
ನಾಪೋಕ್,ಜು.30; (nadubadenews): ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರು ಪ್ರಯಾಣಿಸುತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಯಾವುದೇ ಅಪಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಡುಬಾಡೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ದರ್ಮಜ ಉತ್ತಪ್ಪ ಅವರು, ತಾವು ಪ್ರಯಾಣಿಸುತಿದ್ದ ಕಾರಿಗೂ ಎದುರಿನಿಂದ ಬಂದ ಮಾರುತಿ 800 ಕಾರಿಗೂ, ವಿರಾಜಪೇಟೆ ಕಾವೇರಿ ಕಾಲೇಜು ಬಳಿ ಅಪಘಾತ ನಡೆದಿದ್ದು, ಯಾವುದೇ ಅಪಾಯವಾಗಿಲ್ಲ, ಆದರೆ ಎರಡೂ ಕಾರುಗಳು ಜಕಂಗೊಡಿವೆ ಎಂದು ಹೇಳಿದ್ದಾರೆ.