ಸ್ಕಾಲರ್ಶಿಪ್‌ಗೆ ಅರ್ಜಿ ಆಹ್ವಾನ

ಮಡಿಕೇರಿ ಅ.01; (nadubadenews):-ಪ್ರಸಕ್ತ(2025-26) ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ/ಅರೆ ಅಲೆಮಾರಿ ಪ್ರವರ್ಗ-1 ವಿದ್ಯಾರ್ಥಿಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ “ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ” ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್,30 ಕೊನೆಯ ದಿನವಾಗಿದೆ.ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವೆಬ್‍ಸೈಟ್ ವಿಳಾsಸ https://ssp.postmatric.karnataka.gov.in ಕಾರ್ಯಕ್ರಮಗಳ ವಿವರ, ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆ, […]

Continue Reading

ವಿರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿ ನಾಯಕರ ಆಯ್ಕೆ

ವಿರಾಜಪೇಟೆ, ಅ.01;(nadubadenews): ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ 2025-26 ನೇ ಸಾಲಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ  , ಪ್ರಧಾನ ಕಾರ್ಯದರ್ಶಿಯಾಗಿ ಕುಮಾರಿ ಚೈತ್ರ ಬಿ.ಎಸ್, ಜಂಟಿ ಕಾರ್ಯದರ್ಶಿಗಳಾಗಿ ಆದಿತ್ಯ ಹೆಚ್. ಎನ್. ಹಾಗೂ ಕಾವ್ಯ ಕೆ. ಎಸ್. ಕ್ರೀಡಾ ಕಾರ್ಯದರ್ಶಿಯಾಗಿ  ಪುನೀತ್ ಪಿ. ಎಂ. ಮತ್ತು  ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ  ಅಮೂಲ್ಯ ಟಿ. ಎಸ್. ಆಯ್ಕೆಯಾಗಿರುತ್ತಾರೆ.  ದಿನಾಂಕ  31ರಂದು ಕಾಲೇಜು ನಾಯಕರು ಮತ್ತು  ತರಗತಿ ಪ್ರತಿನಿಧಿಗಳ ಚುನಾವಣೆಯನ್ನು ನಡೆಸಲಾಯಿತು. ಕಲಾ, ವಾಣಿಜ್ಯ,ವಿಜ್ಞಾನ ವಿಭಾಗದಿಂದ ತಲಾ ಇಬ್ಬರು ವಿದ್ಯಾರ್ಥಿಗಳು  […]

Continue Reading

SJM ಕೌನ್ಸಿಲ್ ;ಕೊಡಗು ಜಿಲ್ಲಾಧ್ಯಕ್ಷರಾಗಿ ಅಬ್ದುಲ್ಲ ಸಖಾಫಿ ಕೊಳಕೇರಿ

ಕಿಕ್ಕೆರೆ; ಜು.31;(nadubadenews):   ಕರ್ನಾಟಕ ರಾಜ್ಯ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ (ರಿ) ಕೊಡಗು ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆ ಜುಲೈ 30ರಂದು ಕಿಕ್ಕರೆ‌ ಇರ್ಷಾದುಲ್ ಇಸ್ಲಾಂ ಮದ್ರಸ ಹಾಲ್ ನಲ್ಲಿ ಜರಗಿತು. ಕರ್ನಾಟಕ ಸುನ್ನಿ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿಗಳೂ ಕೊಡಗು ಜಿಲ್ಲಾ ನಾಇಬ್ ಖಾಝಿಗಳಾಗಿದ್ದ ಶೈಖುನಾ ಮಹ್ಮೂದ್ ಉಸ್ತಾದರ ಝಿಯಾರತ್ ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. SJM ಕೊಡಗು ಜಿಲ್ಲಾಧ್ಯಕ್ಷ ಮುಸ್ತಫ ಸಖಾಫಿ ರವರ ಅಧ್ಯಕ್ಷತೆಯಲ್ಲಿ ರಾಜ್ಯಾಧ್ಯಕ್ಷರಾದ ಅಬ್ದುರ್ರಹ್ಮಾನ್ ಮದನಿ ಜೆಪ್ಪು ಕೌನ್ಸಿಲ್ ಉದ್ಘಾಟಿಸಿದರು. ರಾಜ್ಯ SJM […]

Continue Reading

ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾಗಿ ವಿನೋದ್‌ ಮೂಡಗದ್ದೆ

ಪೊನ್ನಂಪೇಟೆ; ಜು.31;(nadubadenews):  ಕರ್ನಾಟಕ ರಾಜ್ಯ ಮಕ್ಕಳಸಾಹಿತ್ಯ ಪರಿಷತ್‌ ಕೊಡಗು ಜಿಲ್ಲಾಘಟಕದ ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾಗಿ ಯುವ ಸಾಹಿತಿ ವಿನೋದ್‌ ಮೂಡಗದ್ದೆ ಅವರನ್ನು ಆಯ್ಕೆಮಾಡಲಾಗಿದೆ.           ಹಾಲಿ ಅಧ್ಯಕ್ಷೆಯಾಗಿದ್ದ ಬೊಳ್ಳೆರ ಸುಮನ್‌ ಸೀತಮ್ಮ ಅವರ ಆರೋಗ್ಯ ಮತ್ತು ವಯುಕ್ತಿಕ ಕಾರಣಕ್ಕಾಗಿ ಅಧ್ಯಕ್ಷ ಸ್ಥಾನ ತೊರೆದಿದ್ದು, ಸದಸ್ಯರಾಗಿ ಮುಂದುವರೆಯಲಿದ್ದಾರೆ. ತೆರವಾದ ಸ್ಥಾನಕ್ಕೆ ವಿನೋದ್‌ ಮೂಡಗದ್ದೆ ಅವರಮನ್ನು ನೇಮಕಮಾಡಿ ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್‌ಬೆಳ್ಯಪ್ಪ ಅವರು ಆದೇಶಿಸಿದ್ದಾರೆ.

Continue Reading

ಸಬ್‌ ಜೂನಿಯರ್‌ ಹಾಕಿಗೆ  ಮಂಡೆಪಂಡ ಕಾಳಪ್ಪ ಆಯ್ಕೆ

ಅಮ್ಮತ್ತಿ, ಜು.31;(nadubadenews):ತಮಿಳುನಾಡಿನ ಚೆನ್ನೈನಲ್ಲಿ, ಜುಲೈ ಇಪ್ಪತೆಂಟರಿಂದ, ಅಗಷ್ಟ್‌ ಎಂಟರವರೆಗೆ  ನಡೆಯುವ 15ನೇ ಸಬ್‌ ಜೂನಿಯರ್‌ ರಾಷ್ಟ್ರೀಯ ಹಾಕಿ ಪಂದ್ಯಾವಳಿಗೆ  ಕರ್ನಾಟಕ ತಂಡದ ಪರ ಆಡಲು ಮಂಡೆಪಂಡ ಕಾಳಪ್ಪ ಆಯ್ಕೆ ಆಗಿದ್ದಾರೆ.              ಕರ್ನಾಟಕ ತಂಡಕ್ಕೆ ಕೊಡಗಿನಿಂದ ಆಯ್ಕೆಯಾದ ಏಕೈಕ ಆಟಗಾರನಾಗಿರುವ ಮಂಡೆಪಂಡ ಕಾಳಪ್ಪ, ಅಮ್ಮತ್ತಿ ಕಾವಡಿ ಗ್ರಾಮದ ಮಂಡೆಪಂಡ ಲವಚಂಗಪ್ಪ, ಸಬಿತ(ತಾಮನೆ; ಮಾಣಿಪಂಡ) ದಂಪತಿಗಳ ಪುತ್ರ.

Continue Reading

ಮಡಿಕೇರಿ ಕೊಡವ ಸಮಾಜತ್‌ ಕಕ್ಕಡ ಒತ್ತೋರ್ಮೆ ಕೂಟ; ಮತ್ಯಾಂದ್‌ ನಾರಾಚೆ

ಮಡಿಕೇರಿ, ಜು.31;(nadubadenews): ಮಡಿಕೇರಿ ಕೊಡವ ಸಮಾಜ , ಪೊಮ್ಮಕ್ಕಡ ಕೂಟ ಪಿಂಞ ಕೊಡವ ಸಮಾಜಕ್‌ ಅಡಂಗಿತುಳ್ಳ ಎಲ್ಲಾ ಕೇರಿಯಡ ಕೂಡ್‌ ಕೂಟಾದನೆಲ್‌, ಕಕ್ಕಡ 18ರ ಮಾರೀಪತ್‌ ಒತ್ತೋರ್ಮೆ ಕೂಟ, ಅಗಷ್ಟ್‌ 03ನೇ ನಾರಾಚೆ ಮಡಿಖೇರಿ ಕೊಡವ ಸಮಾಜ ಬಾಡೆಲ್‌ ನಡ್ಪ. ಅಂದ್‌  ಪೊಲಾಕ 10ಘಂಟೆಕ್‌, ಸಮಾಜ ಕೊರವುಕಾರ ಮಂಡುವಂಡ ಮುತ್ತಪ್ಪ ಅಯಿಂಗಡ ಕೊರವುಕಾರಿಕೆಲ್‌, ಪೊಮ್ಮಕ್ಕಡ ಕೂಟತ ಕೊರವುಕಾರಿ ಕನ್ನಂಡ ಕವಿತ ಬೊಳ್ಳಪ್ಪ ಅಯಿಂಗಡ ಮೇಲ್ಮಾನಿಕೆಲ್‌  ಶುರುವಾಪ ಆಯಿಮೆಕ್‌, ಮುಖ್ಯ  ಮಂತ್ರಿರ ಕಾನೂನ್‌ ಅರಿವುಕಾರ ಪಿಂಞ ವಿರಾಜಪೇಟೆ ಶಾಸಕ […]

Continue Reading

ಮನೆಗಾಗಿ ಡಿಸಿ ಕಾಲಿಗೆ ಬಿದ್ದ ವಿಧವೆ; ನಿರ್ಗತಿಕರ ಶಾಪ ಒಳ್ಳೆದಲ್ಲಾ…

ಮಡಿಕೇರಿ, ಜು.31;(nadubadenews):  ಮಡಿಕೇರಿ ನಗರದ ನಿವಾಸಿ ರತ್ಮಮ್ಮ ಎನ್ನುವ ವಿದವೆಯೊಬ್ಬರು ಇರಲೊಂದು ಮನೆಕೊಡಿ ಎಂದು ಅಂಗಾಲಚುತ್ತಾ ಜಿಲ್ಲಾಧಿಕಾರಿಗಳ ಕಾಲಿಗೆ ಬಿದ್ದು ಅಂಗಲಾಚಿದ ಕರಣಾಜನಕ ಸನ್ನಿವೇಶ ವ್ವಸ್ಥೆಯನ್ನೇ ಅಣಕಿಸುವಂತಿತ್ತು.           ಕೊಡಗು ಜಿಲ್ಲಾಧಿಕಾರಿಗಳ ಕಛೇರಿ ಎದುರಿನ ತಡೆಗೋಡೆ ಕುಸಿಯುವ ಹಂತದಲ್ಲಿದ್ದು, ಇದರ ವೀಕ್ಷಣೆಗಾಗಿ ಜಿಲ್ಲಾಧಿಕಾರಿಗಳು ತೆರಳಿದ್ದಾಗ, ನಗರದ ನಿವಾಸಿಯಾಗಿರುವ ರತ್ಮಮ್ಮ ಎನ್ನುವ ವಿದವೆ ಮಹಿಳೆಯೋರ್ವರು, ಬಿಕ್ಕಳಿಸಿ ಅಳುತ್ತಾ ನನಗೊಂದು ಮನೆಕೊಡಿ ಸರ್‌, ಗಂಡನೂ ಇಲ್ಲ ಮಕ್ಕಳನ್ನು ಕಟ್ಟಿಕೊಂಡು ಬಾಳುತ್ತಿದ್ದೇನೆ, ಇರುವ ಮನೆಗೆ ಮಣ್ಣು ಬೀಳುತ್ತಿದೆ, ಯಾವಾಗ ಕುಸಿಯುತ್ತೋ ಗೊತ್ತಿಲ್ಲ […]

Continue Reading

ಅಲುಗಾಡುತ್ತಿದೆ ಕೊಡಗು ಜಿಲ್ಲಾಧಿಕಾರಿ ಕಛೇರಿ ಬುಡ; ಶಾಶ್ವತ ಪರಿಹಾರ ಎಂದೆನ್ನುವುದೇ ನಿಘೂಡ

ಮಡಿಕೇರಿ, ಜು.31;(nadubadenews): ಕೊಡಗಿನ ಆಡಳಿತ ಸೌಧ, ಜಿಲ್ಲಾಡಳಿತಭವನದ ರಕ್ಷಣೆಗಾಗಿ ನಿರ್ಮಿಸಿದ್ದ, ಬಹುಕೋಟಿ ವೆಚ್ಚದ ತಡೆಗೋಡೆ ಕುಸಿಯುವ ಭೀತಿ ಎದುರಾಗಿದ್ದು, ಕೆಳಭಾಗದ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.            ಒಂದು ಕಾಲದಲ್ಲಿ ರಾಜ್ಯಾದ್ಯಂತ ಸುದ್ದಿಯಾಗಿದ್ದ, ಕಳೆದ ವಿಧಾನ ಸಭಾ ಚುನಾವಣೆ ಸಮಯದಲ್ಲಿ ಬಹುದೊಡ್ಡ ಪ್ರಚಾರದ ಸರಕಾಗಿದ್ದ, ಕೊಡಗು ಜಿಲ್ಲಾಡಳಿತ ಭವನದ ಎದುರಿನ ಮಂಗಳೂರು ಹೆದ್ದಾರಿಗೆ ಹೊಂದಿಕೊಂಡಿರುವ, ಜರ್ಮನ್ ಟೆಕ್ನಾಲಜಿಯಡಿ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ, ತಡೆಗೋಡೆಯು ಕುಸಿಯುವ ಭೀತಿ ಎದುರಾಗಿದ್ದು, ನಿರ್ಮಾಣವಾದಂದಿನಿಂದ ಇಂದಿನವರೆಗೂ ಕಟ್ಟಡದ ರಕ್ಷಣೆಗೆ ನಿರ್ಮಾಣಗೊಂಡ ತಡೆಗೋಡೆ ತನಗೇ ರಕ್ಷಣೆಯಿಲ್ಲದೆ ಪರಿತಪಿಸುತ್ತಿದೆ. […]

Continue Reading

ಸುರಕ್ಷಿತವಾಗಿದ್ದೇನೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಸ್ಪಷ್ಟನೆ

ನಾಪೋಕ್,ಜು.30; (nadubadenews):   ಕೊಡಗು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರು ಪ್ರಯಾಣಿಸುತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಯಾವುದೇ  ಅಪಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.           ನಡುಬಾಡೆಯೊಂದಿಗೆ  ದೂರವಾಣಿಯಲ್ಲಿ ಮಾತನಾಡಿದ ದರ್ಮಜ ಉತ್ತಪ್ಪ ಅವರು, ತಾವು ಪ್ರಯಾಣಿಸುತಿದ್ದ ಕಾರಿಗೂ  ಎದುರಿನಿಂದ ಬಂದ ಮಾರುತಿ 800 ಕಾರಿಗೂ, ವಿರಾಜಪೇಟೆ ಕಾವೇರಿ ಕಾಲೇಜು ಬಳಿ ಅಪಘಾತ ನಡೆದಿದ್ದು, ಯಾವುದೇ ಅಪಾಯವಾಗಿಲ್ಲ, ಆದರೆ ಎರಡೂ ಕಾರುಗಳು ಜಕಂಗೊಡಿವೆ ಎಂದು ಹೇಳಿದ್ದಾರೆ.

Continue Reading

 ನಾಪೋಕ್‌ ಕೊಡವ ಸಮಾಜ ಪೊಮ್ಮಕ್ಕಡ ಕೂಟತ ತೀನಿ ನಮ್ಮೆ ಕಕ್ಕಡ 18ಕ್‌

ನಾಪೋಕ್,ಜು.30; (nadubadenews):   ನಾಪೋಕ್‌ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್‌ರ ಆದನೆಲ್‌  ತೀನಿ ಪೈಪೋಟಿ ಪಿಂಞ ಆಯಿಮೆ ಕಕ್ಕಡ 18ನೇ ಅಗಷ್ಟ್‌ 03ಲ್‌  ಸಮಾಜತ ಅಪ್ಪನೆರವಂಡ ಅಪ್ಪಚ್ಚ ಕವಿ  ಬಾಡೆಲ್‌ ನಡ್ಪ.           ಅಂದ್‌ ಪೊಲಾಕ 1ಘಂಟೆಕ್‌ ಮೊಳಿಯಾಪ ಆಯಮೆ, ಬಾಳೆಯಡ ನಿಶಾಮೇದಪ್ಪ ಕೊರವುಕಾರಿ ನಾಪೋಕ್‌ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್‌ ಅಯಿಂಗಡ ಕೊರವುಕಾರಿಕೆಲ್‌,‌ ಕಾಫಿಬೊಳೆಕಾರ್ತಿ ಬಿದ್ದಾಟಂಡ ಸುಮನ್‌ ಪ್ರದೀಪ್ ಅವು ಮೊಳಿ ಇಟ್ಟಕ, ತೀನಿರ ಆಯಿಮೆಕ್‌ ಮಣವಟ್ಟಿರ ಕಮಲ ಬೆಳ್ಯಪ್ಪ, ಮಾಜಿಕೊರವುಕಾರಿ ನೆಲಜಿ ಪೊಮ್ಮಕ್ಕಡ ಸಂಘ ಅವು […]

Continue Reading