ಮಡಿಕೇರಿ, ಜು.31;(nadubadenews): ಮಡಿಕೇರಿ ನಗರದ ನಿವಾಸಿ ರತ್ಮಮ್ಮ ಎನ್ನುವ ವಿದವೆಯೊಬ್ಬರು ಇರಲೊಂದು ಮನೆಕೊಡಿ ಎಂದು ಅಂಗಾಲಚುತ್ತಾ ಜಿಲ್ಲಾಧಿಕಾರಿಗಳ ಕಾಲಿಗೆ ಬಿದ್ದು ಅಂಗಲಾಚಿದ ಕರಣಾಜನಕ ಸನ್ನಿವೇಶ ವ್ವಸ್ಥೆಯನ್ನೇ ಅಣಕಿಸುವಂತಿತ್ತು.
ಕೊಡಗು ಜಿಲ್ಲಾಧಿಕಾರಿಗಳ ಕಛೇರಿ ಎದುರಿನ ತಡೆಗೋಡೆ ಕುಸಿಯುವ ಹಂತದಲ್ಲಿದ್ದು, ಇದರ ವೀಕ್ಷಣೆಗಾಗಿ ಜಿಲ್ಲಾಧಿಕಾರಿಗಳು ತೆರಳಿದ್ದಾಗ, ನಗರದ ನಿವಾಸಿಯಾಗಿರುವ ರತ್ಮಮ್ಮ ಎನ್ನುವ ವಿದವೆ ಮಹಿಳೆಯೋರ್ವರು, ಬಿಕ್ಕಳಿಸಿ ಅಳುತ್ತಾ ನನಗೊಂದು ಮನೆಕೊಡಿ ಸರ್, ಗಂಡನೂ ಇಲ್ಲ ಮಕ್ಕಳನ್ನು ಕಟ್ಟಿಕೊಂಡು ಬಾಳುತ್ತಿದ್ದೇನೆ, ಇರುವ ಮನೆಗೆ ಮಣ್ಣು ಬೀಳುತ್ತಿದೆ, ಯಾವಾಗ ಕುಸಿಯುತ್ತೋ ಗೊತ್ತಿಲ್ಲ ಎಂದು ಜಿಲ್ಲಾಧಿಕಾರಿಗಳ ಕಾಲಿಗೇರಗಿ ಬೇಡಿಕೊಂಡರು. ಮಡಿಕೇರಿ ನಗರ ಸಭೆಗೆ ಕಳೆದ ಐದು ವರ್ಷಗಳಿಂದ ಅರ್ಜಿ ಹಿಡಿದು ಅಲೆಯುತಿದ್ದೇನೆ ಆದರೆ ಮನೆ ಮಂಜೂರು ಮಾಡಲಿಲ್ಲ ಎಂದು ಅವಲತ್ತುಕೊಂಡರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಮನೆ ನಿರ್ಮಿಸಿ ಕೊಡುವ ಭರವಸೆಯನ್ನೇನೋ ನೀಡಿದರು.
ಐದು ವರ್ಷಗಳ ಹಿಂದೆ ನೆರೆಯ ನೆಪದಲ್ಲಿ ನಿರ್ಮಾಣಗೊಂಡ ನೂರಾರು ಮನೆಗಳನ್ನು ಹಲವು ಅನುಕೂಲಸ್ಥರು ಪಡೆದುಕೊಂಡು ಬೀಗುತ್ತಿರುವಾಗ, ನಿರ್ಗತಿಕರು ಬೀದಿಯಲ್ಲಿ ನಿಂತು ಹೀಗೆ ಬೇಡುವ ಪರಿಸ್ಥಿತಿಗೆ ತಂದ ನಮ್ಮ ವ್ಯವಸ್ಥೆಗೆ ಮತ್ತು ಇದ್ದೂ ಇಲ್ಲದವರಂತೆ ಬಡವರ ಸವಲತ್ತುಗಳನ್ನು ಕಿತ್ತುಕೊಳ್ಳುವವರಿಗೆ, ನೊಂದವರ ಶಾಪ ತಟ್ಟದೆ ಇರುವುದೇ….