Site icon nadubadenews.com

ನದಿ ನೀರು ಮಲೀನಗೊಳಿಸುತಿದ್ದ ಅಸ್ಸಾಂ ಕಾರ್ಮಿಕರು, ದಂಡ ಜಡಿದ ಕಕ್ಕಬ್ಬೆ ಪಂಚಾಯತಿ. ಪರಿಸರ ಪ್ರೇಮಿಗಳ ಮೆಚ್ಚುಗೆ.

Spread the love
ನದಿ ನೀರು ಮಲೀನಗೊಳಿಸುತಿದ್ದ ಅಸ್ಸಾಂ ಕಾರ್ಮಿಕರು, ದಂಡ ಜಡಿದ ಕಕ್ಕಬ್ಬೆ ಪಂಚಾಯತಿ. ಪರಿಸರ ಪ್ರೇಮಿಗಳ ಮೆಚ್ಚುಗೆ.

            ಕಕ್ಕಬ್ಬೆ,ಜ.08: (ದರ್ಶನ್‌ಸುಬ್ಬಯ್ಯ)  ಕಕ್ಕಬೆ ಪಟ್ಟಣದ ಮುಖ್ಯರಸ್ತೆಯ ಬಳಿಯ ಹೊಳೆಯಲ್ಲಿ ಅಸ್ಸಾಂ ಮನೂಲದ ವಲಸಿಗ ಕಾರಮಿಕರು ಮಲೀನಗೊಳಿಸುತಿದ್ದದನ್ನ ಗಮನಿಸಿದ ಕ್ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯತಿ, ಕಾರ್ಮಿಕರಿಗೆ ದಂಡವಿಧಿಸಿದೆ. ‌

            ಅಕ್ರಮವಾಗಿ ನದಿಗಿಳಿದ 8 ಜನ ಅಸ್ಸಾಂ ಕಾರ್ಮಿಕರ ತಂಡ,  ಸ್ನಾನ, ಬಟ್ಟೆ ಒಗೆಯುವುದು, ಮೀನು ಹಿಡಿಯುವುದು, ಪಾತ್ರೆ ತೊಳೆಯುವುದು, ತಲೆ ಕೂದಲುಗಳನ್ನು ಕತ್ತರಿಸಿ ಹೊಳೆಗೆ ಹಾಕುವ ಮೂಲಕ ನದಿಯನನು ಕಲುಷಿತಗೊಳಿಸುತಿದ್ದರು. ಇದನ್ನು ಗಮನಿಸಿದ  ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ, ಸ್ಥಳಕ್ಕೆ ತೆರಳಿ, ಕಾರ್ಮಿಕರನ್ನು ಪಂಚಾಯಿತಿಗೆ ಕರೆತಂದು, ತಲಾ 1000 ರೂ. ದಂಡ ವಿಧಿಸಿದೆ.

            ಗ್ರಾಮ ಪಂಚಾಯತಿಯ ಉತ್ತಮ ನಡೆಯಾಗಿದ್ದು, ಕೊಡಗಿನೆಲ್ಲೆಡೆ ಯಾರೇ ಪ್ರಕೃತಿಗೆ ಹಾನಿ ಮಾಡುವ  ಸನ್ನಿವೇಶ ಕಂಡುಬಂದಾಗ ಈ  ರೀತಿಯ ನಿರ್ಧಾಕ್ಷಿಣ್ಯ ಕ್ರಮವಾಗಬೇಕೆಂದು ಸಾರ್ವಜನಿಕರು ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ.

Exit mobile version