Site icon nadubadenews.com

ಶ್ರೀಮತಿ ವಿಜಯ ವಿಷ್ಣುಭಟ್ ದತ್ತಿ ಪ್ರಶಸ್ತಿಗೆ, ಸ್ಮಿತಾ ಅಮೃತರಾಜ್ ಅವರ  ಹಾಯ್ ಮೆಟಾಯ್ ಕಥಾ ಸಂಕಲನ ಆಯ್ಕೆ…

ಮಡಿಕೇರಿ, ಮೇ.06(ನಡುಬಾಡೆ ನ್ಯೂಸ್):  ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಹಿಳಾ ಸಾಹಿತಿಗಳಿಗೆ ಮೀಸಲಾಗಿ ಇಟ್ಟಿರುವ  ದತ್ತಿ “ಶ್ರೀಮತಿ ವಿಜಯ ವಿಷ್ಣುಭಟ್ ದತ್ತಿ ಪ್ರಶಸ್ತಿ”ಗೆ ಜಿಲ್ಲೆಯ ಹಿರಿಯ ಸಾಹಿತಿಗಳಾದ ಶ್ರೀಮತಿ  ಸ್ಮಿತಾ ಅಮೃತರಾಜ್ ಸಂಪಾಜೆಯವರು ರಚಿಸಿದ  ಕಥಾ ಸಂಕಲನ “ಹಾಯ್ ಮೆಟಾಯ್” ಕೃತಿಯು ಪುರಸ್ಕೃತ ಗೊಂಡಿದೆ. 

      ಜಿಲ್ಲೆಯ ಹಿರಿಯ ಸಾಹಿತಿಗಳಾದ ಶ್ರೀಮತಿ ವಿಜಯ ವಿಷ್ಣುಭಟ್ ರವರು‌ ಸ್ಥಾಪಿಸಿರುವ ಈ ದತ್ತಿಯ  ಮೊದಲ   ಪ್ರಶಸ್ತಿ ಇದಾಗಿದ್ದು, ಈ ದತ್ತಿ ಪ್ರಶಸ್ತಿಯ ಆಯ್ಕೆಗಾಗಿ ಜಿಲ್ಲೆಯ ಬರಹಗಾರರ ಕೃತಿಗಳನ್ನು ಆಹ್ವಾನಿಸಿದಾಗ ಹತ್ತು ಸಾಹಿತಿಗಳು ತಮ್ಮ ಕೃತಿಗಳನ್ನು ಪ್ರಸ್ತುತ ಪಡಿಸಿದ್ದರು. ಜಿಲ್ಲೆಯ ಹಿರಿಯ ಮೂರು ಸಾಹಿತಿಗಳು ಪ್ರತ್ಯೇಕವಾಗಿ ಈ ಪುಸ್ತಕಗಳನ್ನು ಪರಿಶೀಲಿಸಿ ನೀಡಿದ ಅಂಕಗಳನ್ನು ಜಿಲ್ಲಾ ಸಮಿತಿ ಒಟ್ಟುಗೂಡಿಸಿ ಹತ್ತು ಜನ ಲೇಖಕರಲ್ಲಿ ಅತಿ ಹೆಚ್ಚು ಅಂಕ ಪಡೆದ “ಹಾಯ್ ಮೆಟಾಯ್” ಕೃತಿಯ ಲೇಖಕಿಯಾದ ಶ್ರೀಮತಿ  ಸ್ಮಿತಾ ಅಮೃತ್ ರಾಜ್ ಸಂಪಾಜೆ ರವರು ಪ್ರಶಸ್ತಿ ಪುರಸ್ತೃತಗೊಂಡಿದ್ದಾರೆ. ಮುಂದೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version