Site icon nadubadenews.com

ಗೌಡಳ್ಳಿ ಪ್ಯಾಕ್ಸ್‌ ಅಧ್ಯಕ್ಷರಾಗಿ ಹಿರಿಯ ಸಹಕಾರಿ, ಎಸ್.ಬಿ. ಭರತ್‌ಕುಮಾರ್‌ ಆಯ್ಕೆ.

Spread the love

ಗೌಡಳ್ಳಿ,ಜ.08: (ನವೀನ್ ಅಜ್ಜಳ್ಳಿ) ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ, ಡಿಸಿಸಿ ಬ್ಯಾಂಕ್‌ ಮಾಜೀ ಉಪಾಧ್ಯಕ್ಷರೂ ಆಗಿರುವ ಹಿರಿಯ ಸಹಕಾರಿ, ಎಸ್.ಬಿ. ಭರತ್‌ಕುಮಾರ್ (ಶುಂಠಿ) ಹಾಗೂ ಉಪಾಧ್ಯಕ್ಷರಾಗಿ ರೇಖಾ (ಹೊನ್ನವಳ್ಳಿ ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು, ಸಂಘದ ಆವರಣದಲ್ಲಿ  ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ, ಮುಂದಿನ ಐದು ವರ್ಷಗಳವರೆಗೆ, ಪದಾಧಿಕಾರಿಗಳ ಜೊತೆಗೆ, ನಿರ್ದೇಶಕರುಗಳಾಗಿ ಸುರೇಶ್ HR, ಮೊಗಪ್ಪ, ಶಿವಪ್ರಕಾಶ್, ಹೂವ್ವಯ್ಯ, ನಾಗರಾಜು, ನವೀನ್ ಅಜ್ಜಳ್ಳಿ, ರಕ್ಷಿತ್, ಸುನೀತ, ದಿನೇಶ್, ಗಿರೀಶ್, ಸುರೇಶ್ ಜಿ. ಅವರುಗಳು ಆಯ್ಕೆಯಾದರು.

Exit mobile version