Site icon nadubadenews.com

ತಲೆಕಾವೇರಿಯಿಂದ ಪ್ರರಂಭಗೊಂಡ ಕಾವೇರಿ ಆರತಿಗೆ ಗಿನ್ನಿಸ್‌ ರೆಕಾರ್ಡ್

ತಲೆಕಾವೇರಿಯಿಂದ ಪ್ರರಂಭಗೊಂಡ ಕಾವೇರಿ ಆರತಿಗೆ ಗಿನ್ನಿಸ್‌ ರೆಕಾರ್ಡ್
Spread the love
ತಲೆಕಾವೇರಿಯಿಂದ ಪ್ರರಂಭಗೊಂಡ ಕಾವೇರಿ ಆರತಿಗೆ ಗಿನ್ನಿಸ್‌ ರೆಕಾರ್ಡ್

  ಬೆಂಗಳೂರು, ಜೂನ್‌: 20: (nadubadenews):           ತಲೆಕಾವೇರಿ ಪವಿತ್ರ ತೀರ್ಥದೊಂದಿಗೆ ಪ್ರಾರಂಭವಾಗಿ, ಬೆಂಗಳೂರಿನ ಸ್ಯಾಂಕಿನ ಟ್ಯಾಂಕ್‌ನಲ್ಲಿ ನಡೆದ ಕಾವೇರಿ ಆರತಿ ವಿಶ್ವದ ಅತಿದೊಡ್ಡ ಜಲ ಸಂರಕ್ಷಣಾ ಪ್ರತಿಜ್ಞೆ ಅಭಿಯಾನವನ್ನು ಆಯೋಜಿಸಿದ್ದಕ್ಕಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಪ್ರತಿಷ್ಠಿತ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರವಾಗಿದೆ. ಮಾರ್ಚ್ 21 ರಿಂದ 28 ರವರೆಗೆ ನಡೆದ ಈ ಐತಿಹಾಸಿಕ ಅಭಿಯಾನದಲ್ಲಿ ಕರ್ನಾಟಕದಾದ್ಯಂತ ಒಟ್ಟು 5,33,642 ಜನರು ಭಾಗವಹಿಸಿದ್ದು ವಿಶ್ವದಲ್ಲಿಯೇ ಅತೀ ಹೆಚ್ಚು ಜನರು ಸ್ವೀಕರಿಸಿದ ಜಲ ಸಂರಕ್ಷಣಾ ಪ್ರತಿಜ್ಞೆಯಾಗಿದೆ.

          ಕಾವೇರಿ ಆರತಿ ಅಭಿಯಾನದ ರುವಾರಿ, ಜಲಸಂಪನ್ಮೂಲ ಹಾಗೂ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪಮುಕ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ವಿಶ್ವದಾಖಲೆ ಪ್ರಮಾಣ ಪತ್ರವನ್ನು ಸ್ವೀಕರಿಸಿದ್ದಾರೆ.

Exit mobile version