Site icon nadubadenews.com

ವಿರಾಜಪೇಟೆಗೇ ಎಲ್ಲಾ, ಮಡಿಕೇರಿಗೆ ಏನೂ ಇಲ್ಲ: ಮಹೇಶ್‌ ತಿಮ್ಮಯ್ಯ

ವಿರಾಜಪೇಟೆಗೇ ಎಲ್ಲಾ, ಮಡಿಕೇರಿಗೆ ಏನೂ ಇಲ್ಲ: ಮಹೇಶ್‌ ತಿಮ್ಮಯ್ಯ
ವಿರಾಜಪೇಟೆಗೇ ಎಲ್ಲಾ, ಮಡಿಕೇರಿಗೆ ಏನೂ ಇಲ್ಲ: ಮಹೇಶ್‌ ತಿಮ್ಮಯ್ಯ

ಇದೊಂದು ತೇಪೆ ಹಚ್ಚುವ  ಬಡ್ಜೆಟ್‌ ಆಗಿದ್ದು, ಜನೋಪಯೋಗಿ ಯಾವುದೇ ಯೋಜನೆಗಳಿಲ್ಲ, ಅದರಲ್ಲೂ ಕೊಡಗಿನ ಪಾಲಿಗೆ ವಿರಾಜಪೇಟೆಗೇ ಅನುದಾನ ಮತ್ತು ಯೋಜನೆಗಳು ಬರುತಿದ್ದು ಮಡಿಕೇರಿ ಕ್ಷೇತ್ರ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗಿದೆ ಎಂದು ಬಿಜೆಪಿ ಯುವಮೋರ್ಚ ಜಿಲ್ಲಾಧ್ಯಕ್ಷ ಮಹೇಶ್‌ತಿಮ್ಮಯ್ಯ ಟೀಕಿಸಿದ್ದಾರೆ.  ಸಿದ್ದರಾಮಯ್ಯ ಅಲ್ಪ ಸಂಕ್ಯಾತರನ್ನು ಓಲೈಸುವ ದಾಖಲೆಯನ್ನು ಸೃಷ್ಟಿಸಿದ್ದು, ಅತಿ ಹೆಚ್ಚು ಸಾಲಮಾಡಿದ ಸಾಧನೆ ಮಾಡಿದ್ದಾರೆ. ಇನ್ನು ಯುವ ನಿಧಿ ಘೋಷಣೆಗೆ ಮಾತ್ರ ಸೀಮಿತವಾಗಿದ್ದು, ಯಾವುದೇ ಅನುದಾನ ಮೀಸಲಿಡದೆ, ಸರ್ಕಾರ ಯುವ ಜನತೆಯನ್ನು ವಂಚಿಸಿದೆ ಎದ ಅವರು,  ಈ ಬಡ್ಜೆಟ್ಟಿನಿಂದ ರಾಜ್ಯದ ಜನತೆಗೆ ಯಾವುದೇ ಪ್ರಯೋಜನವಿಲ್ಲ,  ಅದರಲ್ಲೂ ಕೊಡಗು ಜಿಲ್ಲೆಗೆ ಯಾವುದೇ ಪೂರಕ ಯೋಜನೆಗಳೇ ಇಲ್ಲ. ಈ ಸರ್ಕಾರ ಜಿಲ್ಲೆಗೆ ಏನಾದರೂ ನೀಡಿದರೆ ಅದು ವಿರಾಜಪೇಟೆಯ ಪಾಲಾಗುತಿದ್ದು, ಮಡಿಕೇರಿ ಕ್ಷೇತ್ರ ಲೆಕ್ಕಕ್ಕೆ ಇಲ್ಲ ಎನ್ನುವಂತಾಗಿದೆ. ಅದರಲ್ಲೂ ಸೋಮವಾಋಪೇಟೆ ಭಾಗ ಅಕ್ಷರಷಃ ತಬ್ಬಲಿಯಾಗಿದ್ದು, ಇದು ಸರ್ಕಾರದ ತಾರತಮ್ಯವಾ ಇಲ್ಲ ನಮ್ಮ ಶಾಸಕರ ವೈಫಲ್ಯವಾ ಎಂದು ಪ್ರಶ್ನಿಸಿದ  ಅವರು, ಇನ್ನಾದರೂ ಕೊಡಗಿಗೆ ವಿಷೇಶ ಪ್ಯಾಕೇಜ್‌ ನೀಡಲಿ, ಅದರಲ್ಲಿ ಮಡಿಕೇರಿ ಕ್ಷೇತ್ರವೂ ಸೇರಿರಲಿ  ಎಂದು ಆಗ್ರಹಿಸಿದರು.

Exit mobile version