ಭಾಗವಧ್ವಜದ ಎದುರು ಕುಪ್ಯಚಾಲೆಗೆ ಅವಮಾನ :  ವಿಶ್ವ ಹಿಂದೂ ಪರಿಷತ್‌ ಅಮ್ಮತ್ತಿ ಘಟಕಕ್ಕೆ ರಾಜೀನಾಮೆ ಸಲ್ಲಿಸಿದ ಬಿದ್ದಂಡ ಪ್ರಥಮ್‌ ಕರುಂಬಯ್ಯ

            ಅಮ್ಮತ್ತಿ, ಡಿ.31: ದಿನಗಳ ಹಿಂದೆ ಕಟ್ಟೆಮಾಡಿನಲ್ಲಿ ನಡೆದ ಮಾಮೃತ್ಯುಂಜಯ ದೇವಾಲಯದ ವಾರ್ಷಿಕೋತ್ಸವ ಸಂದರ್ಭದಲ್ಲಿ, ಕೆಲ ಕಿಡಿಗೇಡಿಗಳು ಭಾಗವದ್ವಜ ಹಿಡಿದು, ಕೇಸರಿ ಶಲ್ಯ ಧರಿಸಿ ನಿಂತು ಕುಪ್ಯಚಾಲೆಗೆ ಅವಮಾನ ಮಾಡಿದ ಘಟೆನೆಗೆ ಸಂಭಂದಿಸಿದಂತೆ, ಸಂಘ ಪರಿವಾರ ಈ ವರೆಗೂ ಮೌನವಹಿಸಿರುವ ಘಟನೆಯನ್ನು ಖಂಡಿಸಿ, ವಿಶ್ವ ಹಿಂದೂ ಪರಿಷತ್‌ ಅಮ್ಮತ್ತಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ವಕೀಲರೂ ಆಗಿರುವ ಬಿದ್ದಂಡ  ಪ್ರಥಮ್‌ ಕರುಂಬಯ್ಯ ರಾಜೀನಾಮೆ ನೀಡಿದ್ದಾರೆ.             ಘಟನೆ ನಡೆದು ಹಲವು ದಿಗಳೇ ಕಳೆದರೂ ಸಂಘಪರಿವಾ, ಈ ವರೆಗೂ […]

Continue Reading

ಮನಸ್ಸಿನ ಅರಿವು-ವಿವರಣೆ-ವಿಶ್ಲೇಷಣೆ : ಕೊ. ಮಾಳೇಟಿರ ಸೀತಮ್ಮ ವಿವೇಕ್

ಜೀವ ಜಗತ್ತು ಅಸ್ತಿತ್ವದಲ್ಲಿ ಇರುವುದು, ಜಗತ್ತಿನ ಜೀವಂತಿಕೆಯಿಂದ. ಆದರೆ ಮನುಷ್ಯ ತನ್ನ ಅನುಕೂಲಕ್ಕೆ ಅನುಗುಣವಾಗಿ ನಿರ್ಮಿಸಿಕೊಂಡು ಬಂದಿರುವ ಅಲೌಕಿಕತೆ ಮತ್ತು ಗ್ರಂಥ ಕಟ್ಟುಪಾಡುಗಳಿಂದಾಗಿ ಲೋಕದ ಅಸ್ತಿತ್ವದ ಕುರಿತು ವಾಸ್ತವ ವಿಚಾರಗಳ ಮಂಥನ ಮಾಡುವುದಕ್ಕಿಂತ ಮೂಢ ನಂಬಿಕೆಗಳಿಗೆ ಶರಣಾಗುತ್ತಾ ಬಂದಿದ್ದಾನೆ. ಬುದ್ಧ, ಮಹಾವೀರ, ಚಾರ್ವಕ, ಸಿದ್ಧ ಸಾಧಕರು ಭೂಮಿಯಲ್ಲಿ ಆರೋಗ್ಯಕರವಾಗಿ ಬದುಕುವಂತೆ ಮಾಡಲು  “ಬದುಕು ಬದುಕಲು ಬಿಡು”, “ಕೊಲ್ಲುವವರಿಗಿಂತ ಕಾಯುವವನು ಮೇಲು” “ಅಹಂ ಬ್ರಹ್ಮಾಸ್ಮಿ” ಇತ್ಯಾದಿಯಾಗಿ ನೈಜ ವಿಚಾರಗಳನ್ನು ಪ್ರಚಾರ ಪಡಿಸಿದ್ದರೂ, ಜೀವ ಜೀವನದ ತಳಪಾಯವಾದ ಮನಸ್ಸು ಮತ್ತು […]

Continue Reading

ನಡುಬಾಡೆ ದ್ವಿಭಾಷಾ ಕ್ಯಾಲೆಂಡರ್‌ ಅನಾವರಣ ಮಾಡಿದ, ಎಲ್.ಎ.ಸಿ. & ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ

ಬೆಂಗಳೂರು, ಡಿ.29: ನಡುಬಾಡೆ ದ್ವಿಭಾಷ ವೆಬ್‌ ಪೋರ್ಟಾಲ್‌ ಹೊರತಂದಿರುವ 2025ನೇ ವರ್ಷದ ಕ್ಯಾಲೆಂಡರನ್ನು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಅನಾವರಣ ಮಾಡಿದರು. ಬೆಂಗಳೂರಿನ ತಮ್ಮ ಖಾಸಗೀ ಕಛೇರಿಯಲ್ಲಿ ನೂತನ ದ್ವಿಭಾಷಾ ಕ್ಯಾಲೇಂಡರ್ ಬಿಡುಗಡೆ ಮಾಡಿ, ಮಾತನಾಡಿದ ಪೊನ್ನಣ್ಣ ಅವರು, ಆಧುನಿಕ ಯುಗದಲ್ಲಿ ಡಿಜಿಟಲ್‌ ಮಾಧ್ಯಮಗಳು ಹೆಚ್ಚು ಪರಿಣಾಮಕಾರಿ ಪ್ರಭಾವ ಬೀರುತಿದ್ದು, ಸಮಾಜಕ್ಕೆ ನೈಜತೆಯನ್ನು ತಿಳಿಸುವ ಹೊಣೆಗಾರಿಕೆಯನ್ನೂ ಹೊಂದಿದೆ ಎಂದರಲ್ಲದೆ, ಕೊಡವ ಮತ್ತು ಕನ್ನಡ ಭಾಷೆಯಲ್ಲಿ ಹೊರಬರುತ್ತಿರುವ ನಡುಬಾಡೆ ವೆಬ್‌ […]

Continue Reading

ಕಟ್ಟೆಮಾಡ್‌ನಲ್ಲಿ ನಡೆದ ಸಾಂಪ್ರದಾಯಿಕತೆಯ ಹಾಸ್ಯ ಪ್ರಸಂಗ: ಇದು ಶತಮಾನದ ಜೋಕು

ಕಳೆದ ಎರಡು ದಿನಗಳಿಂದ ಕೊಡಗಿನ ಮೂರ್ನಾಡು ಸಮೀಪದ ಕಟ್ಟೆಮಾಡು ಮಹಾ ಮೃತ್ಯುಂಜಯ ದೇವಸ್ಥಾನದ ಉತ್ಸವದಲ್ಲಿ ಉಡುಪಿನ ಬಗ್ಗೆ ವಿವಾದ ಎದ್ದು, ಇಂದು ತಾರಕದಲ್ಲಿ ವಾದ ವಿವಾದಗಳು ನಡೆಯುತ್ತಿವೆ.             ಈ ಎಲ್ಲಾ ಗೊಂದಲಕ್ಕೆ ಮತ್ತು ವಿವಾದಕ್ಕೆ ಮೂಲ ಕಾರಣ ದೇವಸ್ಥಾನ ಸಮಿತಿಯ ಆಂತರಿಕ ನಿಯಮಾವಳಿ (ಬೈಲಾ). ಸಮಿತಿಯವರ ಹೇಳಿಕೆಯ ಪ್ರಕಾರ ಬೈಲಾದಲ್ಲಿ ಸಾಂಪ್ರದಾಯಿಕ ಉಡುಪಿಗೆ ಅವಕಾಶ ಇಲ್ಲ, ಹಾಗಾಗಿ ಕುಪ್ಯಚಾಲೆ ಧರಿಸಬಾರದು ಎಂಬುದು. ಇದೆಂತ ಮೂರ್ಖತನದ ಪರಮಾವಧಿ ಎಂದರೆ ಅವರು ತೊಟ್ಟಿದ್ದೂ ಕೂಡ ಸಾಂಪ್ರದಾಯಿಕ ಉಡುಪು ಎನ್ನುವ  […]

Continue Reading

ವಿರಾಜಪೇಟೆ ನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಪೂಜಾ ಮಹೋತ್ಸವ

ವಿರಾಜಪೇಟೆ,ಡಿ.30:( ಕಿಶೋರ್ ಕುಮಾರ್ ಶೆಟ್ಟಿ) ವೀರಾಜೆಪೇಟೆ ನಗರಕ್ಕೆ ಕಳಶ ಪ್ರಾಯದಂತಿರುವ ಮಲೆ ತಿರಿಕೆ ಬೆಟ್ಟದಲ್ಲಿ ಸ್ಥಾಪಿತವಾಗಿರುವ ಶ್ರಿ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಪೂಜಾ ಮಹೋತ್ಸವಗಳು ವಿಜ್ರಂಭಣೆಯಿಂದ ನಡೆಯಲಿದೆ. ಶ್ರೀ ಅಯ್ಯಪ್ಪ ಸೇವಾ ಸಮಿತಿ ಮಲೆತಿರಿಕೆ ಬೆಟ್ಟ ವಿರಾಜಪೇಟೆ ವತಿಯಿಂದ ದಿನಾಂಕ: 30,31 ಮತ್ತು 01ರಂದು ವಿಶೇಷ ವಾರ್ಷಿಕ ಪೂಜಾ ಮಹೋತ್ಸವಗಳು ನಡೆಯಲಿದೆ. ವಾರ್ಷಿಕ ಪೂಜಾ ಮಹೋತ್ಸವಗಳು ತಾ. 25 ಮತ್ತು 26 ರಂದು ಕ್ಷೇತ್ರಪಾಲಕ ಗುಳಿಗ ಪೂಜೆ ಮತ್ತು ಮಂಡಲ ಪೂಜೆಯೊಂದಿಗೆ ಆರಂಭವಾಯಿತು. ತಾ 30 […]

Continue Reading

ಆರ್ಜಿಯಲ್ಲಿ ಶ್ರದ್ದಾ ಭಕ್ತಿಯಿಂದ ಜರುಗಿದ ಕಲಿಯುಗ ವರದ ಶ್ರಿ ಅಯ್ಯಪ್ಪ ಸ್ವಾಮಿ ಮಂಡಲ ಪೂಜಾ ಮಹೋತ್ಸವ

ವಿರಾಜಪೇಟೆ: ಡಿ:27: (ಕಿಶೋರ್ ಕುಮಾರ್ ಶೆಟ್ಟಿ) ಕಾನನ ವಾಸ ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ಪಾಮಿಯ ವಾರ್ಷಿಕ ಮಂಡಲ ಪೂಜಾ ಮಹೋತ್ಸವ ಶ್ರಧ್ದಾ ಭಕ್ತಿಯಿಂದ ಜರುಗಿತು. ಶ್ರೀ ಸ್ವಾಮಿ ಅಯ್ಯಪ್ಪ ಭಜನಾ ಮಂದಿರ ಆರ್ಜಿ ಗ್ರಾಮ, ಪೆರುಂಬಾಡಿ ವಿರಾಜಪೇಟೆ ವತಿಯಿಂದ 29 ನೇ ವರ್ಷದ ಮಂಡಲ ಪೂಜಾ ಮಹೋತ್ಸವ ಶ್ರಧ್ದಾ ಭಕ್ತಿಯಿಂದ ಜರುಗಿತು. ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಅರಂಭವಾದ ಮಂಡಲ ಪೂಜಾ ಮಹೋತ್ಸವವು ಶ್ರೀ ಅಯ್ಯಪ್ಪನ ಭಜನೆ ನಡೆಯಿತು. ಮದ್ಯಾಹ್ನ ಶ್ರೀ ಸ್ವಾಮಿಗೆ ಮಾಹಾ ಪೂಜೆ ಸಲ್ಲಿಕೆಯಾಯಿತು. […]

Continue Reading

ಉಳ್ಳಿಯಡ ಡಾಟಿಪೂವಯ್ಯ ಅಯಿಂಗಡ ನಾಡ್‌ಲ್ ನಾಳ್… 11

 ಕೈಂಜ ವಾರತಿಂಜ…. ಚಿಮ್ಮ ತಾನ್ ನಿಂದ ಜಾಗತ್‌‌ನ ಮರ್‌ಂದತ್. ಅವಂಡ ಗ್ಯಾನ ಪೆರ್ತ್ ಬಯ್ಯಕ್ ಓಡ್‌ಚಿ. ಚೆರಿಯಂವೊನಾಯಿತಿಪ್ಪಕ ಅಣ್ಣಂಗ, ಅಕ್ಕಂಗ ಎಲ್ಲಾರು ಮಿಳ್ಳಿಚೊಂಬ್, ಕಾಫಿತಪ್ಪಲೇಂದ್ ಓರಬ್ಬ ಓರೊಂದ್ ಪಾತ್ರ ಎಡ್‌‌ತಂಡ್ ಅಮ್ಮಂಡ ಕೂಡ ನೀರ್‌ಕ್ ಬಪ್ಪಯಿಂಜದ್; ತಪ್ಪಲೆ ಮಂಡೆಲ್ ಬೆಚ್ಚಂಡ್ ನಿಂದ ಅಮ್ಮಂಡ ಅರೆಕ್ ಬಿಂದಿಗೆ ಬೆಚ್ಚಿ ಕೊಡ್‌ಪಯಿಂಜದ್; ಕೆರೆರ ಬಲ್‌ತೆ ಬರಿ ಮಾಳತ್ ಕೈಲ್‌ಪೋದ್‌ಕ್ ಒಮ್ಮಲೆ ನಾಲಂಜಿ ಪಂದಿನ ಕರ್‌ಚಿತ್ ಚಾಯಿ ಕೂಟುವಕ ಐನ್‌ಮನೆರ 10-20 ಮಕ್ಕ ಕೆರೆರ ನೀರ್ ಕೋತಿಯಂಡ್ ಓಡಿ ಓಡಿ ಪೋಯಿತ್ […]

Continue Reading

ಕೆದಮುಳ್ಳೂರು ವಲಯ ಕಾಂಗ್ರೇಸ್‌ನಿಂದ, ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ರಿಗೆ ಶ್ರದ್ದಾಂಜಲಿ

ಪಾಲಂಗಾಲ, ಡಿ.27:(ಕರಿನೆರವಂಡ ಡ್ಯಾನಿ ಕುಶಾಲಪ್ಪ) ಕೆದಮುಳ್ಳೂರು ವಲಯ ಕಾಂಗ್ರೆಸ್ ವತಿಯಿಂದ ನಿನ್ನೆ ರಾತ್ರಿ ನಿಧನರಾದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.  ಕೆಧಮುಳ್ಳೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಶ್ರದ್ಧಾಂಜಲಿ ಸಭೆ ನಡೆಸಿ, ಅಗಲಿದ ಚೇತನಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ನಡಿಕೇರಿಯೆಂಡ  ಮಹೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಫ್ರಿಉತ್ತಪ್ಪ,  ವಿರಾಜಪೇಟೆ ಕೆಡಿಪಿ ಸದಸ್ಯರಾದ ಮಾಳೆಟ್ಟಿರ ಪ್ರಶಾಂತ್ಉತ್ತಪ್ಪ,  ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಎಂ ಇಸ್ಮಾಯಿಲ್,  ಮಾಜಿ ಗ್ರಾಮ  ಪಂಚಾಯಿತಿ […]

Continue Reading

ಕೊಡವರ ಶೌರ್ಯದೊಂದಿಗೆ ಮೈಸೂರು ರಾಜವಂಶದ ಐತಿಹಾಸಿಕ ಸಂಬಂಧ ಬೆಸೆದಿದೆ: ಸಂಸದ ಯಧುವೀರ್‌ ಒಡೆಯರ್

          ಸೋಮವಾರಪೇಟೆ, ಡಿ.27: (ತೇಲಪಂಡ ಕವನ್‌ ಕಾರ್ಯಪ್ಪ)  ಕೊಡವರ ಶೌರ್ಯದೊಂದಿಗೆ ಮೈಸೂರು ರಾಜ ವಂಶಸ್ಥರಿಕ್ಕೆ ಐತಿಹಾಸಿಕ ಸಂಬಂಧವಿದೆ ಎಂದು ಕೊಡಗು-ಮೈಸೂರು ಸಂಸದರಾದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಬುಧವಾರ ಕೊಡವ ಸಮಾಜದಲ್ಲಿ ನಡೆದ ಸೋಮವಾರಪೇಟೆ ಕೊಡವ ಸಮಾಜದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.   ಹೈದರಾಲಿ ಮತ್ತು ಟಿಪ್ಪು ಮೈಸೂರು ಸಂಸ್ಥಾನವನ್ನು ಹಿಡಿತಕ್ಕೆ ತೆಗೆದುಕೊಂಡ ಸಂದರ್ಭ, ಕೊಡಗಿನಲ್ಲಿ ಕೊಡವರ ಶೌರ್ಯದಿಂದ ಹೈದರಾಲಿ ಮತ್ತು ಟಿಪ್ಪುವಿನ ಪ್ರಾಬಲ್ಯವನ್ನು ಕುಂಠಿತಗೊಳಿಸಿದ ನಂತರ ಕೊಡಗು […]

Continue Reading

ಅಂತರ್‌ಜಿಲ್ಲಾ ಶ್ರೀಗಂಧ ಕಳ್ಳರನ್ನ ಬಂಧಿಸಿದ ಅರಣ್ಯಾಧಿಕಾರಿಗಳು

ಸೋಮವಾರಪೇಟೆ, ಡಿ.27: (ತೇಲಪಂಡ ಕವನ್‌ ಕಾರ್ಯಪ್ಪ)  ಕಳೆದೆರಡು ವರ್ಷಗಳಿಂದ ಸೋಮವಾರಪೇಟೆ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಶ್ರೀಗಂಧ ಮರಗಳನ್ನು ಕಳ್ಳತನ ಮಾಡುತ್ತಿದ್ದ ಹೊರಜಿಲ್ಲೆಯ ಕಳ್ಳರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಈಚೆಗೆ ಬಂಧಿಸಿದ್ದಾರೆ. ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ ಬೀರನಹಳ್ಳಿ ಕಾವಲು ಗ್ರಾಮದ  ಮರಿಯಪ್ಪ ಎಂಬವರ ಪುತ್ರ ಚಂದ್ರು ಹಾಗೂ ಮಂಜು ಎಂಬವರ ಪುತ್ರ ಸುರೇಶ್ ಬಂಧಿತ ಆರೋಪಿಗಳು. ಪ್ರತಿನಿತ್ಯ ಸಣ್ಣ ಗಾತ್ರದ ಮರಗಳನ್ನು ಕಡಿದು ಮೂಟೆಗಳಲ್ಲಿ ಸಾಗಿಸಿ, ಬೆಮ್ಮತ್ತಿಯ ವ್ಯಕ್ತಿಯೋರ್ವನಿಗೆ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಪಡೆದ ಅರಣ್ಯ […]

Continue Reading