ಪೊನ್ನಂಪೇಟೆ,ಮೇ.12(Nadubade News): ಕೊಡಗು ಬ್ಲಡ್ ಡೊನಾರ್ಸ್ (ರಿ) ಮಡಿಕೇರಿ ,ಶ್ರೀ ನಂದೀಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘ ( ರಿ) ಪೊನ್ನಂಪೇಟೆ. ಇದರ ಜಂಟಿ ಆಶ್ರಯದಲ್ಲಿ ,ಜಿಲ್ಲಾ ರಕ್ತನಿಧಿ ಕೇಂದ್ರ ಮಡಿಕೇರಿ ಇವರ ಸಹಕಾರದೊಂದಿಗೆ ಮೇ 17 ರಂದು ಬೃಹತ್ ರಕ್ತದಾನ ಶಿಬಿರವನ್ನು ಇಗ್ಗುತಪ್ಪ ಸೌಹಾರ್ದ ಬ್ಯಾಂಕ್ ಸಭಾಂಗಣ ಪೊನ್ನಂಪೇಟೆಯಲ್ಲಿ ಆಯೋಜಿಸಲಾಗಿದೆ.
ಸಾರ್ವಜನಿಕರು ದಾನ ಮಾಡುವ ಒಂದು ಯೂನಿಟ್ ರಕ್ತದಿಂದ ನಾಲ್ವರ ಜೀವ ಉಳಿಸಬಹುದಾಗಿದೆ, ಆದ್ದರಿಂದ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಸಂಘಟಕರು ಮನವಿ ಮಾಡಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ
9972360178, 9980749577, 9686906474