ವಿಟಿಯು ಸೆನೆಟರ್‌ ಆಯಿತ್‌ ಡಾ. ಮುಂಜಾಂದಿರ ಚೆಂಗಪ್ಪ

ಬೆಂಗಳೂರ್‌, ಜು.04̈ ;(nadubadenews): ಬೆಳಗಾವಿರ ಸರ್.‌ ಎಂ. ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್‌ ಯುನಿವರ್‌ಸಿಟಿರ ಸೆನೆಟ್‌ ಮೆಂಬರ್‌ ಆಯಿತ್‌, IEEE ಲೀಡರ್‌ ಡಾ. ಮುಂಜಾಂದಿರ ಚೆಂಗಪ್ಪ ಅಯಂಗಳ ಕರ್ನಾಟರ ರಾಜ್ಯಪಾಲಂಡ  ಅದೇಶಪೋಲೆ ನಾಳಂಕೆ 25/06/25ಲ್‌ ನೇಮಕ  ಮಾಡಿತ್‌.‌  ಇದ್‌ ಈ ಯುನಿವರ್ಸಿಟಿರ ಏರ ಬಲ್ಯ ಅಕಾಡೆಮಿಕ್‌ ಮೇನತಾಯಿತುಂಡ್.‌    ಮುಂಜಾಂದಿರ ರಮೇಶ್‌ ಪಿಂಞ ಜಯ (ತಾಮನೆ: ಕೋಳೆರ) ದಂಪತಿಯಳಡ ಮೋಂವೊನಾನ ಇವು ಮಚ್ಚಮಾಡ ಸುಬ್ರಮಣಿ ಪಿಂಞ ಶಾಂತಿ ದಂಪತಿಯಡ ಮೋವ ದೇವಿಕಾನ ಮಂಗಲಾಯಿತ್.‌  ಕೈಂಜ 20ಕಾಲತೊಟ್ಟ್‌ ಟೆಲಿಕಮ್ಯನಿಕೇಷನ್ಸ್‌ ಪಿಂಞ ಐ.ಟಿ. […]

Continue Reading

ಕಾರ್ಮಿಕ ಸೋಗಿನ ನುಸುಳುಕೋರರ ಬಗ್ಗೆ ಎಚ್ಚರ ವಹಿಸಿ, ಎಸ್.ಪಿ ರಾಮರಾಜನ್ ಸೂಚನೆ…

ಮಡಿಕೇರಿ ಜು03 (Nadubade News): ಕಳೆದ ಹಲವು ತಿಂಗಳಿನಿಂದ ಕೊಡಗು (Kodagu) ಜಿಲ್ಲೆಗೆ ಆಗಮಿಸುತ್ತಿರುವ ಅಸ್ಸಾಂ ಮೂಲದ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು, ಈ ಪೈಕಿ ಕೆಲವು ಬಾಂಗ್ಲಾ ನುಸುಳುಕೋರರು (Bangladeshi Infiltrators) ಇದ್ದಾರೆ ಅನ್ನೋ ಶಂಕೆ ವ್ಯಕ್ತವಾಗಿದೆ.     ಕೊಡಗು ಜಿಲ್ಲೆಯ ಮಡಿಕೇರಿ, ಸುಂಟಿಕೊಪ್ಪ, ಕುಶಾಲನಗರ, ವಿರಾಜಪೇಟೆ, ಗೋಣಿಕೊಪ್ಪಲು, ನಾಪೋಕ್ಲು ಸೇರಿದಂತೆ ಕೊಡಗಿನ ಪ್ರಮುಖ ಪಟ್ಟಣಗಳಲ್ಲಿ ನಡೆಯುವ ವಾರದ ಸಂತೆಗಳಲ್ಲಿ ಹೊಸ ಮುಖಗಳೇ ಹೆಚ್ಚಾಗಿ ಕಂಡುಬರುತ್ತಿವೆ. ಸಂತೆಗಳಲ್ಲಿ ವ್ಯಾಪಾರ ಮಾಡುವುದರಿಂದ ಆರಂಭಿಸಿ ಹೋಂ ಸ್ಟೇ, ರೆಸಾರ್ಟ್ ಗಳಲ್ಲಿ […]

Continue Reading

ಪ್ರಕೃತಿ ವಿಕೋಪದವಾದರೆ ನಮ್ಮೊಂದಿಗೆ ಸಹಕರಿಸಿ ; ಎಸ್ಪಿ ಮನವಿ

ಮಡಿಕೇರಿ, ಜು.02;(nadubadenews): ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ವಿವಿಧ ಸಂಘಟನೆಗಳ ಸ್ವಯಂ ಸೇವಕರು ಹಾಗೂ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ. ರಾಮರಾಜನ್ ಅವರು ಕೋರಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊಡಗು ಜಿಲ್ಲೆಯಲ್ಲಿ ಹಲವು ವರ್ಷಗಳ ನಂತರ 2025ನೇ ಜೂನ್ ಅಂತ್ಯದವರೆಗೆ ಅತೀ ಹೆಚ್ಚು ಮಳೆಯಾಗಿರುತ್ತದೆ. ಅಲ್ಲದೇ ಈ ವರ್ಷವೂ ಅತೀ ಹೆಚ್ಚು ಮಳೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿನ ನದಿ ಜಲಾಶಯ, ಕೆರೆ, ಹಳ್ಳ, ತೋಡು ಹಾಗೂ ಇತರೆ ಜಲಮೂಲಗಳು […]

Continue Reading

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ಹೆಸರು ನೋಂದಾಯಿಸಲು  ಕೋರಿಕೆ

ಮಡಿಕೇರಿ ಜು.02(nadubadenews):- ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು 2025-26ನೇ ಸಾಲಿನಲ್ಲಿಯೂ ಜಾರಿಯಲ್ಲಿದೆ. ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ಮುಂತಾದ ಪ್ರಾಕೃತಿಕ ವಿಕೋಪ ಸೇರಿದಂತೆ ಹಲವಾರು ಕಾರಣಗಳಿಂದ ಬೆಳೆ ನಷ್ಟ ಉಂಟಾದಾಗ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿಯಲ್ಲಿ ರೈತರ ವಿಮಾ ಕಂತನ್ನು ಆಹಾರ ಮತ್ತು ಎಣ್ಣೆಕಾಳು ಬೆಳೆಗಳಿಗೆ ಮುಂಗಾರು ಹಂಗಾಮಿಗೆ ಶೇ.2 ಎಂದು ಪರಿಗಣಿಸಲಾಗಿದೆ. ಮುಖ್ಯ ಬೆಳೆಗಳಿಗೆ ಯೋಜನೆಯನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ […]

Continue Reading

     ಹೃದಾಯಘಾತ ತಡೆಯಲು ಎಲ್ಲಾ ತಾಲೂಕು ಆಸ್ಪತ್ರೆಗಳಿಗೂ ಸ್ಟೆಮಿ ಯೋಜನೆ ಸರ್ಕಾರದ ಆದೇಶ

     ಬೆಂಗಳೂರು; ಜು.02, (nadubadenews): ರಾಜ್ಯಾದ್ಯಂತ ಎಲ್ಲಾ ತಾಲೂಕುಗಳಿಗೆ ಸ್ಟೆಮಿ ಯೋಜನೆಯನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಇದರಿಂದ ಇನ್ನು ಮುಂದೆ ತಾಲೂಕು ಆಸ್ಪತ್ರೆಗಳಲ್ಲೇ ಹೃದಯಾಘಾತಕ್ಕೆ ಒಳಗಾದವರಿಗೆ ತುರ್ತು ಚಿಕಿತ್ಸೆ ನೀಡಲು ವ್ಯವಸ್ಥೆಯಾಗಲಿದೆ. ಹೃದಯಾಘಾತದ ಲಕ್ಷಣಗಳಾದ ಎದೆನೋವು, ಉಸಿರಾಟದ ತೊಂದರೆ ಇರುವ ರೋಗಿಗಳು ತಾಲೂಕು ಆಸ್ಪತ್ರೆಗೆ ತೆರಳಿದಾಗ ತಕ್ಷಣವೇ ಇಸಿಜಿ ಪರೀಕ್ಷೆ ನಡೆಸಿ, ಆ ಮಾಹಿತಿಯನ್ನು ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞರಿಗೆ ರವಾನಿಸಲಾಗುತ್ತದೆ. ಜಯದೇವದ ತಜ್ಞ ವೈದ್ಯರು ಈ ಡೇಟಾವನ್ನು ವಿಶ್ಲೇಷಿಸಿ, ರೋಗದ ತೀವ್ರತೆ ಗುರುತಿಸಿ, ತಾಲೂಕು […]

Continue Reading

ನಡುಬಾಡೆನ್ಯೂಸ್‌ ಫಲಶೃತಿ; ಮೇದುರ ಫಾಲ್ಸ್‌ಗೆ ಬ್ಯಾರಿಕೇಡ್‌, ಶಾಶ್ವತ ಪರಿಹಾರ ಬೇಕಿದೆ

ಸೂರ್ಲಬ್ಬಿ, ಜು.01; (ndubadenews):  ಗರ್ವಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೂರ್ಲಬ್ಬಿ ಬಳಿಯ ಮೇದುರಪೊಳೆ ಪಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟದ ಚಿತ್ರ ಸಹಿತ, ನಡುಬಾಡೆ ನ್ಯೂಸ್‌ನಲ್ಲಿ ಪ್ರಕಟವಾದ “ಮೇದುರ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ; ಬಲಿಬಯಸಿದೆಯಾ ಸ್ಥಳೀಯ ಆಡಳಿತ.” ಎಂಬ ತಲೆಬರಹದ  ಸುದ್ದಿಯನ್ನು ಗಮನಿಸಿದ ಸ್ಥಳೀಯ ಆಡಳಿತ  ಇಂದು ಫಾಲ್ಸ್‌ ಮತ್ತು ಹಳೇ ಸೇತುವೆಗೆ ಪ್ರವೇಶ ನಿಷೇದಿಸಿ,  ಸುತ್ತಲೂ ಟೇಪ್‌ ಮೂಲಕ ಬ್ಯಾರಿಕೇಡ್‌ ನಿರ್ಮಿಸಿ, ಸೂಚನಾಫಲಕ ಅಳವಡಿಸಿದೆ.           ಮೊನ್ನೆ ಮೇದುರಪೊಳೆ ಜಲಪಾತ ವೀಕ್ಷಿಸಲು ಹೋಗಿದ್ದ ಸೋಮವಾರಪೇಟೆಯ ಸಮಾಜಸೇವಕಿ ಶ್ರೀಮತಿ ಅಶ್ವಿನಿ […]

Continue Reading

ನಾಟಿಗಿಟ್ಟ ಪೈರನ್ನು ತುಳಿದು ತೇಗಿದ ಕಾಡಾನೆ; ಕುಂಬಡಿ ರೈತರ ಕರುಣಾಜನಕ ಕಥೆ

ಸೂರ್ಲಬ್ಬಿ, ಜು.01; (nadubadenews):  ರೈತ ದೇಶದ ಬೆನ್ನೆಲೆಬು ಎನ್ನುತ್ತೇವೆ, ಭತ್ತಬೆಳೆಯುವ ರೈತ ನಿಜವಾದ ಅನ್ನದಾತ, ಆದರೆ ಆತನ ಪರಿಪಾಟಲು ಮಾತ್ರ ಆಳುವ ವರ್ಗಕ್ಕೆ ಅರಣ್ಯರೋಧನೆಯಾಗಿಯೇ ಇಂದಿಗೂ ಇದೆ. ಇಡೀ ವರ್ಷ ಹೊಟ್ಟೆಬಟ್ಟೆಕಟ್ಟಿ, ಬಿಸಿಲು ಮಳೆಯನ್ನು ಲೆಕ್ಕಿಸದೆ ವರ್ಷದ ಕೂಳಿಗಾಗಿ ದುಡಿಯುವ ರೈತನ ಬೆಳೆಗಳು ಕ್ಷಣಮಾತ್ರದಲ್ಲಿ ಕಾಡು ಪ್ರಾಣಿಗಳ ಪಾಲಾಗುತ್ತಿವೆ. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎಂಬಂತೆ ಇಡೀ ವರ್ಷ ಬಸಿದ ಬೆವರನ್ನು ಕೆಲವೇ ಘಂಟೆಗಳಲ್ಲಿ ಕಳೆದುಕೊಂಡ ರೈತರ ಪಾಡು, ತನ್ನ ತನುವನ್ನೆ ಕಳೆದುಕೊಂಡಂತೆ, ಜಂಗಾಬಲವೇ ಉಡುಗಿ ಹೋಗಿ […]

Continue Reading

ಸಬ್‌ಜೂನಿಯರ್‌ ಹಾಕಿಗೆ, ಕೊಡಗಿನ ಎಂಟು ಆಟಗಾರ್ತಿಯರು

ವಿರಾಜಪೇಟೆ, ಜೂ. 30:(nadubadenews): ಹಾಕಿ ಇಂಡಿಯಾ ಸಬ್ ಜೂನಿಯರ್ ಮಹಿಳಾ ವಿಭಾಗದ ರಾಷ್ಟ್ರೀಯ ಚಾಂಪಿಯನ್ ಶಿಪ್ ಪಂದ್ಯಾಟಕ್ಕೆ ಈ ಬಾರಿ ಕರ್ನಾಟಕ ತಂಡದಲ್ಲಿ ಕೊಡಗಿನ 8 ಹಾಕಿ ಆಟಗಾರ್ತಿಯರು ಆಡಲಿದ್ದಾರೆ. ತಂಡದ ನಾಯಕಿಯಾಗಿ ಕೊಡಗಿನ ಅಚ್ಚಪoಡ ಪರ್ಲಿನ್ ಪೊನ್ನಮ್ಮ ತಂಡವನ್ನು ಮುನ್ನಡೆಸಲಿದ್ದು, ನೀಲಮ್ಮ ಎನ್.ಆರ್, ಪೂರ್ವಿ ಪೂವಮ್ಮ ಕೆ.ಎ, ಗ್ರೀಷ್ಮ ಪೊನ್ನಪ್ಪ ಪಿ, ಧನ್ಯ.ಕಾವೇರಮ್ಮ ಸಿ.ಯು, ವಿದ್ಯಾ ಪೊನ್ನಮ್ಮ ಎಂ ಯು, ತ್ವಿಷ ದೇಚ್ಚಮ್ಮಸಿ. ಎಂ(ಗೋಲ್ ಕೀಪರ್), ಹಾಗೂ ಬೊಳ್ಳಮ್ಮ ಬಿ.ಎಂ, ಅವರುಗಳು ಕರ್ನಾಟಕವನ್ನು ರಾಷ್ಟ್ರೀಯಮಟ್ಟದಲ್ಲಿ ಪ್ರತಿನಿಧಿಸಲಿದ್ದಾರೆ. […]

Continue Reading

ಆನೆ ಇದ್ದರೆ ಸಾಕೇ… ಮಾನವರೂ ಬಾಳಬೇಕೆ ಎನ್ನುವುದನ್ನು ಇಲಾಖೆ ಸ್ಪಷ್ಟಪಡಿಸಲಿ:

ರೈತಮುಖಂಡ ಚೆಪ್ಪುಡಿರ ಕಾರ್ಯಪ್ಪ ಆಗ್ರಹ ಇವೆಲ್ಲವನ್ನೂ ಗಮನಿಸಿದಾಗ ಅರಣ್ಯ ಇಲಾಖೆಯೇ ನಮಗೆ ಬೇಡವೆಂಬ ಚಿಂತನೆ ನೊಖ್ಯ ಗ್ರಾಮಸ್ಥರಲ್ಲಿ ಮೂಡಿದೆ.ಆದರೆ ನೊಖ್ಯ ಹಾಗು ತಿತಿಮತಿ ಗ್ರಾಮಸ್ಥರು ವಲಸೆ ಹೋಗದೆ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಕಾಪಾಡಿಕೊಂಡು ಬರಬೇಕು ಎಂಬುದು ಹಲವು ರೈತರ ಮನದಾಳದ ಮಾತುಗಳು. ಇನ್ನಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಲಿ. ಗ್ರಾಮಸ್ಥರು ಇಲಾಖೆ ಸರ್ಕಾರದಿಂದ ಸೂಕ್ತ ಉತ್ತರವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಚೆಪ್ಪುಡಿರ ಕಾರ್ಯಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ಎಮ್ಮೆಮಾಡು ಪಂಚಾಯತಿಗೆ ಭೇಟಿ ನೀಡಿದ ಅಸ್ಸಾಂ ನಿಯೋಗ

ನಾಪೋಕ್ಲು, ಜೂ.30(nadubadenews): ನಾಪೋಕ್ಲು ಸಮೀಪದ ಎಮ್ಮೆಮಾಡು ಗ್ರಾಮ ಪಂಚಾಯಿತಿಯ ಸುಧಾರಿತ ಆಡಳಿತ ಮತ್ತು ಅಂಗನವಾಡಿ ಪೋಷಣ ಅಭಿಯಾನದ ಉತ್ತಮ ಪ್ರಗತಿಯನ್ನು ಗುರುತಿಸಿ ಅಸ್ಸಾಂ ರಾಜ್ಯ ಜನಪ್ರತಿನಿಧಿಗಳು ಭೇಟಿ ನೀಡಿದರು. ಅಸ್ಸಾಂ ಸರ್ಕಾರದ ಪ್ರತಿನಿಧಿಗಳಾಗಿ ಸಾಬೀತಾ ರಾಥೋಡ್, ಮಲ್ಲಿಕಾ, ಪದ್ಮಜಾ ಅವರುಗಳು ಎಮ್ಮೆಮಾಡು ಗ್ರಾಮ ಪಂಚಾಯಿತಿ ಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿಯ ಆಡಳಿತ ಸುಧಾರಣೆ ಮತ್ತು ಬಾಪೂಜಿ ಸೇವಾ ಕೇಂದ್ರದಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳ ವಿವರ ಮತ್ತು ಗ್ರಾಮ ಪಂಚಾಯಿತಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪೋಷಣ […]

Continue Reading