Site icon nadubadenews.com

ಪಂಚಾಯತ್ ರಾಜ್ ಇಲಾಖೆ ಚಳಿ ಬಿಡಿಸಿದ ಶಾಸಕ ಪೊನ್ನಣ್ಣ

ಪಂಚಾಯತ್  ರಾಜ್ ಇಲಾಖೆ ಚಳಿ ಬಿಡಿಸಿದ ಶಾಸಕ ಪೊನ್ನಣ್ಣ
Spread the love
ಪಂಚಾಯತ್  ರಾಜ್ ಇಲಾಖೆ ಚಳಿ ಬಿಡಿಸಿದ ಶಾಸಕ ಪೊನ್ನಣ್ಣ

ಕಾರುಂದ, ಜೂ.20:(nadubadenews):  ಜಿಟಿಜಿಟಿ ಮಳೆಯಲ್ಲಿ ಚುಮುಚುಮು ಚಳಿಗೆ ಹೊದ್ದು ಮಲಗಿದ್ದ ಪಂಚಯತ್‌ರಾಜ್‌ ಇಲಾಖೆಯ ಚಳಿಯನ್ನು ಶಾಸಕರು ಮತ್ತು ಮುಖ್ಯ ಮಂತ್ರಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಇಂದು ಬಿಡಿಸಿದ್ದಾರೆ.

ಕಾರುಗುಂದ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಮಡಿಕೇರಿ ತಾಲೂಕು ವ್ಯಾಪ್ತಿಯ ಅಧಿಕಾರಿಗಳೊಂದಿಗೆ ಟಾಸ್ಕ್ ಪೋರ್ಸ್ ಸಭೆ ನಡೆಸಿದ ಶಾಸಕರು,  ಬೇಂಗೂರು ಸಮೀಪ ದೋಣಿಕಡು ಎಂಬಲ್ಲಿ 40 ಕುಟುಂಬಗಳು ಕಾವೇರಿ ಪ್ರವಾಹದಿಂದ  ಸಂಕಷ್ಟಕ್ಕೆ ಪ್ರತಿವರ್ಷ ಒಳಗಾಗುತ್ತಿದ್ದು, ಶಾಶ್ವತ ಪರಿಹಾರದ ನಿಟ್ಟಿನಲ್ಲಿ  ಸೇತುವೆ ನಿರ್ಮಾಣಕ್ಕೆ  ಅಂದಾಜು ಪಟ್ಟಿ ಕಳುಹಿಸಲು ಸೂಚಿಸಿದ್ದರೂ ವಿಳಂಬ ಮಾಡಿದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು.  ಪಂಚಾಯಾತ್‌ ಇಲಾಖೆಯು ಆಮೆಗತಿಯಲ್ಲಿ ತಮ್ಮಿಷ್ಟದಂತೆ ಕೆಲಸ ನಿರ್ವಹಿಸುತಿದ್ದು, ಬದಲಾಗದಿದ್ದರೆ ಅಧಿಕಾರಿಗಳನ್ನೇ ಬದಲಿಸಬೇಕಾದೀತು ಎಂದು ಎಚ್ಚರಿಸಿದರು.

ಅರಣ್ಯ ಇಲಾಖೆಯವರು  ಸಣ್ಣಪುಟ್ಟ ನಿಯಮಗಳ  ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ  ನೀಡುತ್ತಿರುವ ಬಗ್ಗೆ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡ ಶಾಸಕರು, ಅಪಾಯಕಾರಿ ಮರಗಳು ಅಥವಾ ಮರದ ಕೊಂಬೆಗಳನ್ನು ಕತ್ತರಿಸಲು ತಕ್ಷಣವೇ ಕ್ರಮ ಜರುಗಿಸಬೇಕು, ಸಾರ್ವಜಿನಿಕರಿಗೆ ಅವಕಾಶ ನೀಡದಿದ್ದರೆ ಇಲಾಖೆಯೇ ಮುಂದೆ ನಿಂತು ತೆರವು  ಮಾಡಬೇಕೆಂದು  ತಾಕೀತು ಮಾಡಿದರು.

Exit mobile version