ನಾಗರಹೊಳೆ ಅತ್ತೂರು ಕೊಲ್ಲಿಯಲ್ಲಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಎಲ್. ಎ. ಸಿ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ…  

 ಪೊನ್ನಂಪೇಟೆ,ಮೇ,12(Nadubade News): ಪೊನ್ನಂಪೇಟೆ ತಾಲೂಕಿನ ಕೆ.ಬಾಡಗ ಗ್ರಾಮ ಪಂಚಾಯಿತಿ ನಾಗರಹೊಳೆ ಅರಣ್ಯ ಪ್ರದೇಶದಲ್ಲಿರುವ ಅತ್ತೂರು ಕೊಲ್ಲಿ ಹಾಡಿ ಇತ್ತೀಚೆಗೆ ಅರಣ್ಯ ನಿವಾಸಿಗಳು ಹಾಗೂ ಅರಣ್ಯ ಇಲಾಖೆಯ ನಡುವೆ ಸೃಷ್ಟಿಯಾಗಿರುವ ವಿವಾದದ ಸ್ಥಳಕ್ಕೆ ವಿರಾಜಪೇಟೆ ಕ್ಷೇತ್ರ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ  ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಆವರು ಭೇಟಿ ನೀಡಿ ಪರಿಶೀಲಿಸಿದರು.       ಅರಣ್ಯ ವ್ಯಾಪ್ತಿ ನಿವಾಸಿಗಳು, ತಾವುಗಳು ಶತಮಾನಗಳಿಂದ ಇಲ್ಲಿ ವಾಸವಾಗಿದ್ದು ತಮಗೆ ಅರಣ್ಯ ರಕ್ಷಣೆ ಹಕ್ಕಿನಡಿ ಹಕ್ಕುಪತ್ರ ನೀಡಬೇಕೆಂದು ಬೇಡಿಕೆ ಇಟ್ಟರೆ, ಅರಣ್ಯಾಧಿಕಾರಿಗಳು ಸೂಕ್ತ […]

Continue Reading

ಶಾಸಕ ಪೊನ್ನಣ್ಣ ಪ್ರಾಯೋಜಿತ ಉಚಿತ ತರಬೇತಿಗೆ ಸಿವಿಲ್ ಸರ್ವಿಸ್ ಪರೀಕ್ಷಾರ್ಥಿಗಳ ಅರ್ಜಿ ಆಹ್ವಾನ…

     ಮಡಿಕೇರಿ,ಮೇ,12(Nadubade News): ಸಿವಿಲ್ ಸರ್ವಿಸ್ ಪರೀಕ್ಷೆಗಳಾದ ಕೆ.ಪಿ.ಎಸ್.ಸಿ, ಯು.ಪಿ.ಎಸ್.ಸಿ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಿರುವ ತರಬೇತಿಯನ್ನು ಉಚಿತವಾಗಿ ನೀಡಲು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗು ವಿರಾಜಪೇಟೆ  ಶಾಸಕರೂ ಆಗಿರುವ ಶ್ರೀ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಮುಂದಾಗಿದ್ದು, evidhya.com, ‘ನಮ್ಮ ಕೆ.ಪಿ.ಎಸ್.ಸಿ’ ಮೂಲಕ ಕೊಡಗಿನ ಅರ್ಹ 10 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ದೊರಕಲಿದೆ. 2022 ಹಾಗೂ ನಂತರದಲ್ಲಿ ಪದವಿ ಶಿಕ್ಷಣ ಪೂರೈಸಿರುವವರು ಉಚಿತ ತರಬೇತಿ ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿದಾರರು https://evidhya.com/test/ ವೆಬ್ ಸೈಟ್‌ ನಲ್ಲಿ Aptitude ಆನ್‌ಲೈನ್ […]

Continue Reading

  ಮೇ 15ರಂದು ದಿ.ಬಿ.ಎಸ್. ಗೋಪಾಲಕೃಷ್ಣ ಸ್ಮರಣಾಥ೯ ದತ್ತಿನಿಧಿ ಪ್ರಶಸ್ತಿ ಪ್ರಧಾನ ಸಮಾರಂಭ…

 ಮಡಿಕೇರಿ, ಮೇ 12( Nadubade News): ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕೊಡಗು ಪತ್ರಕತ೯ರ ಸಂಘ (ರಿ) ಇವರ ಸಹಯೋಗದಲ್ಲಿ ಮೇ 15 ರ ಗುರುವಾರ ಸಂಜೆ 5.30 ಗಂಟೆಗೆ ಮಡಿಕೇರಿಯ ಕೊಡಗು ಪತ್ರಿಕಾ ಭವನ ಟ್ರಸ್ಟ್ ನ ಸಭಾಂಗಣದಲ್ಲಿ ಕೊಡಗಿನ ಪತ್ರಿಕಾರಂಗದ ಭೀಷ್ಮ, ಶಕ್ತಿ ಪತ್ರಿಕೆಯ ಸ್ಥಾಪಕ ಸಂಪಾದಕ  ದಿ.ಬಿ.ಎಸ್. ಗೋಪಾಲಕೃಷ್ಣ  ಅವರ ಸ್ಮರಣಾಥ೯ ದತ್ತಿನಿಧಿ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲಾಗಿದೆ.     ತ್ರಿಭಾಷಾ ಸಾಹಿತಿ ನಾಗೇಶ್ ಕಾಲೂರು ಅವರಿಗೆ ದತ್ತಿ ಪ್ರಶಸ್ತಿ  […]

Continue Reading

ಪೊನ್ನಂಪೇಟೆಯಲ್ಲಿ ಮೇ 17 ರಂದು ಬೃಹತ್ ರಕ್ತದಾನ ಶಿಬಿರ…

    ಪೊನ್ನಂಪೇಟೆ,ಮೇ.12(Nadubade News): ಕೊಡಗು ಬ್ಲಡ್ ಡೊನಾರ್ಸ್ (ರಿ) ಮಡಿಕೇರಿ  ,ಶ್ರೀ ನಂದೀಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘ ( ರಿ) ಪೊನ್ನಂಪೇಟೆ.  ಇದರ ಜಂಟಿ ಆಶ್ರಯದಲ್ಲಿ ,ಜಿಲ್ಲಾ ರಕ್ತನಿಧಿ ಕೇಂದ್ರ ಮಡಿಕೇರಿ  ಇವರ ಸಹಕಾರದೊಂದಿಗೆ   ಮೇ 17 ರಂದು ಬೃಹತ್ ರಕ್ತದಾನ ಶಿಬಿರವನ್ನು   ಇಗ್ಗುತಪ್ಪ ಸೌಹಾರ್ದ ಬ್ಯಾಂಕ್  ಸಭಾಂಗಣ ಪೊನ್ನಂಪೇಟೆಯಲ್ಲಿ ಆಯೋಜಿಸಲಾಗಿದೆ.   ಸಾರ್ವಜನಿಕರು ದಾನ ಮಾಡುವ ಒಂದು ಯೂನಿಟ್ ರಕ್ತದಿಂದ ನಾಲ್ವರ ಜೀವ ಉಳಿಸಬಹುದಾಗಿದೆ, ಆದ್ದರಿಂದ  ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು […]

Continue Reading

ಮಡಿಕೇರಿ ಭಾಗಮಂಡಲ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಎಲ್.ಎ.ಸಿ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ…

    ಭಾಗಮಂಡಲ, ಮೇ.11 (Nadubade News): ಕಳೆದ ವರ್ಷ ಸುರಿದ ಭಾರಿ ಮಳೆಯಿಂದಾಗಿ, ತೀರ್ಥಕ್ಷೇತ್ರ ತಲಕಾವೇರಿ-ಭಾಗಮಂಡಲ ಸಂಪರ್ಕಿಸುವ ಮಡಿಕೇರಿ ಭಾಗಮಂಡಲ ಮುಖ್ಯರಸ್ತೆಯ ಅಪ್ಪಂಗಳ-ಬೆಟ್ಟಗೇರಿ ಭಾಗದಲ್ಲಿ ರಸ್ತೆ ಹದಗೆಟ್ಟಿರುವುದನ್ನು ಮನಗಂಡ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು, ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ತಂದು, ಸುಮಾರು ₹ 4 ಕೋಟಿ ವೆಚ್ಚದಲ್ಲಿ ಅಪ್ಪಂಗಳ ಜಂಕ್ಷನ್ ನಿಂದ ಬೆಟ್ಟಗೇರಿ ತನಕದ ರಸ್ತೆಯ ಪುನರ್ ನಿರ್ಮಾಣ ಕಾರ್ಯಕ್ಕೆ ಇಂದು ಭೂಮಿ ಪೂಜೆ ನೆರವೇರಿಸಿದರು.    […]

Continue Reading

ಟ್ರಾನ್ಸ್‌ಫಾರ್ಮಿಂಗ್ ಟುಮಾರೋ ಫೌಂಡೇಶನ್  ಸಂಚಾರಿ ಮೊಬೈಲ್ ಘಟಕ ಲೋಕಾರ್ಪಣೆಗೊಳಿಸಿದ ಎಲ್. ಎ.ಸಿ. ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ…  

ವಿರಾಜಪೇಟೆ, ಮೇ.11(ನಡುಬಾಡೆ ನ್ಯೂಸ್):‌ ಟ್ರಾನ್ಸ್‌ಫಾರ್ಮಿಂಗ್ ಟುಮಾರೋ ಫೌಂಡೇಶನ್ (Transforming Tomorrow Foundation) ವತಿಯಿಂದ ಆರೋಗ್ಯ ಜಾತ್ರೆ ಎಂಬ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಕೊಡಗು ಜಿಲ್ಲಾದ್ಯಂತ ಹಮ್ಮಿಕೊಂಡಿದ್ದು, ಇದರ ಸಂಚಾರಿ ಮೊಬೈಲ್ ಘಟಕವನ್ನು ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಉದ್ಘಾಟಿಸಿದರು.      ವಿರಾಜಪೇಟೆ ಶಾಸಕರ ಗೃಹ ಕಚೇರಿಯಲ್ಲಿ ಈ ಮೊಬೈಲ್ ಘಟಕವನ್ನು ಉದ್ಘಾಟಿಸಿ ಶುಭ ಕೋರಿದ ಮಾನ್ಯ ಶಾಸಕರು, ನಾಡಿನಾದ್ಯಂತ ಸಂಚರಿಸುವ ಈ ಮೊಬೈಲ್ ಘಟಕದ […]

Continue Reading

 ಮೇ 13 ರಿಂದ ತೆಕ್ ಮೊಗದ ದೇವಿ ಭದ್ರಕಾಳಿ ಬೋಡ್ ನಮ್ಮೆ…

ವಿರಾಜಪೇಟೆ: ಮೇ, 11(ನಡುಬಾಡೆ ನ್ಯೂಸ್)‌: ತೆಕ್ಕ್ ಮೊಗದ ಶ್ರೀ ಭದ್ರಕಾಳಿ ದೇವಿ ವಾರ್ಷಿಕ ಬೋಡ್ ನಮ್ಮೆ ಮತ್ತು ತೆರೆ ಮಹೋತ್ಸವ  ಮೇ ತಿಂಗಳ 13 ರಿಂದ ಆರಂಭವಾಗಿ 17 ರಂದು ಕೊನೆಯಾಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ವಿರಾಜಪೇಟೆ ತಾಲ್ಲೂಕಿನ ಬಿಳುಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಳುಗುಂದ,ಹೊಸಕೋಟೆ,ಮತ್ತು ನಲ್ವತೋಕ್ಲು ಗ್ರಾಮದ ಅಮ್ಮತ್ತಿ ನಾಡು ಬೋಂದಾ ಮುನ್ನೂರು ಒಕ್ಕಡ ದೇವಿಯಾಗಿರುವ ಶ್ರೀ ಭದ್ರಕಾಳಿ ದೇಗುಲದ ವಾರ್ಷಿಕ ತೆರೆ ಮತ್ತು ಬೋಡ್ ನಮ್ಮೆ ತಾ 13 ರಿಂದ […]

Continue Reading

ಟಿ.ಶೆಟ್ಟಿಗೇರಿ ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಲೋಕಾರ್ಪಣೆ ….

ಪೊನ್ನಂಪೇಟೆ, ಮೇ.10 (ನಡುಬಾಡೆ ನ್ಯೂಸ್): ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕು ಟಿ.ಶೆಟ್ಟಿಗೇರಿ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು ₹ 22 ಲಕ್ಷಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ನೆರವೇರಿಸಲಾಯಿತು.    ‌     ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಉದ್ಘಾಟನೆ ನೆರವೇರಿಸುತ್ತಾ ಮಾತನಾಡಿ, ತಾನು ಆಯ್ಕೆಯಾಗಿ ಬಂದಲ್ಲಿನಿಂದ ಕ್ಷೇತ್ರದಾದ್ಯಂತ ರಸ್ತೆಗಳ ಅಭಿವೃದ್ಧಿಗೆ ಪ್ರಮುಖ ಆದ್ಯತೆಯನ್ನು ನೀಡುತ್ತಿದ್ದು, ಪಕ್ಷದ ಮುಖಂಡರುಗಳು, ಕಾರ್ಯಕರ್ತರುಗಳು ಹಾಗೂ ವಿಶೇಷವಾಗಿ ಸಾರ್ವಜನಿಕರು ಇಂತಹ […]

Continue Reading

ಬಿಜಿಎಸ್ ಕಪ್  ಹೊನಲು ಬೆಳಕಿನ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ…

    ಕುಶಾಲನಗರ ಮೇ,10(ನಡುಬಾಡೆ ನ್ಯೂಸ್): ಕೊಡಗು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ ವತಿಯಿಂದ ಕುಶಾಲನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕ್ರೀಡಾಂಗಣದಲ್ಲಿ ‘ಬಿಜಿಎಸ್ ಕಪ್’ ಹೊನಲು ಬೆಳಕಿನ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಮೇ 13ರಿಂದ ಮೂರು ದಿನ ನಡೆಯಲಿದೆ. ‌    ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಕರ್ನಾಟಕ ರಾಜ್ಯ ಅಮೆಚೂರ್‌ಕಬಡ್ಡಿ ಅಸೋಸಿಯೇಷನ್ ಮತ್ತು ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕುಶಾಲನಗರ ಆಶ್ರಯದಲ್ಲಿ ಈ ಟೂರ್ನಿ […]

Continue Reading