗಿದ್ದು, ಯಾವುದೇ ಅನುದಾನ ಮೀಸಲಿಡದೆ, ಸರ್ಕಾರ ಯುವ ಜನತೆಯನ್ನು ವಂಚಿಸಿದೆ ಎದ ಅವರು,  ಈ ಬಡ್ಜೆಟ್ಟಿನಿಂದ […]

Continue Reading

ಜನಸಾಮಾನ್ಯರ ಬಡ್ಜೆಟ್‌ : ಬಾಚಮಂಡ ಲವ ಚಿಣ್ಣಪ್ಪ

ಇಂದು ಮುಖ್ಯಮಂತ್ರಿಗಳು  ಮಂಡಿಸಿರುವ ಬಡ್ಜೆಟ್‌ ಆಶಾದಾಯಕವಾಗಿದ್ದು, ಸರ್ವತೋಮುಖ ಅಭೀವೃದ್ದಿಗೆ ಪೂರಕವಾಗಿದೆ, ಕೊಡವ ಅಭಿವೃದ್ದಿ ನಿಗಮ, ಕ್ರೀಡಾವಸತಿ ನಿಲಯ ಸೇರಿದಂತೆ ಜಿಲ್ಲೆಗೂ ಸಾಕಷ್ಟು ಅನುದಾನ ನೀಡಿದ್ದು, ಒಟ್ಟಾರೆಯಾಗಿ ಜನ ಸಾಮಾನ್ಯರ ಬಡ್ಜೆಟ್‌ ಆಗಿದೆ ಎಂದು, ಕೊಡಗು ಕೆಡಿಪಿ ಸದಸ್ಯ ಬಾಚಮಂಡ ಲವ ಚಿಣ್ಣಪ್ಪ ಅಭಿಪ್ರಾಯ ಪಟ್ಟಿದ್ದಾರೆ.

Continue Reading

ಕ್ರೀಡಾ ಜಿಲ್ಲೆಗೆ ಪೂರಕ ಕೊಡುಗೆ : ಮಾದಂಡ ತಿಮ್ಮಯ್ಯ

ಕೊಡಗು ಕ್ರೀಡಾ ಜಿಲ್ಲೆ ಎಂಬ ಹೆಗ್ಗಳಿಕೆಗೆ, ರಾಜ್ಯ ಮಾತ್ರ ಅಲ್ಲ ರಾಷ್ಟ್ರ ಮಟ್ಟದಲ್ಲೂ ಭಾಜನವಾಗಿದೆ. ಅದಕ್ಕೆ ಬೆಂಬಲವಾಗಿ ಸರ್ಕಾರ ವಿರಾಜಪೇಟೆಗೆ ಕ್ರೀಡಾ ವಸತಿ ನಿಲಯ ಘೋಷಣೆ ಮಾಡುವ ಮೂಲಕ ಕೊಡುಗೆ ನೀಡಿದೆ ಎಂದು ವಿರಾಜಪೇಟೆ ನಗರ ಕಾಂಗ್ರೇಸ್‌ ಅಧ್ಯಕ್ಷ ಹಾಗೂ ಮಾಜೀ ಅಂತರಾಷ್ಟ್ರೀಯ ರಗಬಿ ಆಟಗಾರ ಮಾದಂಡ ಪಿ. ತಿಮ್ಮಯ್ಯ ಅಭಿಪ್ರಾಯಿಸಿದರು. ಕೊಡವ ಅಭಿವೃದ್ದಿನಿಗಮಕ್ಕೆ ಪೂರಕ ವಾತವಾರಣ ನಿರ್ಮಿಸಿದ್ದು ಕೂಡ, ನಮ್ಮ ಸರ್ವತೋಮುಖ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಕ್ಷೇತ್ರದ ಅಭಿವೃದ್ದಿಗೂ ನಮ್ಮ ಶಾಸಕರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಸಾಕ್ಷಟು […]

Continue Reading

ಅತ್ಯತ್ತಮ ಬಡ್ಜೆಟ್‌, ವಿರೋದಿಸುವ ಮೊದಲು ಪಾಲು ಹಣ ಕೊಡಿಸಿ : ಧರ್ಮಜ ಉತ್ತಪ್ಪ

ನಮ್ಮ ಸರ್ಕಾರ ಕೊಡಗಿಗೆ ಪೂರಕವಾದ ಅನುದಾನ ಮತ್ತು ಯೋಜನೆ ರೂಪಿಸಿದೆ, ವಿರೋಧಪಕ್ಷಗಳು ರಾಜಕೀಯಕ್ಕಾಗಿ ವಿರೋದಿಸುವದ ಬಿಟ್ಟು, ಕೇಂದ್ರದಿಂದ ನಮ್ಮ ಪಾಲಿನ ಅನುದಾನದ ಪಾಲು ತರಿಸಲಿ  ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಹೇಳಿದರು. ಇಂದಿನ ಮುಂಗಡ ಪತ್ರದಲ್ಲಿ, ಜಿಲ್ಲೆಗೆ ಕ್ರೀಡಾ ವಸತಿನಿಲಯ ನೀಡಿರುವುದ ಅತ್ಯತ್ತಮ ಬಳುವಾಳಿಯಾಗಿದೆ, ಅದಲ್ಲದೆ ಕೊಡವ ಪ್ರಾಧಿಕಾರ, ಮೂಲಭೂತ ಸೌಕರ್ಯಕ್ಕೆ ಅನುದಾನ, ವನ್ಯ ಪ್ರಾಣಿಗಳ ನಿಯಂತ್ರಣಕ್ಕೆ ಅನುದಾನ, ನೀರಾವರಿ ಯೋಜನೆಗೆ ಅನುದಾನ ಸೇರಿದಂತೆ ಜಿಲ್ಲೆಗೆ ಪೂರಕವಾದ ಸಾಕ್ಷಷ್ಟು ಯೋಜನೆಗಳು ಇದ್ದು, ಸಂಪೂರ್ಣ ಜನಪರ […]

Continue Reading

ಐನ್‌ಮನೆಗಳಿಗೆ ಪ್ಯಾಕೇಜ್‌ ಕೊಡಬಹುದಿತ್ತು : ಭಾರತೀಶ್

ಈ ಭಾರಿಯ ಬಡ್ಜೆಟ್‌ನಲ್ಲಿ ಸಹಜವಾಗಿ ನಿರೀಕ್ಷೆಗಳಿದ್ದವು, ಅದೂ ಕೊಡಗು ಜಿಲ್ಲೆಗೆ ವಿಷೇಶ ಪ್ಯಾಕೇಜ್‌ ನೀಡುವ ನಿರೀಕ್ಷೆ ಇತ್ತು ಆದ್ರೆ ಸರ್ಕಾರ ಇವೆಲ್ಲವನ್ನೂ ಹುಸಿಗೊಳಿಸಿದೆ ಎಂದು ಬಿ.ಜಿ.ಪಿ ಮಂಗಳೂರು ಪ್ರಭಾರಿ ಬಿ.ಬಿ. ಭಾರತೀಶ್‌ ಹೇಳಿದರು.  ಕೊಡವ ಅಭಿವೃದ್ದಿ ನಿಗಮ ಘೋಷಣೆಯಾಗಿದೆ ಆದರೆ ಅದರ ರೂಪುರೇಶೆಗಳ ಮಾಹಿತಿ ಇಲ್ಲ. ಇದರೊಂದಿಗೆ ಪಾರಂಪರಿಕ ಮತ್ತು ಭಕ್ತಿಯ ತಾಣಗಳಾಗಿರುವ ಕೊಡವ ಐನ್‌ಮನೆಗಳ ಪುನಶ್ಚೇತಕ್ಕೆ ಯೋಜನೆ ಹಾಕಬಹುದಿತ್ತು ಯಾವುದೂ ಸ್ಪಷ್ಟತೆ ಇಲ್ಲ. ವಿರಾಜಪೇಟೆಗೆ ಕ್ರೀಡಾ ವಸತಿ ನಿಲಯ ಸ್ಥಾಪನೆ ಸ್ವಾಗತಾರ್, ಅದು ಬಿಟ್ಟರೆ ಅತಿ […]

Continue Reading

ನಿರೀಕ್ಷೆಗಳು ಹುಸಿ, ಸಾಲದ ಹೊರೆ : ಮಂಡೆಪಂಡ ಸುಜಾ ಕುಶಾಲಪ್ಪ

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಮಂಡಿಸಿರುವ ಈ ವರ್ಷದ ಆಯವ್ಯಯವು ಜನಸಾಮಾನ್ಯರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ವಿಧಾನ ಪರಿಷತ್‌ ಶಾಸಕ ಮಂಡೆಪಂಡ ಸುಜಾಕುಶಾಲಪ್ಪ ಹೇಳಿದ್ದಾರೆ. ಪತ್ರಕಾ ಹೇಳಿಕೆ ನೀಡಿರುವ ಅವರು,  ರೈತರು, ಯುವಕರು, ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಸಮಸ್ಯೆಗಳ ಪರಿಹಾರಕ್ಕೆ ಸ್ಪಷ್ಟವಾದ ಯೋಜನೆಗಳು ಈ ಬಜೆಟ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ರಾಜ್ಯದ ಅಭಿವೃದ್ಧಿಗೆ ಅಗತ್ಯವಾದ ಮೂಲಸೌಕರ್ಯ, ಉದ್ಯೋಗ ಸೃಷ್ಟಿ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೆ ಈ ಬಜೆಟ್‌ನಲ್ಲಿ ಸಾಕಷ್ಟು ಆದ್ಯತೆ ನೀಡಲಾಗಿಲ್ಲ.  ಕೇವಲ ಘೋಷಣೆಗಳ ಮೂಲಕ ಜನರನ್ನು […]

Continue Reading

ಕೊಡವ ಪ್ರಾಧಿಕಾರ ಸಮರ್ಪಕ ಯೋಜನೆಯೊಂದಿಗೆ ಶೀಘ್ರ ಅನುಷ್ಠಾನಕ್ಕೆ : ಅಜ್ಜಿಕುಟ್ಟಿರ ಪೊನ್ನಣ್ಣ

ಕೊಡವ ಅಭಿವೃದ್ದಿ ನಿಗಮದ ರೂಪುರೇಷೆ ಈಗಾಗಲೇ ತಯಾರಿಸಲಾಗುತಿದ್ದು, ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಿದಂತೆ ಸದ್ಯದಲ್ಲೇ ಸರ್ಕಾರಿ ಆದೇಶ ಮಾಡಿ ಅನುಷ್ಟಾನಕ್ಕೆ ತರಲಾಗುವುದು ಎಂದು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಪೊನ್ನಣ್ಣ ಹೇಳಿದರು. ನಡುಬಾಡೆನ್ಯೂಸ್‌ ಜೊತೆ ಧೂರವಾಣಿಯಲ್ಲಿ ಮಾತನಾಡಿದ ಅವರು, ಕೊಡವ ಅಭೀವೃದ್ದಿ ನಿಗ ಆಗಬೇಕು ಎನ್ನುವುದು ನಮ್ಮೆಲ್ಲರ ಆಶಯ, ಇದಕ್ಕೆ ಪೂರಕವಾಗಿ ಸರ್ಕಾರ ಕೂಡ ಯೋಜನೆ ಸಿದ್ದಪಡಿಸುತಿದ್ದು ಅತಿ ಶೀಘ್ರದಲ್ಲೇ ಸೂಕ್ತ ಆದೇಶ ಹೊರಬೀಳಲಿದೆ ಎಂದರು. ಇನ್ನು ಈ ಭಾರಿಯ ಮುಂಗಡ ಪತ್ರವು […]

Continue Reading

ನಮ್ಮ ನಿರೀಕ್ಷೆಯಂತೆ ನಿರಾಶಾದಾಯಕ ಬಡ್ಜೆಟ್‌ : ಮನುಮುತ್ತಪ್ಪ

ರಾಜ್ಯ ಸರ್ಕಾರ ಮಂಡಿಸಿರುವ ಆಯವ್ಯಯವು ನಾವಂದುಕೊಂಡಂತೆ ಠೊಳ್ಳಾಗಿದೆ ಎಂದು ಬಿಜೆ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅಸಮಧಾನ ಹೊರಹಾಕಿದ್ದಾರೆ. ನಡುಬಾಡೆನ್ಯೂಸ್‌ನೊಂದಿಗೆ ಮಾತನಾಡಿದ ಅವರು,  ಕೊಡಗು ಜಿಲ್ಲೆ ಪ್ರಕೃತಿ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿನ ನೈಸರ್ಗಿಕ ಅವಲಂಬನೆಗೆ ಪೂರಕ ಬಡ್ಜೆಟ್‌ ನಿರೀಕ್ಷೆ ಮಾಡಲಾಗಿತ್ತು. ಆದರೆ ಈ ಸರ್ಕಾರ ಕೊಡಿಗೆ ಮೋಸ ಮಾಡಿದೆ. ಕೊಡವ ಅಭಿವೃದ್ದಿ ನಿಗಮ ಸ್ವಾಗತಾರ್ಹವೇ ಆದರೂ, ಇದಕ್ಕೆ ಪೂರಕ ಅನುದಾನ ಮತ್ತಿತರ ಯೋಜನೆಯ ಸ್ಟಷ್ಟತೆ ಇಲ್ಲ. ವಿರಾಜಪೇಟೆಗೆ ಕ್ರೀಡಾ ವಸತಿ ನಿಲಯ ಸ್ವಾಗತಾರ್ಹವೇ. ಆದರೆ, […]

Continue Reading

ಕೊಡಗು ಪೊಲೀಸರಿಗೆ ಸಾರ್ವಜನಿಕ ಸಲಾಂ…

(✍️ ಚಾಮೆರ ದಿನೇಶ್ ಬೊಳ್ಯಪ್ಪ…‌ʼ) ಕೊಡಗು ಜಿಲ್ಲೆ ಶಾಂತಿಯ ಬೀಡು ನಿಜ, ಆದರೆ ಅಷ್ಟೇ ಸೂಕ್ಷ್ಮ ಪ್ರದೇಶವೂ ಹೌದು. ಪ್ರಾದೇಶಿಕವಾಗಿ ವಿಸ್ತೀರ್ಣ ಕಡಿಮೆ ಇದ್ದರೂ ಪ್ರಾಕೃತಿಕವಾಗಿ ವಿಸ್ತಾರ ಅಧಿಕವಿರುವ ವಿಚಿತ್ರ ಸೌಂದರ್ಯದ ಮೇಲ್ಮೈ ಹೊಂದಿರುವ ನಾಡಿದು. ಇಲ್ಲಿ ರಕ್ಷಣಾ ಕಾರ್ಯ ಅಥವಾ ಶೋಧನಾ ಕಾರ್ಯ ಎರಡೂ ಅತ್ಯಂತ ಕ್ಲಿಷ್ಟವೇ. ಆದರೆ ನಮ್ಮ ಪೊಲೀಸ್ ಇಲಾಖೆ ಇವೆರಡನ್ನೂ ಮೆಟ್ಟಿ, ಎಲ್ಲಕ್ಕಿಂತ ನಾವು ಬಲಿಷ್ಟರು ಎನ್ನುವುದನ್ನು, ಮತ್ತೊಮ್ಮೆ ಸಾದಿಸಿ ತೋರಿದ್ದಾರೆ. ಇವರ ಕಾರ್ಯ ಕ್ಷಮತೆ ಮತ್ತು ಸಾಂದರ್ಭಿಕ ಕಾರ್ಯಾಚರಣೆಗೆ ಸಲ್ಯೂಟ್ […]

Continue Reading

ಅಗಲಿದ ಪ್ರಥಮ ಗುರುವಿಗೆ ಅಕ್ಷರತರ್ಪಣ….

          – ಚಾಮೆರ ದಿನೇಶ್‌ಬೆಳ್ಯಪ್ಪ.., ಮನೆಯೆಂಬ ಪಾಠಶಾಲೆಯಿಂದ ಕಲಿಕೆಯೆಡೆಗೆ ಹೆಜ್ಜೆ ಇಟ್ಟಾಗ ದೊರಕುವ ಅಂಗನವಾಡಿ ಎಂಬ ಮೊದಲ ಗುರುಕುಲದಲ್ಲಿನ ಟೀಚರ್‌ ಬಹುಪಾಲು ವಿದ್ಯಾರ್ಥಿಗಳಿಗೆ ಪ್ರಥಮ ಗುರುವಾಗಿರುತಿದ್ದರು. ನನಗೂ ಅಂತಃದೊಂದು ಗುರವಾಗಿ ಸಿಕ್ಕಿ, ತನ್ನ ವೃತ್ತಿಯುದ್ದಕ್ಕೂ, ಆ ನಂತರವೂ ಅತ್ಯಂತ ಪ್ರೀತಿಯಿಂದ, ಕಾಳಜಿಯಿಂದ ಆಶೀರ್ವಾದ ಮಾಡುತ್ತಿದ್ದ ಅತ್ಯಂತ ಗೌರವಾನ್ವಿತ ಟೀಚರ್‌ ನಿನ್ನೆ ತಮ್ಮ ಇಹಲೋಕ ಪ್ರಯಾಣವನ್ನು ಮುಗಿಸಿ, ಭೂಗರ್ಭದ ಒಡಲು ಸೇರಿದರು. ಅವರಿಗಾಗಿ  ಅಕ್ಷರ ಪೋಣಿಸದಿದ್ದರೆ ಕಲಿತ ವಿದ್ಯೆಗೇ ಅವಮಾನ ಮಾಡಿದಂತೆಯೇ ಸರಿ.           ಅದಕ್ಕೂ ಮುನ್ನ […]

Continue Reading