Site icon nadubadenews.com

ಟ್ರಾನ್ಸ್‌ಫಾರ್ಮಿಂಗ್ ಟುಮಾರೋ ಫೌಂಡೇಶನ್  ಸಂಚಾರಿ ಮೊಬೈಲ್ ಘಟಕ ಲೋಕಾರ್ಪಣೆಗೊಳಿಸಿದ ಎಲ್. ಎ.ಸಿ. ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ…  

ಟ್ರಾನ್ಸ್‌ಫಾರ್ಮಿಂಗ್  ಟುಮಾರೋ ಫೌಂಡೇಶನ್  ಸಂಚಾರಿ ಮೊಬೈಲ್ ಘಟಕ ಲೋಕಾರ್ಪಣೆಗೊಳಿಸಿದ ಎಲ್. ಎ.ಸಿ. ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ…  
Spread the love
ಟ್ರಾನ್ಸ್‌ಫಾರ್ಮಿಂಗ್  ಟುಮಾರೋ ಫೌಂಡೇಶನ್  ಸಂಚಾರಿ ಮೊಬೈಲ್ ಘಟಕ ಲೋಕಾರ್ಪಣೆಗೊಳಿಸಿದ ಎಲ್. ಎ.ಸಿ. ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ…  

ವಿರಾಜಪೇಟೆ, ಮೇ.11(ನಡುಬಾಡೆ ನ್ಯೂಸ್):‌ ಟ್ರಾನ್ಸ್‌ಫಾರ್ಮಿಂಗ್ ಟುಮಾರೋ ಫೌಂಡೇಶನ್ (Transforming Tomorrow Foundation) ವತಿಯಿಂದ ಆರೋಗ್ಯ ಜಾತ್ರೆ ಎಂಬ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಕೊಡಗು ಜಿಲ್ಲಾದ್ಯಂತ ಹಮ್ಮಿಕೊಂಡಿದ್ದು, ಇದರ ಸಂಚಾರಿ ಮೊಬೈಲ್ ಘಟಕವನ್ನು ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಉದ್ಘಾಟಿಸಿದರು.  

   ವಿರಾಜಪೇಟೆ ಶಾಸಕರ ಗೃಹ ಕಚೇರಿಯಲ್ಲಿ ಈ ಮೊಬೈಲ್ ಘಟಕವನ್ನು ಉದ್ಘಾಟಿಸಿ ಶುಭ ಕೋರಿದ ಮಾನ್ಯ ಶಾಸಕರು, ನಾಡಿನಾದ್ಯಂತ ಸಂಚರಿಸುವ ಈ ಮೊಬೈಲ್ ಘಟಕದ ಸದುಪಯೋಗವನ್ನು ನಾಡಿನ ಜನರು ಪಡೆದುಕೊಳ್ಳಬೇಕೆಂದು ಕರೆ ನೀಡಿದರಲ್ಲದೇ, ಟ್ರಾನ್ಸ್ಫಾರ್ಮಿಂಗ್ ಟುಮಾರೋ ಫೌಂಡೇಶನ್ ರವರ ಈ ಪ್ರಯತ್ನವನ್ನು ಮನಸಾರೆ ಶ್ಲಾಘಸಿದರು.  

ಈ ಸಂದರ್ಭದಲ್ಲಿ ಶ್ರೀಮತಿ ಅಜ್ಜಿಕುಟ್ಟಿರ ಕಾಂಚನ್ ಪೊನ್ನಣ್ಣ  ಶಾಸಕರ ಶ್ರೀ ಅಜ್ಜಿಕುಟ್ಟಿರ ಎಸ್. ನರೇನ್ ಕಾರ್ಯಪ್ಪ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ಪಕ್ಷದ ಪ್ರಮುಖರು ಸೇರಿದಂತೆ ಸಾರ್ವಜನಿಕರು ಉಪಸಿತರಿದ್ದರು.

Exit mobile version