
ಅಮ್ಮತ್ತಿ, ಜು.31;(nadubadenews):ತಮಿಳುನಾಡಿನ ಚೆನ್ನೈನಲ್ಲಿ, ಜುಲೈ ಇಪ್ಪತೆಂಟರಿಂದ, ಅಗಷ್ಟ್ ಎಂಟರವರೆಗೆ ನಡೆಯುವ 15ನೇ ಸಬ್ ಜೂನಿಯರ್ ರಾಷ್ಟ್ರೀಯ ಹಾಕಿ ಪಂದ್ಯಾವಳಿಗೆ ಕರ್ನಾಟಕ ತಂಡದ ಪರ ಆಡಲು ಮಂಡೆಪಂಡ ಕಾಳಪ್ಪ ಆಯ್ಕೆ ಆಗಿದ್ದಾರೆ.
ಕರ್ನಾಟಕ ತಂಡಕ್ಕೆ ಕೊಡಗಿನಿಂದ ಆಯ್ಕೆಯಾದ ಏಕೈಕ ಆಟಗಾರನಾಗಿರುವ ಮಂಡೆಪಂಡ ಕಾಳಪ್ಪ, ಅಮ್ಮತ್ತಿ ಕಾವಡಿ ಗ್ರಾಮದ ಮಂಡೆಪಂಡ ಲವಚಂಗಪ್ಪ, ಸಬಿತ(ತಾಮನೆ; ಮಾಣಿಪಂಡ) ದಂಪತಿಗಳ ಪುತ್ರ.