ಗೌಡಳ್ಳಿ ಪ್ಯಾಕ್ಸ್‌ ಅಧ್ಯಕ್ಷರಾಗಿ ಹಿರಿಯ ಸಹಕಾರಿ, ಎಸ್.ಬಿ. ಭರತ್‌ಕುಮಾರ್‌ ಆಯ್ಕೆ.

ಗೌಡಳ್ಳಿ,ಜ.08: (ನವೀನ್ ಅಜ್ಜಳ್ಳಿ) ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ, ಡಿಸಿಸಿ ಬ್ಯಾಂಕ್‌ ಮಾಜೀ ಉಪಾಧ್ಯಕ್ಷರೂ ಆಗಿರುವ ಹಿರಿಯ ಸಹಕಾರಿ, ಎಸ್.ಬಿ. ಭರತ್‌ಕುಮಾರ್ (ಶುಂಠಿ) ಹಾಗೂ ಉಪಾಧ್ಯಕ್ಷರಾಗಿ ರೇಖಾ (ಹೊನ್ನವಳ್ಳಿ ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು, ಸಂಘದ ಆವರಣದಲ್ಲಿ  ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ, ಮುಂದಿನ ಐದು ವರ್ಷಗಳವರೆಗೆ, ಪದಾಧಿಕಾರಿಗಳ ಜೊತೆಗೆ, ನಿರ್ದೇಶಕರುಗಳಾಗಿ ಸುರೇಶ್ HR, ಮೊಗಪ್ಪ, ಶಿವಪ್ರಕಾಶ್, ಹೂವ್ವಯ್ಯ, ನಾಗರಾಜು, ನವೀನ್ ಅಜ್ಜಳ್ಳಿ, ರಕ್ಷಿತ್, ಸುನೀತ, ದಿನೇಶ್, ಗಿರೀಶ್, ಸುರೇಶ್ ಜಿ. ಅವರುಗಳು ಆಯ್ಕೆಯಾದರು.

Continue Reading

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ನಡೆದ ಪೋಷಕ- ಅಧ್ಯಾಪಕರ ಸಭೆ

ವಿರಾಜಪೇಟೆ,ಜ.08: (ಅಮ್ಮಂಡ ಅನುಪಮ ತಿಮ್ಮಯ್ಯ) ಕಾವೇರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆಯಲ್ಲಿ ಪೋಷಕ- ಅಧ್ಯಾಪಕರ ಸಭೆಯನ್ನು ದಿನಾಂಕ 08/01/2025ರ ಬುಧವಾರದಂದು ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದ, ಪ್ರಾಂಶುಪಾಲ ಶ್ರೀ  ಎನ್.ಎಂ ನಾಣಯ್ಯ ಅವರು ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ವಿಕಸನದಲ್ಲಿ ಪೋಷಕರ ಪಾತ್ರ ಮಹತ್ತರವಾದದ್ದು. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಹೆಚ್ಚಿನ ಸಮಯವನ್ನು ಓದಿಗೆ ಮೀಸಲಿಡಬೇಕು, ಜೊತೆಗೆ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಕಿವಿಮಾತಿನೊಂದಿಗೆ, ಕಾಲೇಜಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಹಾಜರಿದ್ದ […]

Continue Reading

ಪ್ರಗತಿ ಸ್ಕೂಲ್‌ ವಿರಾಜಪೇಟೆ, 2025-26ನೇ ಸಾಲಿಗೆ ಪ್ರವೇಶಾತಿ ಆರಂಭ.

ಸುಂದರ ಪರಿಸರ, ಸುಸಜ್ಜಿತ ಕೊಠಡಿಗಳು, ಆಧುನಿಕ ಪಟ್ಯಕ್ರಮ, ನುರಿತ ಬೋಧಕರು, ಹಲವು ಪಟ್ಯೇತರ ಚಟುವಟಿಕೆಗಳು, ಸಾರಿಗೆ ಸೌಲಭ್ಯವರುವ, ವಿರಾಜಪೇಟೆ ಪ್ರಗತಿ ಶಾಲೆಯಲ್ಲಿ LKG ಮತ್ತು 1ನೇ ತರಗತಿ, 2025-26ನೇ ಸಾಲಿಗೆ ಪ್ರವೇಶಾತಿ ಪ್ರಾರಂಭವಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9380297168, prgathischoolvirajpet@gmail.com, www.prgathischoolvirajpet.com

Continue Reading

ಮಲ್ಲಳ್ಳಿ ಪಾಲ್ಸ್‌ ರೋಪ್‌ ವೇ, ಸರ್ಕಾರದ ನಡೆ ಖಂಡನೀಯ: ಬಗ್ಗನ ಅನಿಲ್‌

ಸೋಮವಾರಪೇಟೆ, ಜ.08:        ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ಘೋಷಿಸಿರುವ, ಮಲ್ಲಳ್ಳಿ  ಫಾಲ್ಸ್‌ ಬಹುಕೋಟಿ ರೋಪ್‌ ವೇ ಯೋಜನೆಯನ್ನು ರೈತರು ವಿರೋಧಿಸಬೇಕೆಂದು, ಸಾಮಾಜಿಕ ಕಾರ್ಯಕರ್ತ ಬಗ್ಗನ ಅನಿಲ್‌ ಕರೆ ನೀಡಿದ್ದಾರೆ.             ಪುಷ್ಪಗಿರಿ ವ್ಯಾಪ್ತಿಯಲ್ಲಿ ಬರುವ ಮಲ್ಲಳ್ಳಿ ಜಲಪಾತತ ಸುತ್ತಲ ಗ್ರಾಮಸ್ಥರು, ಸಿ & ಡಿ ಹಕ್ಕುಪತ್ರಕ್ಕಾಗಿ ದಶಕಗಳಿಂದ ಹೋರಾಡುತ್ತಿದ್ದಾರೆ. ರೈತರಿಗೆ ಹಕ್ಕುಪತ್ರ ನೀಡದೆ ಅರಣ್ಯ ಇಲಾಖೆಯಿಂದ ನಿರಂತರ ಕಿರುಕುಳ ನೀಡಲಾಗುತ್ತಿದೆ. ಆದರೆ ಇದೇ ಸಿ & ಡಿ ವ್ಯಾಪ್ತಿಗೆ ಬರುವ ಮಲ್ಲಳ್ಳಿಯಲ್ಲಿ ರೋಪ್‌ವೇ ಮೂಲಕ ಪ್ರವಾಸೋದ್ಯಮದಿಂದ ಹಣಗಳಿಸಲು, ಸರ್ಕಾರ […]

Continue Reading

ಜನವರಿ 11ಲ್‌ ಬೊಳಿಕಾಂಬ ಮುದ್ದಂಡ ಹಾಕಿನಮ್ಮೆರ ಪೆರ್ಂಗುರ್‌ತ್‌

ಹೆಬ್ಬಟ್ಟಗೇರಿ, ಜ.08: ಕೊಡವ ಹಾಕಿ ಅಕಾಡೆಮಿರ ಆದನೆಲ್‌ ನಡ್ಪ 25ನೇ ಕಾಲತ ಮುದ್ದಂಡ ಕಪ್‌ ಹಾಕಿನಮ್ಮೆರ ಪೆರ್ಂಗುರ್‌ತ್‌ ಇದೇ ಜನವರಿ 11ನೇ ಚೆನಿಯಾಚೆ ಪೊಲಾಕ 11 ಘಂಟೆಕ್‌ ಮಡಿಕೇರಿರ ಕಾವೇರಿ ಹಾಲ್‌ ಬಾಡೆಲ್‌ ಬೊಳಿಕ್‌ಕಾಂಬ. ಬಪ್ಪ ಮಾರ್ಚ್‌ 28ಲಿಂಜ ಮೊಳಿಯಾಪ ಕೊಡವ ಹಾಕಿ ನಮ್ಮೆ ಏಪ್ರಿಲ್‌ 27ಕೆತ್ತನೆ ರಂಗ್‌ ರಂಗಾಯಿತ್‌ ನಡ್ಪದುಂಡ್.             ಮುದ್ದಂಡ ಒಕ್ಕ ಪಟ್ಟೆದಾರ  ಮುದ್ದಂಡ ತಿಮ್ಮಯ್ಯ  ಅಯಿಂಗಡ ಕೊರವುಕಾರಿಕೆಲ್‌ ನಡ್ಪ ಆಯಿಮೆಲ್‌, ಕರ್ನಾಟಕ ಮುಖ್ಯಮಂತ್ರಿರ ಕಾನೂನ್‌ ಅರಿವುಕಾರ, ವಿರಾಜಪೇಟೆ ಶಾಸಕ, MCPCS ಮೈಸೂರ್‌ರ […]

Continue Reading

ನದಿ ನೀರು ಮಲೀನಗೊಳಿಸುತಿದ್ದ ಅಸ್ಸಾಂ ಕಾರ್ಮಿಕರು, ದಂಡ ಜಡಿದ ಕಕ್ಕಬ್ಬೆ ಪಂಚಾಯತಿ. ಪರಿಸರ ಪ್ರೇಮಿಗಳ ಮೆಚ್ಚುಗೆ.

            ಕಕ್ಕಬ್ಬೆ,ಜ.08: (ದರ್ಶನ್‌ಸುಬ್ಬಯ್ಯ)  ಕಕ್ಕಬೆ ಪಟ್ಟಣದ ಮುಖ್ಯರಸ್ತೆಯ ಬಳಿಯ ಹೊಳೆಯಲ್ಲಿ ಅಸ್ಸಾಂ ಮನೂಲದ ವಲಸಿಗ ಕಾರಮಿಕರು ಮಲೀನಗೊಳಿಸುತಿದ್ದದನ್ನ ಗಮನಿಸಿದ ಕ್ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯತಿ, ಕಾರ್ಮಿಕರಿಗೆ ದಂಡವಿಧಿಸಿದೆ. ‌             ಅಕ್ರಮವಾಗಿ ನದಿಗಿಳಿದ 8 ಜನ ಅಸ್ಸಾಂ ಕಾರ್ಮಿಕರ ತಂಡ,  ಸ್ನಾನ, ಬಟ್ಟೆ ಒಗೆಯುವುದು, ಮೀನು ಹಿಡಿಯುವುದು, ಪಾತ್ರೆ ತೊಳೆಯುವುದು, ತಲೆ ಕೂದಲುಗಳನ್ನು ಕತ್ತರಿಸಿ ಹೊಳೆಗೆ ಹಾಕುವ ಮೂಲಕ ನದಿಯನನು ಕಲುಷಿತಗೊಳಿಸುತಿದ್ದರು. ಇದನ್ನು ಗಮನಿಸಿದ  ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ, ಸ್ಥಳಕ್ಕೆ ತೆರಳಿ, ಕಾರ್ಮಿಕರನ್ನು […]

Continue Reading

ಸೋಮವಾರಪೇಟೆ ಪಟ್ಟಣ ಪಂಚಾಯತಿ, ಮಳಿಗೆ ಹರಾಜು ಅನುಷ್ಟಾನಕ್ಕೆ ಹೈಕೋರ್ಟ್ ತಡೆಯಾಜ್ಞೆ

‌            ಸೋಮವಾರಪೇಟೆ, ಜ.08: ಇಲ್ಲಿನ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳಿಗೆ ನಡೆದಿದ್ದ ಹರಾಜು ಪ್ರಕ್ರಿಯೆಗೆ ರಾಜ್ಯ ಉಚ್ಚನ್ಯಾಯಾಲಯ ತಡೆಯಾಜ್ಞೆ ನೀಡಿದೆ.             ಇತ್ತೀಜೆಗೆ ನಡೆದಿದ್ದ ಪಟ್ಟಣ ಹರಾಜು ಪ್ರಕೃಇಯೆಯಲ್ಲಿ ವ್ಯಾಪಕ ಅಕ್ರಮ ಎಸಗಲಾಗಿದೆ ಎಂಬ ಆರಫಗಳು ಕೇಳಿ  ಬಂದಿತ್ತು. ಆ ನಂತರ ಪಟ್ಟಣ ಪಂಚಾಯತಿ ಸಾಮನ್ಯ ಸಭೆಯಲ್ಲೂ ವಿಚಾರ ಪ್ರಸ್ತಾಪವಾಗಿ, ಮರು ಈ ಟೆಂಡರ್‌ ಮಾಡಲು, ನಿರ್ಣಯ ಮಾಡಲಾಗಿತ್ತಾದರೂ, ಮತ್ತೇ ಅದೇ ಹರಾಜನ್ನು ಮುಂದುವರೆಸಲಾಗಿತ್ತು. ಇದರಿಂದ ಅಸಮಧಾಘೊಂಡ ವರ್ತಕ ಸೂರಜ್‌ ಗೋಂವಿಂದರಾಜ್‌ ಅವರು ತಮ್ಮ ವಕೀಲರ […]

Continue Reading

ಸರ್ವೇ ಮತ್ತು ನೋಂದಣಿ ಇಲಾಖೆಗಳ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ  ಶಾಸಕ ಡಾ.ಮಂಥರ್‌ ಗೌಡ ಚಾಲನೆ

ಸೋಮವಾರಪೇಟೆ, ಜ.07: (ತೇಲಪಂಡ ಕವನ್‌ ಕಾರ್ಯಪ್ಪ) ತಾಲ್ಲೂಕು ಆಡಳಿತ ಸೌಧದಲ್ಲಿರುವ ಸರ್ವೇ ಮತ್ತು ನೋಂದಣಿ ಇಲಾಖೆಗಳ ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ರಮಕ್ಕೆ ಶಾಸಕ ಡಾ. ಮಂತರ್ ಗೌಡ ಅವರು ಚಾಲನೆ ನೀಡಿದರು.   ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚಿನ ಕಾಲ ಶೀತ ಹವಾಮಾನ ಇರುವುದರಿಂದ ಕಾಗದ ರೂಪದಲ್ಲಿರುವ ಭೂ ದಾಖಲೆಗಳು ನಾಶವಾಗಿವೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣ ಮಾಡುವುದಕ್ಕೆ ಚಾಲನೆ ನೀಡಿದೆ. ನಮ್ಮ ರಾಜ್ಯದ ಸಾಕಷ್ಟು ಭೂ ದಾಖಲೆಗಳು ಇಂದಿಗೂ ತಮಿಳುನಾಡಿನಲ್ಲಿ […]

Continue Reading

ನಂಗಡ ಆಯಿಮೆ ಕೊಯಿಮೆನ ಮಕ್ಕಕ್‌ ಕಾಟಿಕೊಡ್ಪದ್‌ ಪೆರಿಯೈಂಗಡ ಮೇನತ್:‌ ಡಾII ಉಳುವಂಗಡ ಕಾವೇರಿ ಉದಯ

        ಕುಶಾಲನಗರ, ಜ.07: ನಂಗಡ ನಮ್ಮೆ ನಾಳ್‌ ಆಯಿಮೆ ಕೊಯಿಮೆ ಪದ್ದತಿ ಪರಂಪರೆರ ಅರಿವುನ ಮಕ್ಕಕ್‌ ಮಾಡಿಕೊಡ್ಕಂಡಿಯದ್‌, ನಂಗಡ ಮೇನತ್‌ ಪಿಂಞ ಅವಶ್ಯಾಂದ್‌  ಪೆರಿಯ, ಪಲಪಾಜೆ ಸಾಹಿತಿ ಡಾIIಉಳುವಂಗಡ ಕಾವೇರಿಉದಯ ಕೆಮಿ ತಕ್ಕ್‌ ಪರ್ಂದತ್.‌  ಕುಶಾಲನಗರ ಕೊಡವ ಸಮಾಜತ ಆದನೆಲ್‌  ಪುತ್ತರಿ ಊರೋರ್ಮೆ ಕೂಟ, ಕೊಡವ ಸಮಾಜ ಕೊರವುಕಾರ ವಾಂಚೀರ ಮನುನಂಜುಂಡ ಅಯಿಂಗಡ ಕೊರವುಕಾರಿಕೆಲ್‌, 05/01/25ನೇ ನಾರಾಚೆ ಸಮಾಜ ಬಾಡೆಲ್‌  ನಡ್ಂದಲ್ಲಿ,  ಖನಪಟ್ಟ ಬೆಂದುವಾಯಿತ್‌, ಕೂಡಿಯಾಡಿತ್‌ ಅವು ತಕ್ಪರ್ಂದತ್‌.     ಕೊರವುಕಾರ  ವಾಂಚೀರ ಮನು ನಂಜುಂಡ ಅವು ತಕ್ಕ್‌ […]

Continue Reading

ಸಂಪಾದನೆಯ ಒಂದಷ್ಟನ್ನು ಸಮಾಜಸೇವೆಗೆ ಮೀಸಲಿಡೋಣ: ವೈಶಾಲಿ ಕುಡ್ವಾ ಅಭಿಮತ

ಸೋಮವಾರಪೇಟೆ, ಜ,07: (ತೇಲಪಂಡ ಕವನ್‌ ಕಾರ್ಯಪ್ಪ) ಸೇವಾ ಸಂಘಗಳ ಚಟುವಟಿಕೆಗಳಲ್ಲಿ ಹಿರಿಯರ ಮಾರ್ಗದರ್ಶನ ಅಗತ್ಯ ಎಂದು ಇನ್ನರ್ ವ್ಹೀಲ್ ಕ್ಲಬ್‌ನ ಜಿಲ್ಲಾಧ್ಯಕ್ಷೆ ವೈಶಾಲಿ ಕುಡ್ವಾ ಹೇಳಿದರು. ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್‌ʼಗೆ ಭೇಟಿ ಹಿನ್ನೆಲೆಯಲ್ಲಿ ಪಟ್ಟಣದ ಒಕ್ಕಲಿಗರ ಸಂಘದ ಶ್ರೀಗಂಧ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಭಾಗವಹಿಸಿ ಮಾತನಾಡಿದರು. ನಾವು ಸಂಪಾದಿಸಿದ ಹಣದಲ್ಲಿ ಒಂದಷ್ಟು ಭಾಗವನ್ನು ಸಮಾಜಸೇವೆಗೆ ಬಳಸಬೇಕು. ಸಮಾಜಸೇವೆಯಿಂದ ಸಿಗುವ ಸಂತೃಪ್ತಿ ಬೇರೆ ಯಾವುದೇ ವೃತ್ತಿಯಲ್ಲಿ ಸಿಗುವುದಿಲ್ಲ ಎಂದು ಅಭಿಪ್ರಾಯಿಸಿದರು. ಮಹಿಳೆಯರ ಮೇಲೆ ನಡೆಯುವ […]

Continue Reading