Site icon nadubadenews.com

ನಡುಬಾಡೆ ದ್ವಿಭಾಷಾ ಕ್ಯಾಲೆಂಡರ್‌ ಅನಾವರಣ ಮಾಡಿದ, ಎಲ್.ಎ.ಸಿ. & ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ

ನಡುಬಾಡೆ ದ್ವಿಭಾಷಾ ಕ್ಯಾಲೆಂಡರ್‌ ಅನಾವರಣ ಮಾಡಿದ, ಎಲ್.ಎ.ಸಿ. & ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ
Spread the love
ನಡುಬಾಡೆ ದ್ವಿಭಾಷಾ ಕ್ಯಾಲೆಂಡರ್‌ ಅನಾವರಣ ಮಾಡಿದ, ಎಲ್.ಎ.ಸಿ. & ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ

ಬೆಂಗಳೂರು, ಡಿ.29: ನಡುಬಾಡೆ ದ್ವಿಭಾಷ ವೆಬ್‌ ಪೋರ್ಟಾಲ್‌ ಹೊರತಂದಿರುವ 2025ನೇ ವರ್ಷದ ಕ್ಯಾಲೆಂಡರನ್ನು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಅನಾವರಣ ಮಾಡಿದರು.

ಬೆಂಗಳೂರಿನ ತಮ್ಮ ಖಾಸಗೀ ಕಛೇರಿಯಲ್ಲಿ ನೂತನ ದ್ವಿಭಾಷಾ ಕ್ಯಾಲೇಂಡರ್ ಬಿಡುಗಡೆ ಮಾಡಿ, ಮಾತನಾಡಿದ ಪೊನ್ನಣ್ಣ ಅವರು, ಆಧುನಿಕ ಯುಗದಲ್ಲಿ ಡಿಜಿಟಲ್‌ ಮಾಧ್ಯಮಗಳು ಹೆಚ್ಚು ಪರಿಣಾಮಕಾರಿ ಪ್ರಭಾವ ಬೀರುತಿದ್ದು, ಸಮಾಜಕ್ಕೆ ನೈಜತೆಯನ್ನು ತಿಳಿಸುವ ಹೊಣೆಗಾರಿಕೆಯನ್ನೂ ಹೊಂದಿದೆ ಎಂದರಲ್ಲದೆ, ಕೊಡವ ಮತ್ತು ಕನ್ನಡ ಭಾಷೆಯಲ್ಲಿ ಹೊರಬರುತ್ತಿರುವ ನಡುಬಾಡೆ ವೆಬ್‌ ನ್ಯೂಸನ್ನು ತಾವು ಗಮನಿಸುತಿದ್ದು, ಮುಂದೆ ಮತ್ತಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದು  ಸಮಾಜದ ಶಕ್ತಿಯಾಗಲಿ ಎಂದು ಆಶಿಸಿದರಲ್ಲದೆ,  ನಡುಬಾಡೆ ತಂಡ ಹೊರ ತಂದಿರುವ ಕೊಡವ ಮತ್ತು ಕನ್ನಡ ಭಾಷೆಯಲ್ಲಿ ಹೊರಬಂದಿರುವ ಕ್ಯಾಲೇಂಡರ್‌ ಕೂಡ ವರ್ಣರಂಜಿತವಾಗಿದ್ದು,  ಉತ್ತಮ ಮಾಹಿತಿಯನ್ನು ಒಳಗೊಂಡಿದೆ. ತಂಡಕ್ಕೆ ಶುಭಾಷಯದೊಂದಿಗೆ ನಾಡಿನ ಜನತೆಗೂ 2025ರ ಕ್ಯಾಲೇಂಡರ್‌ ವರ್ಷ ಒಳಿತು ಮಾಡಲಿ ಎಂದು  ಹಾರೈಸಿದರು.

ಈ ಸಂದರ್ಭ ನಡುಬಾಡೆ ಸಂಪಾದಕ ಚಾಮೆರ ದಿನೇಶ್‌ಬೆಳ್ಯಪ್ಪ ಮತ್ತು ತಂಡ ಉಪಸ್ಥಿತರಿದ್ದರು.

Exit mobile version