Site icon nadubadenews.com

ಭಾಗವಧ್ವಜದ ಎದುರು ಕುಪ್ಯಚಾಲೆಗೆ ಅವಮಾನ :  ವಿಶ್ವ ಹಿಂದೂ ಪರಿಷತ್‌ ಅಮ್ಮತ್ತಿ ಘಟಕಕ್ಕೆ ರಾಜೀನಾಮೆ ಸಲ್ಲಿಸಿದ ಬಿದ್ದಂಡ ಪ್ರಥಮ್‌ ಕರುಂಬಯ್ಯ

ಭಾಗವಧ್ವಜದ ಎದುರು ಕುಪ್ಯಚಾಲೆಗೆ ಅವಮಾನ :  ವಿಶ್ವ ಹಿಂದೂ ಪರಿಷತ್‌ ಅಮ್ಮತ್ತಿ ಘಟಕಕ್ಕೆ ರಾಜೀನಾಮೆ ಸಲ್ಲಿಸಿದ ಬಿದ್ದಂಡ ಪ್ರಥಮ್‌ ಕರುಂಬಯ್ಯ
Spread the love
ಭಾಗವಧ್ವಜದ ಎದುರು ಕುಪ್ಯಚಾಲೆಗೆ ಅವಮಾನ :  ವಿಶ್ವ ಹಿಂದೂ ಪರಿಷತ್‌ ಅಮ್ಮತ್ತಿ ಘಟಕಕ್ಕೆ ರಾಜೀನಾಮೆ ಸಲ್ಲಿಸಿದ ಬಿದ್ದಂಡ ಪ್ರಥಮ್‌ ಕರುಂಬಯ್ಯ

            ಅಮ್ಮತ್ತಿ, ಡಿ.31: ದಿನಗಳ ಹಿಂದೆ ಕಟ್ಟೆಮಾಡಿನಲ್ಲಿ ನಡೆದ ಮಾಮೃತ್ಯುಂಜಯ ದೇವಾಲಯದ ವಾರ್ಷಿಕೋತ್ಸವ ಸಂದರ್ಭದಲ್ಲಿ, ಕೆಲ ಕಿಡಿಗೇಡಿಗಳು ಭಾಗವದ್ವಜ ಹಿಡಿದು, ಕೇಸರಿ ಶಲ್ಯ ಧರಿಸಿ ನಿಂತು ಕುಪ್ಯಚಾಲೆಗೆ ಅವಮಾನ ಮಾಡಿದ ಘಟೆನೆಗೆ ಸಂಭಂದಿಸಿದಂತೆ, ಸಂಘ ಪರಿವಾರ ಈ ವರೆಗೂ ಮೌನವಹಿಸಿರುವ ಘಟನೆಯನ್ನು ಖಂಡಿಸಿ, ವಿಶ್ವ ಹಿಂದೂ ಪರಿಷತ್‌ ಅಮ್ಮತ್ತಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ವಕೀಲರೂ ಆಗಿರುವ ಬಿದ್ದಂಡ  ಪ್ರಥಮ್‌ ಕರುಂಬಯ್ಯ ರಾಜೀನಾಮೆ ನೀಡಿದ್ದಾರೆ.

            ಘಟನೆ ನಡೆದು ಹಲವು ದಿಗಳೇ ಕಳೆದರೂ ಸಂಘಪರಿವಾ, ಈ ವರೆಗೂ ಯಾವುದೇ ಹೇಳಿಕೆಯನ್ನ ನೀಡಿಲ್ಲ.  ಸಮಾಜದ ರಕ್ಷಣೆಯ ಪಣತೊಟ್ಟಿರುವ ಪವಿತ್ರ ಭಾಗವದ್ವಜದ ಕೆಳಗೆ ನಿಂತು, ಕೊಡವರನ್ನು ಅವಮಾನಿಸಿದರೂ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದರೂ,  ಸಂಘ ಪರಿವಾರದ ಯಾವೊಬ್ಬ ನಾಯಕನೂ ಪ್ರತಿಕ್ರಿಯೆ ಮಾಡಿಲ್ಲ ಮತ್ತು ಘಟನೆಯನ್ನು ಖಂಡಿಸಿಲ್ಲ ಎಂದು ಆಕ್ರೋಷ ವ್ಯಕ್ತ ಪಡಿಸಿರುವ ಬಿದ್ದಂಡ ಪ್ರಥಮ್‌ ಕರುಂಬಯ್ಯ ಅವರು, ನಾನೊಬ್ಬ ಕೊಡವನಾಗಿ ಹುಟ್ಟಿ, ಕೊಡವನಾಗಿಯೇ ಸಾಯಲು ಯಸುತ್ತೇನೆ  ಹಾಗೂ ನನ್ನ ಪವಿತ್ರ ಉಡುಪಿಗೆ ಆಗಿರುವ ಅವಮಾನವನ್ನು ಸಹಿಸಿ ಸುಮ್ಮನಿರಲು ಸಾಧ್ಯವಿಲ್ಲ.  ಹಾಗಾಗಿ ತಕ್ಷಣದಿಂದ ಅಮ್ಮತ್ತಿ ವಿಶ್ವ ಹಿಂದೂ ಘಟಕಕ್ಕೆ ರಾಜೀನಾಮೆ ನೀಡಿದ್ದು, ಇತರ ಜೊತೆಗೆ ಸಂಘ ಪರಿವಾರ ಘಟನೆಯ ಕುರಿತು ತನ್ನ ಪ್ರತಿಕ್ರಿಯೆ ನೀಡಬೇಕು ಮತ್ತು ಘಟನೆಯನ್ನು ಖಂಡಿಸಬೇಕು ಹಾಗೂ ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Exit mobile version