
ವಿರಾಜಪೇಟೆ.ಆ 14 (Nadubadenews): ಪರಕೀಯರ ದಾಳಿಗೆ, ಅಕ್ರಮಣಕ್ಕೆ ತುತ್ತಾಗಿ ಆಖಂಡ ಭವ್ಯ ಭಾರತವು ತುಂಡಾಗಿ ವಿಭಜನೆಗೊಂಡಿರುವುದನ್ನು ಇಂದಿಗೂ ನಾವುಗಳು ಅನುಭವಿಸುತಿದ್ದೇವೆ.. ಜಾಗೃತರಾಗಿ ತುಂಡಾಗಿರುವ ಭಾರತವನ್ನು ಒಂದಾಗಿಸುವಂತೆ ಹಿಂದು ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕಿ ಕುಮಾರಿ ಪ್ರಜ್ಞಾ ಕಶ್ಯಪ್ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಹೇಳಿದರು.
ಹಿಂದೂ ಜಾಗರಣ ವೇದಿಕೆ ವಿರಾಜಪೇಟೆ ತಾಲೂಕು ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಣೆಯ ಪ್ರಯುಕ್ತ ನಗರದಲ್ಲಿ ಪಂಜಿನ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮ ನಗರದ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಿತ್ತು. ನಂತರ ಸಭಾಕಾರ್ಯಕ್ರಮ ಕ್ಕೆ ಆಗಮಿಸಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಕುಮಾರಿ ಪ್ರಜ್ಞಾ ಕಶ್ಯಪ್ ಅವರು.ದೇಶ ವಿಭಜನೆಗೆ ಪರಕೀಯರ ಧಾಳಿ ನಿರಂತರವಾಗಿ ಧರ್ಮ ದ ಮೇಲೆ, ನಡೆದ ಘೋರ ಆಕ್ರಮಣ,ಎಲ್ಲಾಧನ್ನು ಪುಷ್ಟೀಕರಣದ ಮೂಲಕ ಸಾಧಿಸುವ ಗುಣ ಮತ್ತು ಪ್ರತ್ಯೇಕತವಾದದ ಫಲವಾಗಿ ದೇಶವು ವಿಭಜನೆಗೊಂಡಿತು.. ಸಂಪತ್ಭರಿತವಾಗಿದ್ದ ಭಾರತ ಖಂಡದ ಮೇಲೆ ವಿಶ್ವದ ಎಲ್ಲಾ ದೇಶಗಳಲ್ಲಿ ಆಳ್ವಿಕೆ ನಡೆಸುತಿದ್ದ ಇತರ ಧರ್ಮದ ನಾಯಕರಿಂದ ಭಾರತವನ್ನು ವಶಕ್ಕೆ ಪಡೆಯಬೇಕು ಮತ್ತು ಆಳ್ವಿಕೆ ನಡೆಸಬೇಕು ಎನ್ನುವ ಕನಸುಗಳೋಂದಿಗೆ ಗುರಿಹೊಂದಿದ್ದರು. ಆ ಮೂಲಕ ಮೊಘಲರು, ಡಚ್ಚರು ,ಫ್ರೇಂಚರು ಹಾಗೂ ಆಂಗ್ಲರ ಪ್ರವೇಶವಾಯಿತು. ಅಪಾರ ಸಂಪತ್ತು, ನಿರ್ಣಾಮವಾಯಿತು. ಭಾರತವನ್ನು ಉಳಿಸಿಕೊಳ್ಳುವ ಪ್ರಯತ್ನ ಫಲವಾಗಿ ಮೊತ್ತಮೊದಲಭಾರಿಗೆ 1857ರಲ್ಲಿ ಪ್ರಥಮ ಸ್ವಾತಂತ್ರ್ಯದ ಹೋರಾಟದ ರಣಕಹಳೆ ಮೊಳಗಿತ್ತು. ಸ್ವಾತಂತ್ರ್ಯ ಸಂಗ್ರಾಮದ ಆರಂಭದ ಕಾಲಘಟ್ಟದಲ್ಲಿ ದೇಶದ ಎಲ್ಲಡೆ ಪರಕೀಯರಿಂದ ಭಾರತ ಸ್ವಾತಂತ್ರಗೊಳ್ಳಬೇಕು ಎನ್ನುವ ಮಂತ್ರ ಭಾವನೆ ಹೋರಾಟಗಾರರ ಮನದಲ್ಲಿತ್ತು ಅದರೇ. ದುರಂತ ಎಂದರೆ ಆಂಗ್ಲರ ಭಾವ ಬೇರೆಯಾಗಿತ್ತು. ಒಡೆದು ಆಳುವ ನೀತಿ… ಮೊದಲಿಗೆ ಮುಸ್ಲಿಂ ಸಮುದಾಯವನ್ನು ಪ್ರತ್ಯೇಕವಾಗಿ ಕಂಡು ವಿಭಜನೆ ಮಾಡುವ ಹುನ್ನಾರವಾಯಿತು.. ಇದಕ್ಕೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪುಷ್ಟಿ ನೀಡಿತ್ತು. ಇದರ ಫಲ ಇಂದಿಗೂ ನಾವುಗಳು ಅನುಭವಿಸುತಿದ್ದೇವೆ. ಬಾಂಗ್ಲ ಪ್ರದೇಶವು ತುಂಡಾಗಿ ಪ್ರತ್ಯೆಕವಾಯಿತು., ಅಖಂಡ ಹಿಂದೂಸ್ತಾನ ,ಪಾಕಿಸ್ತಾನ ಪ್ರತ್ಯೆಕವಾಯಿತು ಹೀಗೆ ಭೌವ್ಯವಾಗಿದ್ದ ಭೌಗೋಳಿಕ ಭಾರತವು ತ್ರಿಖಂಡವಾಯಿತು.. ಪ್ರತ್ಯೇಕತವಾದ ಕಿಚ್ಚು ಇನ್ನೂ ಜೀವಂತವಾಗಿದೆ. ಪೂರ್ವ ಭಾರತದಲ್ಲಿ ನುಸುಳುಕೋರರ ಅಟ್ಟಹಾಸದಿಂದ ಅನೇಕರು ಪ್ರಾಣ ಕಳೆದುಕೊಂಡು ಮನೆ ಕಳೆದುಕೊಳ್ಳುವ ಭೀತಿ ಅನುಭವಿಸುತಿದ್ದಾರೆ.ಪಶ್ಚಿಮ ದಲ್ಲಿ ಪಂಜಾಬ್ ಪ್ರಾಂತದಲ್ಲಿ ಖಾಲಿಸ್ತಾನ್ ದಂಗೆಕೋರರು ಪ್ರತ್ಯೇಕವಾದವನ್ನು ಮೊಳಗಿಸುತಿದ್ದಾರೆ.. ಕೇರಳ ರಾಜ್ಯದಲ್ಲಿ ಮತಾಂತರ ಭೂತ ಕಾಡುತಿದೆ. ತಮಿಳು ನಾಡಿನಲ್ಲಿ ಹಿಂದೂ ಸಾಂಪ್ರದಾಯ ಮೇಲೆ ನಿರಂತರ ದೌರ್ಜನ್ಯ ನಡೆಯುತಿದೆ. ಸ್ವಾತಂತ್ರ್ಯ ಪೂರ್ವ ದಿಂದ ಪ್ರತ್ಯೇಕತವಾದ ಮತ್ತು ಧರ್ಮದ ಮೇಲಿನ ನಿರಂತರ ದೌರ್ಜನ್ಯ ಇಂದಿಗೂ ಜೀವಂತವಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಸಂಖ್ಯಾತ ವೀರ ಯೋಧರ ನೆತ್ತರು ಭಾರತ ಭೂಮಿಯನ್ನು ಸ್ಪರ್ಶಿಸಿ, ಮನೆ ಮಠ ಕಳೆದುಕೊಂಡು ನಿರಂತ ಹೋರಾಟ, ತ್ಯಾಗ ಬಲಿದಾನದ ಮೂಲಕ ನಾವು ಪರಿಪೂರ್ಣ ಸ್ವಾತಂತ್ರ್ಯ ಗಳಿಸಿದ್ದೇವೆ..ಇದನ್ನು ಎಂದಿಗೂ ಮರೆಯಬಾರದು. ಭೌವ್ಯ ಭಾರತದ ಪರಿಕಲ್ಪನೆ, ವೀರ ಯೋಧರ ಯಶೋಗಾದೆ,ತ್ಯಾಗ ಬಲಿದಾನಗಳ ಕಥೆಗಳನ್ನು ಜೀವಂತವಾಗಿರಿಸಿ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕಾರ್ಯದಲ್ಲಿ ಸಾನತನ ಹಿಂದೂ ಬಾಂದವರು ಸಾಗಬೇಕು ಅಖಂಡ ಭಾರತದ ಕನಸಾಗದೆ ಸಂಕಲ್ಪವಾಗಲು ಸರ್ವರು ಕಠೀಬದ್ದರಾಗುವಂತೆ ಕರೆ ನೀಡಿದರು.
ನಿವೃತ್ತ ಸುಬೇದಾರ್ ಮೇಜರ್ ಚೇಂದ್ರಿಮಾಡ ಕೆ. ನಂಜಪ್ಪ ಗಣೇಶ್ ಅವರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ.. ಭಾರತ ದೇಶವು ಸ್ವಾತಂತ್ರ್ಯ ನಂತರವು ಹಲವರು ಸಮರಗಳನ್ನು ಕಂಡಿದೆ.. ಸೇಕ್ಯುಲರ್ ನಾಯಕರ ಒತ್ತಡದ ಮಾತಿನಿಂದ ದೇಶಕ್ಕೆ ವಿರುದ್ದವಾದ ಘಟನೆಗಳಿಗೆ ಸಾಕ್ಷಿಯಾಗಿದೆ. ದೇಶದ ಹೊರಗಿರುವ ಮತೀಯ ಶಕ್ತಿಗಳ ವಿರುದ್ದ ಕ್ಷಣ ಮಾತ್ರದಲ್ಲಿ ಧಮನ ಮಾಡಬಹುದು. ಅದರೇ… ದೇಶದ ಒಳಗಿರುವ ಅಂತರಿಕ ಧರ್ಮ ಮತೀಯರ ವಿರುದ್ದ ಹೋರಾಟ ಮಾಡುವುದು ಕಷ್ಟಸಾದ್ಯ, ಧರ್ಮಸ್ಥಳದ ವಿಚಾರದಲ್ಲಿ ಶ್ರೀ ಕ್ಷೇತ್ರದಿಂದ ದೇಶದ ವಿವಿಧ ಸಂಘ ಸಂಸ್ಥೆಗಳು ಮತ್ತು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಗೆ ಕೋಟಿ ಹಣ ಸಹಾಯ ಮಾಡಿರುವುದು ಜಗತ್ತಿಗೆ ತಿಳಿದ ವಿಚಾರ ಅದರೇ ಇದೀಗ ಧರ್ಮಕ್ಕೆ, ಭಾವನೆಗಳಿಗೆ ವಿರುದ್ದ ವಾಗಿ ಕೆಲವು ಮಂದಿ ಶ್ರೀ ಕ್ಷೇತ್ರದ ಹೆಸರಿಗೆ ಧಕ್ಕೆಯಾಗುವ ರೀತಿಯಲ್ಲಿ ಹೇಳುತ್ತಿರುವುದು ಬಾಹ್ಯ ಕುಮ್ಮಕ್ಕಿನಿಂದ. ಧರ್ಮ ಉಳಿಯಬೇಕು. ದೇಶವನ್ನು ಮತೀಯ ಶಕ್ತಿಗಳಿಂದ ರಕ್ಷಣೆ ಒದಗಿಸಲು ಧರ್ಮದ ಅನುಯಾಯಿಗಳು ಹೋರಾಟಕ್ಕೆ ಇಳಿಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಮೊದಲಿಗೆ ನಗರದ ಪ್ರಮುಖ ಬೀದಿಗಳಲ್ಲಿ ಹಿಂದೂ ಬಾಂದವರಿಂದ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ಸಭಾ ವೇದಿಕೆಯಲ್ಲಿ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಅನಿಮೋಳ್ ರಾಜೇಶ್ ಆಚಾರ್ಯ ಅವರು ಪ್ರಾರ್ಥನೆ ಮತ್ತು ಕೊನೆಯಲ್ಲಿ ವಂದೇ ಮಾತರಂ ಗೀತೆಯನ್ನು ಹಾಡಿದರು. ಜಾಗರಣ ವೇದಿಕೆಯ ಕಾರ್ಯಕರ್ತರಿಂದ ಸಂಕಲ್ಪದ ಪ್ರಮಾಣವಚನ ಉಚ್ಚರಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಹಿಂದು ಜಾಗರಣ ವೇದಿಕೆಯ ತಾಲೂಕು ಸಂಚಾಲಕ ಅನೀಲ್ ಸಿದ್ದಾಪುರ,ತಾಲೂಕು ಪ್ರಮುಖರಾದ ಯೋಗೇಶ್ ಬಿಟ್ಟಂಗಾಲ, ಗಣೇಶ್ ಬಿಟ್ಟಂಗಾಲ, ಜಿಲ್ಲಾ ಪ್ರಮುಖರಾದ ರವೀಂದ್ರ ಪೂಜಾರಿ ಉಪಸ್ಥಿತರಿದ್ದರು. ಹಿಂದೂ ಜಾಗರಣ ವೇದಿಕೆಯ ರೋಹಿತ್ ಅಮ್ಮಣಿಚಂಡ ಸ್ವಾಗತಿಸಿ. ಸುನೀಲ್ ಮಾದಪುರ ನಿರೂಪಿಸಿ ವಿನೂಪ್ ವಂದಿಸಿದರು.
ಹಿಂದೂ ಜಾಗರಣ ವೇದಿಕೆ ವಿರಾಜಪೇಟೆ ತಾಲೂಕು ಪದಾಧಿಕಾರಿಗಳು, ಪ್ರಮುಖರು, ಜಿಲ್ಲಾ ಘಟಕದ ಪ್ರಮುಖರು ,ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರು, ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ ಅಸಂಖ್ಯಾತ ಹಿಂದೂ ಭಾಂದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.