ತಲೆಕಾವೇರಿಯಿಂದ ಪ್ರರಂಭಗೊಂಡ ಕಾವೇರಿ ಆರತಿಗೆ ಗಿನ್ನಿಸ್‌ ರೆಕಾರ್ಡ್

  ಬೆಂಗಳೂರು, ಜೂನ್‌: 20: (nadubadenews):           ತಲೆಕಾವೇರಿ ಪವಿತ್ರ ತೀರ್ಥದೊಂದಿಗೆ ಪ್ರಾರಂಭವಾಗಿ, ಬೆಂಗಳೂರಿನ ಸ್ಯಾಂಕಿನ ಟ್ಯಾಂಕ್‌ನಲ್ಲಿ ನಡೆದ ಕಾವೇರಿ ಆರತಿ ವಿಶ್ವದ ಅತಿದೊಡ್ಡ ಜಲ ಸಂರಕ್ಷಣಾ ಪ್ರತಿಜ್ಞೆ ಅಭಿಯಾನವನ್ನು ಆಯೋಜಿಸಿದ್ದಕ್ಕಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಪ್ರತಿಷ್ಠಿತ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರವಾಗಿದೆ. ಮಾರ್ಚ್ 21 ರಿಂದ 28 ರವರೆಗೆ ನಡೆದ ಈ ಐತಿಹಾಸಿಕ ಅಭಿಯಾನದಲ್ಲಿ ಕರ್ನಾಟಕದಾದ್ಯಂತ ಒಟ್ಟು 5,33,642 ಜನರು ಭಾಗವಹಿಸಿದ್ದು ವಿಶ್ವದಲ್ಲಿಯೇ ಅತೀ ಹೆಚ್ಚು ಜನರು ಸ್ವೀಕರಿಸಿದ ಜಲ ಸಂರಕ್ಷಣಾ […]

Continue Reading

ಪಂಚಾಯತ್ ರಾಜ್ ಇಲಾಖೆ ಚಳಿ ಬಿಡಿಸಿದ ಶಾಸಕ ಪೊನ್ನಣ್ಣ

ಕಾರುಂದ, ಜೂ.20:(nadubadenews):  ಜಿಟಿಜಿಟಿ ಮಳೆಯಲ್ಲಿ ಚುಮುಚುಮು ಚಳಿಗೆ ಹೊದ್ದು ಮಲಗಿದ್ದ ಪಂಚಯತ್‌ರಾಜ್‌ ಇಲಾಖೆಯ ಚಳಿಯನ್ನು ಶಾಸಕರು ಮತ್ತು ಮುಖ್ಯ ಮಂತ್ರಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಇಂದು ಬಿಡಿಸಿದ್ದಾರೆ. ಕಾರುಗುಂದ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಮಡಿಕೇರಿ ತಾಲೂಕು ವ್ಯಾಪ್ತಿಯ ಅಧಿಕಾರಿಗಳೊಂದಿಗೆ ಟಾಸ್ಕ್ ಪೋರ್ಸ್ ಸಭೆ ನಡೆಸಿದ ಶಾಸಕರು,  ಬೇಂಗೂರು ಸಮೀಪ ದೋಣಿಕಡು ಎಂಬಲ್ಲಿ 40 ಕುಟುಂಬಗಳು ಕಾವೇರಿ ಪ್ರವಾಹದಿಂದ  ಸಂಕಷ್ಟಕ್ಕೆ ಪ್ರತಿವರ್ಷ ಒಳಗಾಗುತ್ತಿದ್ದು, ಶಾಶ್ವತ ಪರಿಹಾರದ ನಿಟ್ಟಿನಲ್ಲಿ  ಸೇತುವೆ ನಿರ್ಮಾಣಕ್ಕೆ  ಅಂದಾಜು […]

Continue Reading

ಕಾಲರ್ ಹಾಕಿದ ಕಾಡಾನೆ ಕಾಫಿ ಕಣದಲ್ಲಿ

ಸಿದ್ದಾಪುರ, ಜೂ.20:(nadubadenews): ಕಾಲರ್‌ ಅಳವಡಿಸಿರುವ ಕಾಡಾನೆಯೊಂದು ಸಿದ್ದಾಪುರದ ಕಾಫಿಕಣದಲ್ಲಿ ಕಂಡು ಬಂದಿದ್ದು, ಇಲ್ಲಿನ ಟೀಕ್ ವುಡ್ ಎಸ್ಟೇಟ್ ಬಳಿ ಕಾಫಿ, ಕರಿಮೆಣಸು ಸೇರಿ ಅಪಾರ ಹಾನಿ ಮಾಡಿದೆ. ಹಲಸು, ಮಾವು ಆಸೆಗೆ ತೋಟಕ್ಕೆ ಬರುತ್ತಿರುವ ಆನೆಯಿಂದ ಕಾಫಿ ತೋಟಕ್ಕೆ ತೆರಳುವ ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ. ಎಸ್ಟೇಟಿನ ಕಾಫಿ ಕಣಕ್ಕೆ ಅಳವಡಿಸಿರುವ ಸಿಸಿ ಕ್ಯಾಮೆರದಲ್ಲಿ ಆನೆಯ ಚಲನವಲನ ಸೆರೆಯಾಗಿದೆ.

Continue Reading

   ಗ್ರಾಮವಾರು ಪಡಿತರ ಚೀಟಿ  ಪಟ್ಟಿ ಬಿಡುಗಡೆಯಾಗಿದ್ದು, ಆನ್‌ಲೈನ್‌ ಚೆಕ್‌ ಮಾಡಬಹುದು

ಬೆಂಗಳೂರು, ಜೂ.20. (nawubadenews) : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಹೊಸ ಗ್ರಾಮಾವಾರು ಪಡಿತರ ಚೀಟಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನಿಮ್ಮ ಹೆಸರು ಇದೆಯೇ ಎನ್ನುವುದನ್ನು ಪರಿಶೀಲಿಸಬಹುದು.   ಹತ್ತಿರದ ಗ್ರಾಮ ಪಂಚಾಯತ್‌ ಅಥವಾ ನ್ಯಾಯಬೆಲೆ ಅಂಗಡಿಗೆ ಹೋಗದೇ ಅಧಿಕೃತ ವೆಬ್‌ಸೈಟ್ ಮೂಲಕ ಪಟ್ಟಿಯನ್ನು ಪರಿಶಿಲನೆ ಮಾಡಬಹುದಾಗಿದ್ದು, ಹಾಗೆಯೇ ಡಿಬಿಟಿ ಸ್ಥಿತಿ ಹಾಗೂ ತಿದ್ದುಪಡಿ ಅರ್ಜಿಯ ಸ್ಥಿತಿಯನ್ನೂ ಹಂತ ಹಂತವಾಗಿ ಪರಿಶೀಲಿಸಬಹುದು. ಒಂದು ವೇಳೆ ಈ ವೆಬ್‌ಸೈಟ್ ಕಾರ್ಯನಿರ್ವಹಿಸದಿದ್ದರೆ ಹತ್ತಿರದ ಪಂಚಾಯತ್‌ ಕಚೇರಿಗೆ ಬೇಟಿ […]

Continue Reading

ಸೋಮವಾರಪೇಟೆ ತಹಶೀಲ್ದಾರರ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ

ಮಡಿಕೇರಿ ಜೂ.19(nadubadenews):- ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರರ ಕಚೇರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಗುರುವಾರ ಭೇಟಿ ನೀಡಿ ಭೂಸುರಕ್ಷತೆ ಮತ್ತು ಕಂದಾಯ ದಾಖಲೆ ಡಿಜಿಟಲೀಕರಣ ಪ್ರಕ್ರಿಯೆ ಸಂಬಂಧ ಮಾಹಿತಿ ಪಡೆದರು. ಭೂ ಸುರಕ್ಷತಾ ಯೋಜನೆಯಡಿ ಸಾರ್ವಜನಿಕರಿಗೆ ಕಂದಾಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ವಿತರಿಸುವ ಹಿನ್ನೆಲೆ ಅಗತ್ಯ ಕ್ರಮವಹಿಸುವಂತೆ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು. ಸರ್ಕಾರ ಕಂದಾಯ ಇಲಾಖೆಯಲ್ಲಿ ಭೂದಾಖಲೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸುಧಾರಣೆ ಮತ್ತು ಬದಲಾವಣೆ ಜಾರಿಗೊಳಿಸಿದ್ದು, ಅವುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.ಸಕಾಲ ಯೋಜನೆ, ಪಿಂಚಣಿ ಯೋಜನೆ ಸಂಬಂಧಿಸಿದಂತೆ […]

Continue Reading

ಜೂ.21 ರಂದು ಪೋಸ್ಟ್‌ ಆಫೀಸ್‌ ಇರೋದಿಲ್ಲ

ಮಡಿಕೇರಿ ಜೂ.19(nadubadenews):- ಎಪಿಟಿ 2.0 ಅಡಿಯಲ್ಲಿ ಹೊಸ ತಂತ್ರಾಂಶವನ್ನು ಜೂನ್, 23 ರಂದು ಅಳವಡಿಸುತ್ತಿರುವ ಕಾರಣ ನಗರದ ಪ್ರಧಾನ ಅಂಚೆ ಕಚೇರಿ ಮತ್ತು ಅದರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಉಪ ಅಂಚೆ ಕಚೇರಿಗಳು ಮತ್ತು ಅದರ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಖಾ ಅಂಚೆ ಕಚೇರಿಗಳಲ್ಲಿ ಜೂನ್, 21 ರಂದು ಯಾವುದೇ ರೀತಿಯ ಅಂಚೆ ವಹಿವಾಟು ಇರುವುದಿಲ್ಲ. ಮಡಿಕೇರಿ ಪ್ರಧಾನ ಅಂಚೆ ಕಚೇರಿ ಹಾಗೂ ಉಪ ಅಂಚೆ ಕಚೇರಿಗಳಾದ ಮಡಿಕೇರಿ(ಡಿಒಸಿ), ವಿದ್ಯಾನಗರ, ಅಮ್ಮತ್ತಿ, ಭಾಗಮಂಡಲ, ಬಾಳೆಲೆ, ಚೆಟ್ಟಳ್ಳಿ, ಚೆಯ್ಯಂಡಾಣೆ, […]

Continue Reading