ಭಾರತೀಯ ಹೆಮ್ಮೆಯ ಪುತ್ರರನ್ನು ಅವಹೇಳನ ಮಾಡಿರುವ ಆರೋಪಿಯ ಗಡಿಪಾರಿಒತ್ತಾಯಿಸಿ  ಸಾಮೂಹಿಕ ಜನಾಂದೋಲನಕ್ಕೆ  ಶೀಘ್ರವೇ ಕರೆ ನೀಡಲು, ದೇಶಭಕ್ತರಿಂದ ಚಿಂತನೆ.

  ವಿರಾಜಪೇಟೆ, ನ.23: ತಾಯಿ ಭಾರತೀಯ ಹೆಮ್ಮೆಯ ಪುತ್ರರಾದ, ಫಿ.ಮಾ.ಕಾರ್ಯ ಪ್ಪ ಮತ್ತು ಜನರಲ್‌ ತಿಮ್ಮಯ್ಯ ಅವರನ್ನ ಅತ್ಯಂತ ತುಚ್ಚವಾಗಿ ಹಂಗಿಸಿರುವ, ಹೊರಜಿಲ್ಲೆ ಮೂಲದ, ಮಡಿಕೇರಿ ವಕೀಲ, ವಿದ್ಯಾಧರನ, ವಕೀಲಗಿರಿ ವಜಾಗೊಳಿಸುವುದರ ಜೊತೆಗೆ,  ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಹಾಗೂ ಈತನ ಹಲವು ವರ್ಚಗಳಿಂದ ಜನಾಂಗ ಜನಾಂಗಗಳ ನಡುವೆ, ಧರ್ಮಗಳ ನಡುವೆ ಒಡಕು ಮೂಡಿಸಿ, ಅಶಾಂತಿ ಸೃಷ್ಟಿಸಲು ಯತ್ನಿಸುತಿದ್ದು, ಹಲವು ಸಮಾಜ ವಿದ್ವಾಂಶಕರ ಜೊತೆಗಿನ ನಂಟು ಇರುವ ಬಗೆಯೂ ಸಂಶಯಗಳಿವೆ ಈ ಎಲ್ಲಾ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು […]

Continue Reading

ದೇಶದ್ರೋಹಿ ಹೇಳಿಕೆ ನೀಡಿದ ವಿದ್ಯಾಧರನಿಗೆ ರಾತ್ರೋರಾತ್ರಿ  ಮಂಜೂರಾದ ಜಾಮೀನು ರದ್ದತಿಗೆ,   ನ್ಯಾಯಲಯಕ್ಕೆ ಮೇಲ್ಮನವಿ ಸಲ್ಲಿಸಲು, ಕೊಡವಾಮೆರ ಕೊಂಡಾಟ ಸಂಘಟನೆ  ಚಿಂತನೆ.

                ದೇಶ ಕಂಡ ಮಹಾನ್ ಸೇನಾನಿಗಳ ಕುರಿತು ಅವಾಚ್ಯ ಪದಗಳಿಂದ ನಿಂದಿಸಿರುವ ವಕೀಲ ವಿದ್ಯಾಧರನಿಗೆ, ರಾತ್ರೋ ರಾತ್ರಿ  ಜಾಮೀನು ಮಂಜೂರಾಗಿದ್ದು, ಜಾಮೀನು ರದ್ದು ಪಡಿಸುವಂತೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಕೊಡವಾಮೆರ ಕೊಂಡಾಟ ಸಂಘಟನೆ ಕಾನೂನು ತಜ್ಞರೊಂದಿಗೆ ಚರ್ಚಿಸುತ್ತಿದೆ, ಎಂದು ಸಂಘಟನೆ ಪ್ರಕಟಣೆ ನೀಡಿದೆ.                 ನಿನ್ನೆ ಇಡೀ ದಿನ ನಾಟಕೀಯ ಬೆಳವಣಿಗೆಗಳು ನಡೆದಿದ್ದು, ಈ ಎಲ್ಲದರ ಹಿಂದೆ  ದೇಶ ವಿರೋಧಿಯನ್ನು ರಕ್ಷಿಸಲು ವ್ಯಾಪಕ ಹುನ್ನಾರ ನಡೆಸಿರುವ ಸಾಧ್ಯತೆಗಳಿವೆ. ನಿನ್ನೆ ಪೋಲೀಸರಿಗೆ ದೂರು ನೀಡಲು ಹೋದ […]

Continue Reading

ದೇಶ ಕಂಡ ಮಹಾನ್‌ ಸೇನಾನಿಗಳ ವಿರುದ್ದ ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ಕಿಡಿಗೇಡಿಯ ಬಂಧನ. ಪುತ್ತೂರು ಮೂಲದ, ಮಡಿಕೇರಿಯ ವಕೀಲ ಎಂಬ ಶಂಕೆ.  ಪೊಲೀಸರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ, ಆರೀಪಿಯು ಜಿಲ್ಲೆಯಲ್ಲಿ ಜನಾಂಗೀಯ ದ್ವೇಶ ಬಿತ್ತುತಿದ್ದ ಪ್ರಮುಖ ರುವಾರಿ ಎಂಬ ಗುಮಾನಿ, ಈತನ ವಕೀಲ ಪರವಾನಗಿ ರದ್ದು ಪಡಿಸಲು ಆಗ್ರಹಿಸಿದ ಕೊಡವಾಮೆರ ಕೊಂಡಾಟ ಸಂಘಟನೆ.

    ಸುಂಟಿಕೊಪ್ಪ, ನ.22: ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ, ದೇಶ ಕಂಡ ಮಹಾನ್‌ ಚೇತನಗಳಾದ ಫಿ.ಮಾ. ಕಾರ್ಯಪ್ಪ ಮತ್ತು ಜನರಲ್‌ ತಿಮ್ಮಯ್ಯ ಅವರ ವಿರುದ್ದ ಅವಹೇಳನ ಮಾಡಿದ್ದ ಆರೋಪಿಯನ್ನು ಇದೀಗ ಕೊಡಗು ಪೋಲೀಸರು ಬಂಧಿಸಿರುವ ಸುಳಿವು ದೊರೆತಿದ್ದು. ಆರೋಪಿಯು ಸುಳ್ಯ  ಮೂಲದ, ಮಡಿಕೇರಿಯಲ್ಲಿ ವಕೀಲಗಿರಿ ಮಾಡುತ್ತಿರುವ ವ್ಯಕ್ತಿ ಎಂಬ ಮಾಹಿತಿ ಲಭ್ಯವಾಗಿದೆ.             ಕಳೆದ ಹಲವು ವರ್ಷಗಳಿಂದ ಕೊಡಗಿನಲ್ಲಿ ಜನಾಂಗೀಯ ದ್ವೇಶಕ್ಕೆ ಮೂಲ ಕಾರಣನಾಗಿದ್ದ ಈತ, ಈವರೆಗೂ  ತೆರೆಯ ಹಿಂದೆ ನಿಂತು,  ಇತರರನ್ನು ಎತ್ತಿ […]

Continue Reading

ಮೈಸೂರ್, ಕೊಡವ ಮಕ್ಕಡ ಕೂಟಕ್ ಪುದಿಯ ಮೂಪ, ತೌಂದಾರಿಯಡ ನಿರ್ಕ್..

                ಪೇರೂರ್, ನ.21: (ಬೊಟ್ಟೋಳಂಡ ನಾಣಯ್ಯ) ಮೈಸೂರ್‌‌ಲ್ ಉಳ್ಳ ಕೊಡವಡ ನೇರ್ ನಲ್ಲಾಮೆಕಾಯಿತ್ ಮೊಳಿಯಿಟ್ಟಿತ್ ಕಾರ್ಬಾರ್ ಮಾಡ್ಯಂಡುಳ್ಳ, ಕೊಡವ ಮಕ್ಕಡ ಕೂಟಕ್, 2024-25ನೇ ಕಾಲತ ಮೂಪ ತೌಂದಾರಿಯಳ ನಿನ್ನಾಂದ್ ನಡ್ಂದ ಮೋಪುಲ್ ನಿರ್ಕ್ ಮಾಡಿತ್.                  ಈ  ಪೋಲೆ ಕೊರವುಕಾರ್ತಿ ಆಯಿತ್  ಮೊಟ್ಟೆಯಂಡ ಇಶಾನಿ ಕುಟ್ಟಪ್ಪ, ಕೂಟ್ ಕೊರವುಕಾರನಾಯಿತ್ ತೀತರಮಾಡ ತನುಶ್ ಗಣಪತಿ, ಕಾರ್ಯಕಾರನಾಯಿತ್ ಮಂಡೇಟಿರ ದೇಗುಲ್ ಗಣಪತಿ, ಕೂಟ್ ಕಾರ್ಯಕಾರಿ ಆಯಿತ್ ಚೆಟ್ಟಿರ ಗ್ರಂಥ ಕಾರ್ಯಪ್ಪ, ಲೆಕ್ಕಪಟ್ಟಿಕಾರನಾಯಿತ್ ಅಲ್ಲಾರಂಡ ದಿಲನ್ ಕಾರ್ಯಪ್ಪ, ಕೂಟ್ […]

Continue Reading

ನಾಳೆಂಜ ಕಡಿಯತ ನಾಡ್‌ ಕಪ್‌, ಹಾಕಿ ನಮ್ಮೆ…

ಪಾಲಂಗಾಲ, ನ. 21: (ಕರಿನೆರವಂಡ ಡ್ಯಾನಿ ಕುಶಾಲಪ್ಪ)  ಕಡಿಯತ್‌ ನಾಡ್‌, ಕರಡ ಕೊಡವ ಕಲ್ಬರಲ್ ಪಿಂಞ ರಿಕ್ರಿಯೇಷನ್  ಕ್ಲಬ್‌ರ ಆದನೆಲ್‌, ದಂಡನೇ ಕಾಲತ್ ಕಡಿಯತ್‌ನಾಡ್  ಕಪ್ ಹಾಕಿ ಪೈಪೋಟಿ  ನಾಳೆಂಜ 24 ನಡ್ಪ.   ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪರಂಬುಲ್‌, ನಡ್ಪಾಂದ್‌ ಕ್ರೀಡಾ ಸಮಿತಿರ ಕೊರವುಕಾರ ಮೇದುರ ಗಣುಕುಶಾಲಪ್ಪ ಅರಿಚಿಟ್ಟಿತ್. ಆದ್ಯ ಕೊಡವ ಒಕ್ಕಡೊಕ್ಕಡ  ಹಾಕಿ ನಮ್ಮೆ, ಪಾಂಡಂಡ ಕಪ್ ನಡ್ಂದ ಪೆರ್ಮೆರ  ಸರಕಾರಿ ಸ್ಕೂಲ್‌ ಪರಂಬುಲ್‌ ನಡ್ಪ ಈ ಹಾಕಿ ಪೈಪೋಟಿಲ್‌ ಕಡಿಯತ ನಾಡ್‌ಕ್‌ […]

Continue Reading

ವಕ್ಫ್‌ ಮಂಡಳಿಯ ರದ್ದತಿಗೆ ಕಾನೂನು ರೂಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ನಾಳೆ ಕೊಡಗು ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ…

ಮಡಿಕೇರಿ, ನ.21: ದೇಶದ ಸಂಸತ್ತಿನಲ್ಲಿ 1952 -1954  ಮೊದಲು  ಅಂಗೀಕಾರವಾಗಿ ನಂತರ  1964, 1995 ಮತ್ತು 2013ರಲ್ಲಿ ತಿದ್ದುಪಡಿಗೊಂಡಿರುವ, ದೇಶದ ಭವಿಷ್ಯಕ್ಕೆ ಮಾರಕವಾಗಿರುವ ವಕ್ಫ್‌ ಕಾಯ್ದೆಯನ್ನ ಸಂಪೂರ್ಣ ರದ್ದುಗೊಳಿಸುವ ಹೊಸ ಕಾಯ್ದೆಯನ್ನು ಮುಂಬರುವ ಚಳಿಗಾಲದ ಅದೀವೇಶನದಲ್ಲೇ ಮಂಡಿಸಬೇಂಕೆಂದು ಸರ್ಕಾರವನ್ನು ಒತ್ತಾಯಿಸಲು‌, ಕೊಡಗು ಬಿಜೆಪಿಯಿಂದ ನಾಳೆ ಮಡಿಕೇರಿಯಲ್ಲಿ ಬೃಹತ್‌, ಮೆರವಣಿಗೆಯ ಹರತಾಳ ನಡೆಯಲಿದೆ ಎಂದು ಕೊಡಗು ಜಿಲ್ಲಾ ಬಿ.ಜೆ.ಪಿ ಪ್ರಕೋಷ್ಟದ ಸಂಯೋಜಕರಾದ ಅಪ್ಪನೆರವಂಡ ಮನೋಜ್‌ ಮಂದಪ್ಪ ತಿಳಿಸಿದ್ದಾರೆ. ನಡುಬಾಡೆಗೆ ಮಾಹಿತಿ ನೀಡಿರುವ ಅವರು, ಕೊಡಗು ಬಿಜೆಪಿ ಘಟಕದ ವತಿಯಿಂದ, […]

Continue Reading

ಕೇಂದ್ರ ಸರ್ಕಾರದಿಂದ 5.8ಕೋಟಿ BPL ಕಾರ್ಡ್‌ ಅನರ್ಹ, ಅದೇ ಮಾನದಂಡ ಬಳಸಿದ್ದೇವೆ ಎಂದ ಕರ್ನಾಟಕ. ಅರ್ಹರ ರದ್ದತಿ ಹಿಂಪಡೆಯಲು CM ಆದೇಶ…

ನವದೆಹಲಿ ನ.21: ಆಹಾರ ಭದ್ರತಾ ಯೋಜನೆಯಡಿಯಲ್ಲಿ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಕೇಂದ್ರ ಸರ್ಕಾರವು ದೇಶದಲ್ಲಿ 5.8 ಕೋಟಿ ನಕಲಿ BPL ಪಡಿತರ ಚೀಟಿಗಳನ್ನು ರದ್ದುಪಡಿಸಿದ್ದು, ಉಳಿದವು ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಆಹಾರ ಸಚಿವಾಲಯ ಬುಧವಾರ ತಿಳಿಸಿದೆ. ಸಾರ್ವಜನಿಕ ಪಡಿತರ ವ್ಯವಸ್ಥೆಯ ಡಿಜಿಟಲೀಕರಣಕ್ಕೆ ದೇಶದಲ್ಲಿ ಚಾಲನೆ ನೀಡಲಾಗಿದ್ದು, ಒಟ್ಟು 80.6 ಕೋಟಿ ಪಡಿತರ ಚೀಟಿಗಳನ್ನು ಹೊಂದಿದ ಕುಟುಂಬಗಳಿವೆ. ಆಧಾರ್‌ ಸಂಖ್ಯೆ  ಪರಿಶೀಲನೆ ಪ್ರಕ್ರಿಯೆ ಮೂಲಕ ಈ ನಕಲಿ ಚೀಟಿಗಳನ್ನು ಪತ್ತೆ ಹಚ್ಚಲಾಗುತ್ತಿದೆ  ಎಂದು ಸರ್ಕಾರ ಹೇಳಿದೆ. […]

Continue Reading

ಗೂಗಲ್‌ ಮೀಟ್‌ನಲ್ಲಿ ನಡೆದ, ಕರ್ನಾಟಕ  ಲೇಖಕಿಯರ ಸಂಘ ಕೊಡಗು ಶಾಖೆಯ ವಾರ್ಷಿಕ ಸಭೆ

            ಟಿ.ಶೆಟ್ಟಿಗೇರಿ, ನ.20:    ಕರ್ನಾಟಕ  ಲೇಖಕಿಯರ ಸಂಘ ಕೊಡಗು ಶಾಖೆಯ ವಾರ್ಷಿಕ ಸಭೆಯು ಗೂಗಲ್‌ ಮೀಟ್‌ ವೆಬಿನಾರ್‌ನಲ್ಲಿ, ದಿನಾಂಕ  17-11-2024 ರಂದು ಅಧ್ಯಕ್ಷರಾದ  ಶ್ರೀಮತಿ ವಿಜಯ ವಿಷ್ಣು ಭಟ್ ಅವರ ಸಮ್ಮುಖದಲ್ಲಿ ನಡೆದು, ಮುಂದಿನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀಮತಿ ವಿಜಯ ವಿಷ್ಣು ಭಟ್ ಅವರು ಪುನರಾಯ್ಕೆಯಾದರೆ,ಉಪಾಧ್ಯಕ್ಷರಾಗಿ ಶ್ರೀಮತಿ ಉಳುವಂಗಡ ಕಾವೇರಿ ಉದಯ, ಕಾರ್ಯದರ್ಶಿಯಾಗಿ ಶ್ರೀಮತಿ  ಶರ್ಮಿಳಾ ರಮೇಶ್ ಮತ್ತು ನಿರ್ದೇಶಕರನ್ನಾಗಿ, ಶ್ರೀಮತಿ ಜಯಲಕ್ಷ್ಮಿ ಎಂ. ಬಿ , ಶ್ರೀಮತಿ ಶೋಭ ರಕ್ಷಿತ್ […]

Continue Reading

ಹತ್ತು ಸಾವಿರದಲ್ಲಿ ಹತ್ತು ಏಕರೆ ಜಾಗ ಖರೀದಿಸಿ ಕಟ್ಟಿದ, ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ(MCPCS), ಬೆಳೆದು, ಅಳಿದು, ಉಳಿದ ರೋಚಕ, ಐತಿಹಾಸಿಕ ಕಥೆ…

          ಮೈಸೂರು ಮಹಾನಗರದೊಳಗೆ, ಹತ್ತು ಏಕರೆ ಜಾಗ ಹೊಂದುವುದೆಂದರೆ ಅದೊಂದು ಸಾಧನೆಯೇ ಸರಿ. ಆದರೆ ಈ ಹತ್ತು ಏಕರೆಯನ್ನು ಕೇವಲ ಹತ್ತು ಸಾವಿರಕ್ಕೆ ಖರೀದಿಸಿದರೆ ಅದು ರೋಚಕ ಮತ್ತು ರೋಮಾಂಚನಕಾರಿ. ಅಂತಹದ್ದೇ ಒಂದು ರೋಮಾಂಚನಕಾರಿ ಕಥೆಯಾದರೂ ವಾಸ್ತವ ಸತ್ಯ, ದಿ. ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘದ ಇತಿಹಾಸ.           ಅದು 1959ನೇ ಇಸವಿ, ಆಗ ಕೊಡಗಿನಲ್ಲಿ ದೈತ್ಯವಾಗಿ ಬೆಳೆದಿದ್ದ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದೊಳಗಿನ ರಾಜಕೀಯ ಮೇಲಾಟಕ್ಕೆ ಶೆಡ್ಡು ಹೊಡೆದ, ಅಂದಿನ ಸಹಕಾರೀ ಧುರೀಣ, […]

Continue Reading

65ರ ಭಾರತ-ಪಾಕ್‌ ಸಮರ ವೀರ ಹುತಾತ್ಮ,  ಕೂಕಂಡ ಎನ್ .ಪೊನ್ನಪ್ಪ ರಸ್ತೆ  ಪೊನ್ನಂಪೇಟೆಯಲ್ಲಿ ಅನಾವರಣ.

  ಪೊನ್ನಂಪೇಟೆ ನ.19:(ಪುತ್ತರಿರ ಕರುಣ್‌ ಕಾಳಯ್ಯ):- 1965ರ ಇಂಡೋ-ಪಾಕಿಸ್ತಾನ ಯುದ್ದದಲ್ಲಿ ವೀರಮರಣನಪ್ಪಿದ ನಾಯಕ್ ಕೂಕಂಡ ಎನ್ . ಪೊನ್ನಪ್ಪನವರ ನೆನಪಿಗಾಗಿ ಪೊನ್ನಂಪೇಟೆಯ ಜೋಡು ಬೀಟಿ- ಕುಂದ ಸಂಪರ್ಕ ರಸ್ತೆಗೆ ದಿವಂಗತ ಕೂಕಂಡ. ಎನ್.ಪೊನ್ನಪ್ಪ ರಸ್ತೆ ಎಂದು ನಾಮಕರಣ ಅನಾವರಣ ಮಾಡಲಾಯಿತು.             ನಾಮ ಫಲಕ ಉದ್ಘಾಟನೆ ಮಾಡಿ ಮಾತನಾಡಿದ, ಅಖಿಲ ಕರ್ನಾಟಕ ಮಾಜಿ ಯೋಧರ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷರಾದ ಕೊಟ್ಟುಕತ್ತಿರ ಸೋಮಣ್ಣ ಅವರು,  ಅದೆಷ್ಟೋ ವೀರಯೋಧರು ದೇಶಕ್ಕಾಗಿ ಸೇವೆಸಲ್ಲಿಸಿದರೂ ಅವರ ನೆನಪು ಮಾತ್ರ ಜನಮಾನಸದಲ್ಲಿ ಉಳಿದಿಲ್ಲ, […]

Continue Reading