ಆಪರೇಷನ್​ ಸಿಂಧೂರ್​ ಸಂಭ್ರಮ, ಮುಜರಾಯಿ ದೇಗುಲಗಳಲ್ಲಿ ಪೂಜೆ ಸಲ್ಲಿಸಲು ಸೂಚನೆ…

    ಬೆಂಗಳೂರು, ಮೇ.07 (ನಡುಬಾಡೆ ನ್ಯೂಸ್): ಪಹಲ್ಗಾಮ್‌ನ ಉಗ್ರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಭಯೋತ್ಪಾದಕರ ನೆಲೆಗಳ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾಚರಣೆಗೆ ರಾಷ್ಟ್ರಾದ್ಯಂತ ಸಂಭ್ರಮ ಮತ್ತು ಶ್ಲಾಘನೆ ವ್ಯಕ್ತವಾಗಿದ್ದು, ಅನೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗಿದೆ. ಸಚಿವ ರಾಮಲಿಂಗಾರೆಡ್ಡಿ ಅವರು ರಾಜ್ಯದ ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲು ಸೂಚನೆ ನೀಡಿದ್ದಾರೆ. ಭಾರತೀಯ ಸೇನೆಯ ಧೈರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.     ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ […]

Continue Reading

ನಾಳೆ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ…

    ಮಡಿಕೇರಿ ಮೇ.07(ನಡುಬಾಡೆ ನ್ಯೂಸ್):  2025 ರ ಏಪ್ರಿಲ್, 22 ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ದಾಳಿಗೆ ಪ್ರತ್ಯುತ್ತರವಾಗಿ ಮೇ, 7 ರಂದು ಮುಂಜಾನೆ  ಭಾರತವು ಪಾಕ್  ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ ಆಪರೇಷನ್ ‘ಸಿಂಧೂರ್’ ಹೆಸರಿನಲ್ಲಿ ಸೇನಾ ಕಾರ್ಯಚರಣೆಯನ್ನು ಯಶಸ್ವಿಯಾಗಿ ನಡೆಸಿದೆ.     ಆದ್ದರಿಂದ ಕರ್ನಾಟಕ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರ ನಿರ್ದೇಶದಂತೆ ರಾಜ್ಯದ ಮುಜರಾಯಿ ಇಲಾಖೆಯ ಎಲ್ಲಾ ದೇವಾಲಯಗಳಲ್ಲಿ ಭಾರತೀಯ ಸೇನೆಯ ಹೆಸರಿನಲ್ಲಿ ಹಾಗೂ ಭಾರತೀಯ ಯೋಧರಿಗೆ ಒಳಿತಾಗಲಿ […]

Continue Reading

   ಸಿದ್ದಾಪುರ ಸುತ್ತಮುತ್ತ ವಿದ್ಯುತ್‌ ವ್ಯತ್ಯಯ…

  ಸಿದ್ದಾಪುರ, ಮೇ.07(ನಡುಬಾಡೆ ನ್ಯೂಸ್):‌ ಸಿದ್ದಾಪುರ 33/11 ಕೆ.ವಿ ವಿದ್ಯುತ್ ಉಪ ಕೇಂದ್ರದಲ್ಲಿ ಹೆಚ್ಚುವರಿ ಶಕ್ತಿ ಪರಿವರ್ತಕವನ್ನು ಅಳವಡಿಸುವ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಈ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ ಮಾರ್ಗದಲ್ಲಿ ಮೇ, 09 ರ ಶುಕ್ರವಾರದಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಸಿದ್ದಾಪುರ ಶಾಖಾ ವ್ಯಾಪ್ತಿಯ, ಸಿದ್ದಾಪುರ, ಕರಡಿಗೋಡು, ಕೂಡುಗದ್ದೆ, ಗುಹ್ಯ, ಮೇಕೂರು, ಮಾಲ್ದಾರೆ, ಇಂಜಿಲಗೆರೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ […]

Continue Reading

ಕನ್ನಡ ಸಾರಸ್ಪತ ಲೋಕ ಒಂದು ಅದ್ಭುತ ಚೇತನವನ್ನು ಕಳೆದುಕೊಂಡಿದೆ-  ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂತಾಪ…  

ಮಡಿಕೇರಿ, ಮೇ 07 (ನಡುಬಾಡೆ ನ್ಯೂಸ್):‌ ಕನ್ನಡ ನಾಡಿನ ಹಿರಿಯ ಸಾಹಿತಿ.ವಿಮರ್ಶಕರು. ಕವಿ ಚಿಂತಕರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿದ್ದ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ ಅವರು ನಿಧನರಾಗಿರುವುದು ದುಖಃವನ್ನುಂಟು ಮಾಡಿದೆ.                                                                  ಸಾಂಸ್ಕೃತಿಕ ಜಗತ್ತಿಗೆ ಕವಿ ಜಿ ಎಸ್ ಸಿದ್ದಲಿಂಗಯ್ಯ ಅವರ ಕೊಡುಗೆ ಗಮನಾರ್ಹವಾದದ್ದು. ಕನ್ನಡ ಸಾಹಿತ್ಯ ಪರಿಷತ್ತಿನ 17ನೇ ಅಧ್ಯಕ್ಷರಾಗಿ ಅವರು ಕೈಗೊಂಡ ಕೆಲಸಗಳು ಕನ್ನಡ ಸಾಹಿತ್ಯ ಪರಿಷತ್ತನ್ನು ಸದೃಢವಾಗಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಸಾಹಿತ್ಯ ಪರಿಷತ್ತಿಗೆ ಒಂದು ನಿರ್ದಿಷ್ಟ ಧ್ವಜವನ್ನು ರೂಪಿಸುವಲ್ಲಿ ಅವರ ಪಾತ್ರ ಮಹತ್ವದ್ದು.ಆಡಳಿತಾತ್ಮಕವಾಗಿ, […]

Continue Reading

ಮೂರ್ನಾಡ್  ಕೊಡವ ಸಮಾಜತ್  ಆಟ್ ಪಾಟ್  ಪಡಿಪು…

‌  ಮೂರ್ನಾಡ್‌, ಮೇ,07(ನಡುಬಾಡೆ ನ್ಯೂಸ್): ಮೂರ್ನಾಡ್ ಕೊಡವ ಸಮಾಜತ್, ಇದೇ ತಿಂಗ 12, 13, ಪಿಂಞ 14ಲ್ ಆಟ್- ಪಾಟ್ ಪಡಿಪು ಕಾರ್ಬಾರ್‌ಕ್ ಮೊಳಿ ಇಟ್ಟಂಡುಂಡ್ (ಬೊಳ್ಕಾಟ್, ಕೋಲಾಟ್, ಉಮ್ಮತಾಟ್, ಸಂಬಂಧ ಅಡ್ಕೊ, ಮಂಡೆತುಣಿ ಕಟ್ಟೊ) ಇನ್ನತಾನೆಲ್ಲ ಬಣ್ಣೆಯಾಯಿತ್ ಪಡಿಪುಚಿಟ್ಟಂಡುಂಡ್ ದಯಬೆಚ್ಚಿತ್‌ ಪಡಿಪಕ್‌ ಇರಾದೆ ಉಳ್ಳ  ಎಲ್ಲಾ ಕೊಡವಳೂ ಏರ ಕಣಕ್‌ಲ್ ಬಂತ್ ಕೂಡಿಯಾಡಿತ್ ಈ ಕಾರ್ಬಾರ್‌ನ ಚಾಯೋಡೆ ನಡ್ತಿತರಂಡೂಂದ್ ಮೂರ್ನಾಡ್ ಕೊಡವ ಸಮಾಜ ಅಧ್ಯಕ್ಷ, ಆಡಳಿತ ಮಂಡಳಿ ಸದಸ್ಯಂಗ, ಕೇಟಂಡಿತ್.

Continue Reading

ಪೊನ್ನಂಪೇಟೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿವಿಧ ವೃತ್ತಿ ತರಬೇತಿಗೆ ಅರ್ಜಿಆಹ್ವಾನ…

ಪೊನ್ನಂಪೇಟೆ, ಮೇ.07(ನಡುಬಾಡೆ ನ್ಯೂಸ್):-‌ ಪೊನ್ನಂಪೇಟೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ 2025-26ನೇ ಶೈಕ್ಷಣಿಕ ವರ್ಷದಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಎಲೆಕ್ಟ್ರಾನಿಕ್ ಮೆಕಾನಿಕ್ ಮತ್ತು ಕಂಪ್ಯೂಟರ್ ಆಪರೇಟರ್ ಹಾಗೂ ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ವೃತ್ತಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.      ಈ ಸಂಬಂಧ ಹತ್ತಿರದ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿಯೇ ಖುದ್ದಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಪ್ರಾಚಾರ್ಯರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಪೊನ್ನಂಪೇಟೆ ಇವರನ್ನು ಕೆಲಸದ ವೇಳೆಯಲ್ಲಿ ಅಥವಾ ದೂ.ಸಂ. 08274-200221 ಮತ್ತು 9036796935, 9880234243, 9945635160 […]

Continue Reading

ಮಡಿಕೇರಿ ಕೆಡಿಪಿ ಸಮಿತಿಗೆ ನೇಮಕ…

ಮಡಿಕೇರಿ, ಮೇ.06( ನಡುಬಾಡೆ ನ್ಯೂಸ್)‌: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ) ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಕೊಡಗು ಜಿಲ್ಲೆ, ಮಡಿಕೇರಿ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಮಿತಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡವರನ್ನು ಅಧಿಕಾರೇತರ ಸದಸ್ಯರುಗಳನ್ನಾಗಿ ನಾಮನಿರ್ದೇಶನಗೊಳಿಸಿದೆ. ಶ್ರೀ ಕನ್ನಿಕಂಡ ಶ್ಯಾಮ್ ಬಿನ್ ಸುಬ್ಬಯ್ಯ ಮಕ್ಕಂದೂರು ಗ್ರಾಮ. ಮಡಿಕೇರಿ ,ಶ್ರೀ ಕುಶಾಲಪ್ಪ ಕಲಿಯಂಡ ಕೊಳಕೇರಿ ನಾಪೋಕ್ಲ್‌, ಮಡಿಕೇರಿ, ಸಾಮಾನ್ಯ ಮಹಿಳೆ ಸ್ಥಾನಕ್ಕಾಗಿ ಶ್ರೀಮತಿ ತಿಲಕ್ ಸುಬ್ರಾಯ, ತಣ್ಣಿಮಾನಿ, ಭಾಗಮಂಡಲ,ಮಡಿಕೇರಿ, […]

Continue Reading

ಶ್ರೀಮತಿ ವಿಜಯ ವಿಷ್ಣುಭಟ್ ದತ್ತಿ ಪ್ರಶಸ್ತಿಗೆ, ಸ್ಮಿತಾ ಅಮೃತರಾಜ್ ಅವರ  ಹಾಯ್ ಮೆಟಾಯ್ ಕಥಾ ಸಂಕಲನ ಆಯ್ಕೆ…

ಮಡಿಕೇರಿ, ಮೇ.06(ನಡುಬಾಡೆ ನ್ಯೂಸ್):  ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಹಿಳಾ ಸಾಹಿತಿಗಳಿಗೆ ಮೀಸಲಾಗಿ ಇಟ್ಟಿರುವ  ದತ್ತಿ “ಶ್ರೀಮತಿ ವಿಜಯ ವಿಷ್ಣುಭಟ್ ದತ್ತಿ ಪ್ರಶಸ್ತಿ”ಗೆ ಜಿಲ್ಲೆಯ ಹಿರಿಯ ಸಾಹಿತಿಗಳಾದ ಶ್ರೀಮತಿ  ಸ್ಮಿತಾ ಅಮೃತರಾಜ್ ಸಂಪಾಜೆಯವರು ರಚಿಸಿದ  ಕಥಾ ಸಂಕಲನ “ಹಾಯ್ ಮೆಟಾಯ್” ಕೃತಿಯು ಪುರಸ್ಕೃತ ಗೊಂಡಿದೆ.        ಜಿಲ್ಲೆಯ ಹಿರಿಯ ಸಾಹಿತಿಗಳಾದ ಶ್ರೀಮತಿ ವಿಜಯ ವಿಷ್ಣುಭಟ್ ರವರು‌ ಸ್ಥಾಪಿಸಿರುವ ಈ ದತ್ತಿಯ  ಮೊದಲ   ಪ್ರಶಸ್ತಿ ಇದಾಗಿದ್ದು, ಈ ದತ್ತಿ ಪ್ರಶಸ್ತಿಯ ಆಯ್ಕೆಗಾಗಿ ಜಿಲ್ಲೆಯ ಬರಹಗಾರರ ಕೃತಿಗಳನ್ನು ಆಹ್ವಾನಿಸಿದಾಗ […]

Continue Reading

ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ನೋಂದಣಿ ಅಭಿಯಾನ…

ಮಡಿಕೇರಿ ಮೇ.06(ನಡುಬಾಡೆ ನ್ಯೂಸ್ ):- ‌ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಸೌಲಭ್ಯ ಪಡೆಯಲು ಮೊದಲನೇ ಪ್ರಸವದ ಗರ್ಭಿಣಿ ಮಹಿಳೆಯರು ಮತ್ತು ಎರಡನೇ ಪ್ರಸವದಲ್ಲಿ ಹೆಣ್ಣು ಮಗು ಜನಿಸಿದ ಮಹಿಳೆಯರ ನೋಂದಣಿ ಅಭಿಯಾನ ನಡೆಯಲಿದೆ.      ಮಹಿಳೆಯ ಮೊದಲ ಪ್ರಸವದ ಮತ್ತು ನಂತರದ ಸಾಕಷ್ಟು ವಿಶ್ರಾಂತಿಗಾಗಿ ಆಂಶಿಕ ಪರಿಹಾರವನ್ನು ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯದಲ್ಲಿ ಸುಧಾರಣೆ ತರಲು ಪ್ರೋತ್ಸಾಹಧನದ ರೂಪದಲ್ಲಿ ವೇತನ ನಷ್ಟಕ್ಕಾಗಿ ನೀಡುವುದಾಗಿದೆ.  ಮೊದಲ […]

Continue Reading

ನಾಳೆ ಶನಿವಾರಸಂತೆ ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯ…

‌ ಶನಿವಾರಸಂತೆ ಮೇ,06(ನಡುಬಾಡೆ ನ್ಯೂಸ್): ಶನಿವಾರಸಂತೆ 66/33/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ಶನಿವಾರಸಂತೆ ಶಾಖಾ ವ್ಯಾಪ್ತಿಯಲ್ಲಿ ಫೀಡರ್ ನಿರ್ವಹಣೆ ಕಾಮಗಾರಿಗಳನ್ನು  ಕೈಗೊಳ್ಳಬೇಕಿರುವುದರಿಂದ ಈ ಕೇಂದ್ರದಿಂದ ಹೊರಹೊಮ್ಮುವ ಎಫ್1 ಹಂಡ್ಲಿ ಮಾರ್ಗದಲ್ಲಿ ಮೇ, 07 ಬುಧವಾರದಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.    ಆದ್ದರಿಂದ ಬೆಳ್ಳಾರಳ್ಳಿ, ಸಂಪಿಗೆದಾಳು, ಕಿತ್ತೂರು, ಮಣಗಲಿ, ಮೂದ್ರವಳ್ಳಿ, ದುಂಡಳ್ಳಿ, ಬಿಳಹ(ಬೆಂಬಳೂರು)  ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ […]

Continue Reading