ನಾಳೆ ಪಿಂಚಣಿ ದಿನ…

ಮಡಿಕೇರಿ ಏ.28: ಪಿಂಚಣಿ ದಿನವು ಏಪ್ರಿಲ್, 29 ರಂದು (ನಾಳೆ) ಬೆಳಗ್ಗೆ 11 ಗಂಟೆಗೆ ಮಡಿಕೇರಿ ತಾಲ್ಲೂಕು ಸಂಪಾಜೆ ಹೋಬಳಿ ಸಂಪಾಜೆ ನಾಡ ಕಚೇರಿಯಲ್ಲಿ ನಡೆಯಲಿದೆ. ಈ ದಿನದಂದು ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಮಾಸಾಶನಗಳ ಫಲಾನುಭವಿಗಳು ಕುಂದುಕೊರತೆಗಳನ್ನು ನೊಂದಾಯಿಸುವಂತೆ ಮಡಿಕೇರಿ ತಾಲ್ಲೂಕು ತಹಶೀಲ್ದಾರ್ ಪ್ರವೀಣ್ ಪಿ.ಸಿ. ಅವರು ತಿಳಿಸಿದ್ದಾರೆ.

Continue Reading

ವಿರಾಜಪೇಟೆಯ ಅಭಿವೃದ್ದಿ ಹೆಸರಲ್ಲಿ ಸರ್ಕಾರದ ಹಣ ಪೋಲು: ನಾಗರೀಕ ಸಮಿತಿ ಆರೋಪ

ವಿರಾಜಪೇಟೆ: ಎ:28: (ಕಿಶೋರ್‌ ಕುಮಾರ್‌ ಶೆಟ್ಟಿ) ನಗರದಲ್ಲಿ ರಸ್ತೆ ದುರಸ್ಥಿ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಪಾದಚಾರಿ ರಸ್ತೆ, ಬೀದಿ ದೀಪ ಸೇರಿದಂತೆ  ಹಲವಾರು ಮೂಲಭೂತ ಸಮಸ್ಯೆಗಳಿದ್ದರೂ, ನಿರ್ಧಿಷ್ಟವಾದ ಯೋಜನೆಗಳಿಗೆ ವಿನಿಯೋಗವಾಗದೆ. ಅಭಿವೃದ್ದಿ ಹೆಸರಿನಲ್ಲಿ ಜನ ಸಮಾನ್ಯರ ತೆರಿಗೆ ಹಣ ಪೋಲಾಗುತ್ತಿದೆ,  ದುಂದುವೆಚ್ಚಕ್ಕೆ ಸರ್ಕಾರದ ಹಣ ಸಂದಾಯವಾಗುತ್ತಿದೆ. ಎಂದು ನಾಗರಿಕ ಸಮಿತಿಯು ಆರೋಪಿಸಿದೆ. ನಾಗರಿಕ ಸಮಿತಿ ವಿರಾಜಪೇಟೆ ವತಿಯಿಂದ ನಗರದ ದೊಡ್ಡಟ್ಟಿ ಚೌಕಿ ಬಳಿಯ ಕಛೇರಿಯಲ್ಲಿ ನಗರದ ಸಮಸ್ಯೆಗಳ ಚಿತ್ರಣವನ್ನು ಮುಖ್ಯಾಧೀಕಾರಿಗಳಿಗೆ ಮನದಟ್ಟು ಮಾಡಿರುವ ವಿಚಾರಕ್ಕೆ ಸಂಭದಿಸಿದಂತೆ […]

Continue Reading

ಏ.29 ರಂದು ಸಾರಿಗೆ ಅದಾಲತ್…

ಮಡಿಕೇರಿ ಏ.28:   ಪ್ರಾದೇಶಿಕ ಸಾರಿಗೆ ಕಚೇರಿ ಸಭಾಂಗಣದಲ್ಲಿ ಏಪ್ರಿಲ್, 29 ರಂದು ಮಧ್ಯಾಹ್ನ 3 ಗಂಟೆಗೆ ಸಾರಿಗೆ ಅದಾಲತ್ ನಡೆಯಲಿದೆ. ಸಾರ್ವಜನಿಕರು ಸಾರಿಗೆ ಇಲಾಖೆಯ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ತಮ್ಮ ಕುಂದುಕೊರತೆಯ ಅಹವಾಲನ್ನು ಸಲ್ಲಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗರಾಜಚಾರ್ ಅವರು ಕೋರಿದ್ದಾರೆ.

Continue Reading

 ದೇಶ ಮತ್ತು ರಾಜ್ಯದಲ್ಲಿ ಹಾಕಿ ಜೀವಂತವಾಗಿರಲು ಕೊಡವರು ಕಾರಣ‌ :ಮುದ್ದಂಡ ಕಪ್ ಹಾಕಿ ನಮ್ಮೆಯ ಸಮಾರೋಪದಲ್ಲಿ ಗೃಹಸಚಿವ, ಡಾ.ಪರಮೇಶ್ವರ್ ಶ್ಲಾಘನೆ…

ಮಡಿಕೇರಿ ಏ.27 : ದೇಶ ಮತ್ತು ರಾಜ್ಯದಲ್ಲಿ ಹಾಕಿ ಕ್ರೀಡೆ ಜೀವಂತವಾಗಿರಲು ಕೊಡವರು ಕಾರಣ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಶ್ಲಾಘಿಸಿದ್ದಾರೆ. ಕೊಡವ ಕುಟುಂಬ ತಂಡಗಳ ನಡುವಿನ ಮುದ್ದಂಡ ಕಪ್ ಹಾಕಿ ಉತ್ಸವದ ಅಂತಿಮ ಪಂದ್ಯಾವಳಿಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.       ಹಾಕಿ ಕ್ರೀಡೆಗೆ 4 ಸಾವಿರ ವರ್ಷಗಳ ಇತಿಹಾಸವಿದೆ, ಈಜಿಪ್ಟ್ ನಲ್ಲಿ ಆರಂಭಗೊಂಡ ಹಾಕಿ ಬ್ರಿಟಿಷರ ಮೂಲಕ ಭಾರತಕ್ಕೆ ಬಂತು. ಈ ಕ್ರೀಡೆ ಪ್ರಖ್ಯಾತಿಯನ್ನು ಪಡೆದು ದೇಶದ ಕೀರ್ತಿ ಮತ್ತು ಗೌರವವನ್ನು ಕಾಪಾಡಿದೆ. […]

Continue Reading

ಮುದ್ದಂಡ ಕಪ್ ಹಾಕಿ ನಮ್ಮೆ, ಚಾಂಪಿಯನ್ ಕಿರೀಟ ಹೊತ್ತ ಮಂಡೇಪಂಡ ಒಕ್ಕ…

ಮಡಿಕೇರಿ ಏ.27 : ಕೊಡವ ಕೌಟುಂಬಿಕ ‘ಮುದ್ದಂಡ ಕಪ್ ಹಾಕಿ ಉತ್ಸವ’ದ ಅಂತಿಮ ಪಂದ್ಯ ಮಳೆಯಿಂದ ಬಾಧಿತವಾಗಿ, ನಿಯಮಗಳಂತೆ ಪಂದ್ಯ ನಿಲುಗಡೆಗೂ ಮುನ್ನ ಏಕೈಕ ಗೋಲಿನ ಮುನ್ನಡೆ ಪಡೆದಿದ್ದ ‘ಮಂಡೇಪಂಡ’ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಬೆಳ್ಳಿ ಮಹೋತ್ಸವದ ಪಂದ್ಯಾವಳಿಯ ಚಾಂಪಿಯನ್ ಪಟ್ಟವನ್ನು ಮಂಡೇಪಂಡ ಅಲಂಕರಿಸಿತು.  ಕಾರ್ಮೋಡಗಳು ಕವಿದ ವಾತಾವರಣದ ನಡುವೆ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರ ಹರ್ಷೋದ್ಘಾರಗಳ ನಡುವೆ ಮಂಡೇಪಂಡ ಮತ್ತು ಚೇಂದಂಡ ನಡುವಿನ ಪಂದ್ಯ ಅತ್ಯಂತ ಕುತೂಹಲಕಾರಿಯಾಗಿ ಆರಂಭಗೊಂಡಿತು. ಪಂದ್ಯದ ಆರಂಭಿಕ ಕ್ಷಣಗಳಲ್ಲೆ ಚೇಂದಂಡ […]

Continue Reading

ಅದ್ದೂರಿಯಾಗಿ ಚಾಲನೆಗೊಂಡ ಅಮ್ಮಣಂಡ ಕಪ್ ಐರಿ ಕೌಟುಂಬಿಕ ಕ್ರಿಕೆಟ್ ನಮ್ಮೆ …

ಮಡಿಕೇರಿ, ಏ. 25:  ಹೊದ್ದೂರು ಆಮ್ಮಣಂಡ ಕುಟುಂಬದ ವತಿಯಿಂದ 11ನೇ ವರ್ಷದ ಅಮ್ಮಣಂಡ ಕಪ್ “ಐರಿ ಕೌಟುಂಬಿಕ ನಮ್ಮೆ 2025ಕ್ಕೆ ಚಾಲನೆ ನೀಡಲಾಯಿತು. ಅಮ್ಮಣಂಡ ಹಾಗೂ ಐರಿ ಜನಾಂಗ ಬಾಂಧವರು ಮೂರ್ನಾಡು ಕಿರಿಯ ಪ್ರಾಥಮಿಕ ಶಾಲಾ ಆವರಣದಿಂದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ನಂತರ ಬಾಚೆಟ್ಟರ ದಿ. ಲಾಲು ಮುದ್ದಯ್ಯ ಮೈದಾನ ಪ್ರವೇಶ ಮಾಡಿದರು. ಕೊಡವ ಸಾಂಪ್ರದಾಯಿಕ ಉಡುಪು ಧರಿಸಿದ ಪುರುಷರು ಹಾಗೂ ಮಹಿಳೆಯರು ವಾಲಗದೊಂದಿಗೆ ದುಡಿಕೊಟ್ಟ್, ತಳಿಯತಕ್ಕಿ ಬೊಳಚದೊಂದಿಗೆ ಹೆಜ್ಜೆ ಹಾಕುತ್ತಾ ಸ್ಥಳೀಯ ಮೈದಾನಕ್ಕೆ ಆಗಮಿಸಿದರು. […]

Continue Reading

ಮುದ್ದಂಡ ಕಪ್ ಕಿರೀಟಕ್ಕಾಗಿ  ಮಂಡೇಪಂಡ ಮತ್ತು ಚೇಂದಂಡ ಒಕ್ಕಗಳ ಕಾಳಗ…

ಮಡಿಕೇರಿ ಏ.26 : ಹದಿನಾಲ್ಕರ ಹರೆಯದ ಪೋರ, ಗೋಲ್ ಕೀಪರ್ ಮಂಡೇಪಂಡ ದ್ಯಾನ್ ಬೆಳ್ಯಪ್ಪ ಅವರ ಅತ್ಯಮೋಘ ಆಟದ ಪ್ರದರ್ಶನದಿಂದ ಮಂಡೇಪಂಡ ಕೊಡವ ಕೌಟುಂಬಿಕ ಮುದ್ದಂಡ ಕಪ್ ಹಾಕಿ ಪಂದ್ಯಾವಳಿಯ ಫೈನಲ್ ಪ್ರವೇಶಿಸಿದ್ದು, ಭಾನುವಾರ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಪ್ರಶಸ್ತಿಗಾಗಿ 3 ಬಾರಿಯ ಛಾಂಪಿಯನ್ ಬಲಿಷ್ಠ ಚೇಂದಂಡ ತಂಡವನ್ನು ಎದುರಿಸಲಿದೆ.      ‘ಶೂಟೌಟ್’ನಲ್ಲಿ  ಎದುರಾಳಿ, ಮೂರು ಬಾರಿಯ ಕೌಟುಂಬಿಕ ಹಾಕಿ ಪಂದ್ಯಾವಳಿ ಛಾಂಪಿಯನ್ ನೆಲ್ಲಮಕ್ಕಡ ತಂಡದ ಎರಡು ಗೋಲಿನ ಅವಕಾಶಗಳನ್ನು ಗೋಲಿ ಮಂಡೇಪಂಡ ಡ್ಯಾನ್ ಬೆಳ್ಯಪ್ಪ ವಿಫಲಗೊಳಿಸುತ್ತಿರುವಂತೆಯೇ […]

Continue Reading

ಮುದ್ದಂಡ ಕಪ್‌ ಮಹಿಳಾಹಾಕಿ, ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಕಂಬೀರಂಡ ಒಕ್ಕ…

ಮಡಿಕೇರಿ ಏ.26 : ಕೊಡವ ಒಕ್ಕಡೊಕ್ಕಡ ನಡುವಿನ ಹಾಕಿ ಪಂದ್ಯಾವಳಿಯಲ್ಲಿ ಇದೇ ಪ್ರಥಮ ಬಾರಿಗೆ ಮುದ್ದಂಡ ಕಪ್ ಹಾಕಿ ನಮ್ಮೆಯಲ್ಲಿ ಆಯೋಜಿಸಲಾಗಿದ್ದ ಮಹಿಳಾ ಹಾಕಿ ಪಂದ್ಯಾವಳಿಯ ಫೈನಲ್ಸ್‌ನಲ್ಲಿ ಕಂಬೀರಂಡ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ.     ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ಕಂಬೀರಂಡ ಮತ್ತು ಕೇಚೆಟ್ಟಿರ ತಂಡಗಳ ನಡುವೆ ನಡೆದ ರೋಚಕ ಅಂತಿಮ ಪಂದ್ಯಾವಳಿಯಲ್ಲಿ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ತಲಾ ಎರಡು ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 2-1 […]

Continue Reading

ನೆಲಜಿ ಇಗ್ಗುತ್ತಪ್ಪ ದೇವಸ್ಥಾನದ ಭಕ್ತ ಸಮಾರಾಧನಾ ಉತ್ಸವ…

ನಾಪೋಕ್ಲು, ಏ.26: ಕೊಡಗು ಜಿಲ್ಲೆಯ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ವಾರ್ಷಿಕ ಭಕ್ತ ಸಮಾರಾಧನಾ ಉತ್ಸವ ಮತ್ತು ನೂತನವಾಗಿ ನಿರ್ಮಾಣಗೊಂಡ ಪೌಳಿಯ ಉದ್ಘಾಟನಾ ಕಾರ್ಯಕ್ರಮವು ಮೇ, 01 ರಂದು ನಡೆಯಲಿದೆ. ಉತ್ಸವದ ಅಂಗವಾಗಿ ತುಲಾಭಾರ ಸೇವೆ ವಿವಿಧ ಪೂಜಾ ಕಾರ್ಯ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಮೇ 1 ರಂದು ಗುರುವಾರ ಬೆಳಗ್ಗೆ 6 ಗಂಟೆಗೆ ಅಭಿಷೇಕ, ಬೆಳಗ್ಗೆ 6.30 ರಿಂದ 7.30 ಗಂಟೆಗೆ ಗಣಪತಿಹೋಮ, 8.30 ರಿಂದ 11 ಗಂಟೆಗೆ ರುದ್ರಮಹಾಯಾಗ, 9.30 ರಿಂದ 10.30 ಗಂಟೆಗೆ […]

Continue Reading

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ  ಅರ್ಜಿ ಆಹ್ವಾನ…

   ಮಡಿಕೇರಿ ಏ.25:- ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ(ನಿ) ವತಿಯಿಂದ 2025-26 ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಜನಾಂಗದವರಿಗೆ ಅರಿವು ಯೋಜನೆಯಡಿಯಲ್ಲಿ ನಿಗಮದಿಂದ ಸಾಲ ಸೌಲಭ್ಯಗಳನ್ನು ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.       ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಅರಿವು ವಿಧ್ಯಾಭ್ಯಾಸ ಯೋಜನೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ/ಸಿಇಟಿ/ನೀಟ್ ಮುಖಾಂತರ) ಎಂಬಿಬಿಎಸ್, ಬಿಡಿಎಸ್, ಬಿಇ/ಬಿಟೆಕ್, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್, ಬಿ ಆಯುಷ್, ಫಾರ್ಮಸಿ, ಕೃಷಿ ವಿಜ್ಞಾನ […]

Continue Reading