Site icon nadubadenews.com

ಸಬ್‌ಜೂನಿಯರ್‌ ಹಾಕಿಗೆ, ಕೊಡಗಿನ ಎಂಟು ಆಟಗಾರ್ತಿಯರು

ಸಬ್‌ಜೂನಿಯರ್‌ ಹಾಕಿಗೆ, ಕೊಡಗಿನ ಎಂಟು ಆಟಗಾರ್ತಿಯರು
ಸಬ್‌ಜೂನಿಯರ್‌ ಹಾಕಿಗೆ, ಕೊಡಗಿನ ಎಂಟು ಆಟಗಾರ್ತಿಯರು

ವಿರಾಜಪೇಟೆ, ಜೂ. 30:(nadubadenews): ಹಾಕಿ ಇಂಡಿಯಾ ಸಬ್ ಜೂನಿಯರ್ ಮಹಿಳಾ ವಿಭಾಗದ ರಾಷ್ಟ್ರೀಯ ಚಾಂಪಿಯನ್ ಶಿಪ್ ಪಂದ್ಯಾಟಕ್ಕೆ ಈ ಬಾರಿ ಕರ್ನಾಟಕ ತಂಡದಲ್ಲಿ ಕೊಡಗಿನ 8 ಹಾಕಿ ಆಟಗಾರ್ತಿಯರು ಆಡಲಿದ್ದಾರೆ. ತಂಡದ ನಾಯಕಿಯಾಗಿ ಕೊಡಗಿನ ಅಚ್ಚಪoಡ ಪರ್ಲಿನ್ ಪೊನ್ನಮ್ಮ ತಂಡವನ್ನು ಮುನ್ನಡೆಸಲಿದ್ದು, ನೀಲಮ್ಮ ಎನ್.ಆರ್, ಪೂರ್ವಿ ಪೂವಮ್ಮ ಕೆ.ಎ, ಗ್ರೀಷ್ಮ ಪೊನ್ನಪ್ಪ ಪಿ, ಧನ್ಯ.ಕಾವೇರಮ್ಮ ಸಿ.ಯು, ವಿದ್ಯಾ ಪೊನ್ನಮ್ಮ ಎಂ ಯು, ತ್ವಿಷ ದೇಚ್ಚಮ್ಮಸಿ. ಎಂ(ಗೋಲ್ ಕೀಪರ್), ಹಾಗೂ ಬೊಳ್ಳಮ್ಮ ಬಿ.ಎಂ, ಅವರುಗಳು ಕರ್ನಾಟಕವನ್ನು ರಾಷ್ಟ್ರೀಯಮಟ್ಟದಲ್ಲಿ ಪ್ರತಿನಿಧಿಸಲಿದ್ದಾರೆ. 15 ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಮಹಿಳಾ ವಿಭಾಗದ ರಾಷ್ಟ್ರೀಯ ಚಾಂಪಿಯನ್ ಶಿಪ್ 2025 ಪಂದ್ಯಾಟವು ಜುಲೈ 3 ರಿಂದ 14ರ ವರೆಗೆ ರಾಂಚಿಯಲ್ಲಿ ನಡೆಯಲಿದೆ.

Exit mobile version