ಮಡಿಕೇರಿ, ಮೇ 18(Nadubade News): 2024–25ನೇ ಸಾಲಿಗೆ ಮಂಜೂರಾದಂತೆ ಮೈಸೂರು ಕಂದಾಯ ವಿಭಾಗದ ಅಲ್ಪಸಂಖ್ಯಾತರ ಸಮುದಾಯದ ಯುವಕರು ಮತ್ತು ಯುವತಿಯರಿಗಾಗಿ ವಸತಿಯುತ ಪೋಲೀಸ್ ಸಬ್ ಇನ್ಸ್ಪೆಕ್ಟರ್ (PSI) ನೇಮಕಾತಿ ಪರೀಕ್ಷಾ ಪೂರ್ವ 90 ದಿನಗಳ ತರಬೇತಿ ಆರಂಭಗೊಳ್ಳಲಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 23.
ಅರ್ಹತೆ: ಯು.ಜಿ.ಸಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ, 21–30 ವರ್ಷದೊಳಗಿನ ವಯಸ್ಸು, ಕರ್ನಾಟಕದ ಖಾಯಂ ನಿವಾಸಿ ಹಾಗೂ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್, ಬೌದ್ಧ ಅಥವಾ ಪಾರ್ಸಿ ಸಮುದಾಯಕ್ಕೆ ಸೇರಿರುವವರು.
ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಕೃಷ್ಣಮೂರ್ತಿ ಅವರನ್ನು ಸಂಪರ್ಕಿಸಬಹುದು.