Site icon nadubadenews.com

ಕನ್ನಡ ಸಾರಸ್ಪತ ಲೋಕ ಒಂದು ಅದ್ಭುತ ಚೇತನವನ್ನು ಕಳೆದುಕೊಂಡಿದೆ-  ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂತಾಪ…  

ಕನ್ನಡ ಸಾರಸ್ಪತ ಲೋಕ ಒಂದು ಅದ್ಭುತ ಚೇತನವನ್ನು ಕಳೆದುಕೊಂಡಿದೆ-  ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂತಾಪ…  
Spread the love
ಕನ್ನಡ ಸಾರಸ್ಪತ ಲೋಕ ಒಂದು ಅದ್ಭುತ ಚೇತನವನ್ನು ಕಳೆದುಕೊಂಡಿದೆ-  ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂತಾಪ…  

ಮಡಿಕೇರಿ, ಮೇ 07 (ನಡುಬಾಡೆ ನ್ಯೂಸ್):‌ ಕನ್ನಡ ನಾಡಿನ ಹಿರಿಯ ಸಾಹಿತಿ.ವಿಮರ್ಶಕರು. ಕವಿ ಚಿಂತಕರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿದ್ದ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ ಅವರು ನಿಧನರಾಗಿರುವುದು ದುಖಃವನ್ನುಂಟು ಮಾಡಿದೆ.                                                          

       ಸಾಂಸ್ಕೃತಿಕ ಜಗತ್ತಿಗೆ ಕವಿ ಜಿ ಎಸ್ ಸಿದ್ದಲಿಂಗಯ್ಯ ಅವರ ಕೊಡುಗೆ ಗಮನಾರ್ಹವಾದದ್ದು. ಕನ್ನಡ ಸಾಹಿತ್ಯ ಪರಿಷತ್ತಿನ 17ನೇ ಅಧ್ಯಕ್ಷರಾಗಿ ಅವರು ಕೈಗೊಂಡ ಕೆಲಸಗಳು ಕನ್ನಡ ಸಾಹಿತ್ಯ ಪರಿಷತ್ತನ್ನು ಸದೃಢವಾಗಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಸಾಹಿತ್ಯ ಪರಿಷತ್ತಿಗೆ ಒಂದು ನಿರ್ದಿಷ್ಟ ಧ್ವಜವನ್ನು ರೂಪಿಸುವಲ್ಲಿ ಅವರ ಪಾತ್ರ ಮಹತ್ವದ್ದು.ಆಡಳಿತಾತ್ಮಕವಾಗಿ, ಆರ್ಥಿಕವಾಗಿ ಪರಿಷತ್ತನ್ನು ಕಟ್ಟುವಲ್ಲಿ ಶ್ರಮಿಸಿದವರು ಜಿ ಎಸ್ ಸಿದ್ದಲಿಂಗಯ್ಯ  ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳಿಗೆ ವಿಶೇಷ ಗಮನ ಕೊಟ್ಟರು.

      ಜಿ ಎಸ್ ಸಿದ್ದಲಿಂಗಯ್ಯ ಕವಿಯಾಗಿ ,ವಿಮರ್ಶಕ ರಾಗಿ, ಅನುವಾದಕರಾಗಿ ಕನ್ನಡ ಪುಸ್ತಕ ಲೋಕಕ್ಕೆ ಅನನ್ಯ ಕೊಡುಗೆ ಕೊಟ್ಟಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಯು ಸೇರಿದಂತೆ ಅನೇಕ ಪ್ರತಿಷ್ಠಿತ ಗೌರವ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಕವಿ ಜಿ ಎಸ್ ಸಿದ್ದಲಿಂಗಯ್ಯ ಅವರ ನಿಧನದಿಂದ ಕನ್ನಡ ಸಾರಸ್ಪತ ಲೋಕ ಒಂದು ಅದ್ಭುತ ಚೇತನವನ್ನು ಕಳೆದುಕೊಂಡಿದೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ ಪರವಾಗಿ ಕೊಡಗು  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಮಾಜಿ ಅಧ್ಯಕ್ಷರಾದ ಟಿ.ಪಿ ರಮೇಶ್, ಗೌರವ ಕಾರ್ಯದರ್ಶಿಗಳಾದ ಎಸ್.ಐ ಮುನಿರ್ ಅಹಮ್ಮದ್, ಶ್ರೀಮತಿ ರೇವತಿ ರಮೇಶ್, ಕೋಶಾಧಿಕಾರಿಗಳಾದ ಎಸ್.ಎಸ್ ಸಂಪತ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

Exit mobile version