
ಮಡಿಕೇರಿ ಜೂ.05 (nadubadenews):- ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಅರಿವು ಮತ್ತು ವಿದೇಶದಲ್ಲಿ ಓದುವ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಸೇವಾ ಸಿಂಧು ತಂತ್ರಾಂಶದ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
ಅರಿವು-ಶೈಕ್ಷಣಿಕ ಸಾಲ ಯೋಜನೆ:
ಈ ಯೋಜನೆಯಡಿ ಸಿಇಟಿ ಮತ್ತು ನೀಟ್ ಇತ್ಯಾದಿ ಪರೀಕ್ಷೆಗಳ ಮೂಲಕ ಆಯ್ಕೆಯಾಗಿ ಮುಂದಿನ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ಎಲ್ಲಾ ಪ್ರವರ್ಗಗಳ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಗಳಾದ ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮುಂತಾದ 28 ಕೋರ್ಸ್ಗಳ ವ್ಯಾಸಂಗಕ್ಕೆ ವಾರ್ಷಿಕ 1 ಲಕ್ಷ ರೂ.ಗಳಂತೆ ಕೋರ್ಸ್ನ ಅವಧಿಗೆ ಗರಿಷ್ಠ 4 ಲಕ್ಷ ರೂ.ಗಳಿಂದ 5ಲಕ್ಷ ರೂ.ಗಳಿಗೆ ವಾರ್ಷಿಕ ಶೇ.2ರ ಬಡ್ಡಿದರಲ್ಲಿ ಸಾಲ ಬಿಡುಗಡೆ ಮಾಡಲಾಗುವುದು. ಅಭ್ಯರ್ಥಿ ಮತ್ತು ಅವರ ಕುಟುಂಬದವರ ವಾರ್ಷಿಕ ವರಮಾನವು ರೂ.3.50 ಲಕ್ಷಗಳ ಮಿತಿಯಲ್ಲಿರಬೇಕು. ಮತ್ತು ವಯೋಮಿತಿ 30 ವರ್ಷದೊಳಗಿರಬೇಕು.
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ:
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಲು ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಪಿ.ಹೆಚ್.ಡಿ. ಪೆÇೀಸ್ಟ್ ಡಾಕ್ಟ್ರಲ್ ಮತ್ತು ಮಾಸ್ಟರ್ ಡಿಗ್ರಿ (ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ಮ್ಯಾನೇಜ್ ಮೆಂಟ್ ಮತ್ತು ಕಾಮರ್ಸ್, ಸೈನ್ಸ್ ಮತ್ತು ಟೆಕ್ನಾಲಜಿ, ಅಗ್ರಿಕಲ್ಚರ್ ಮತ್ತು ಅಲೈಡ್ ಸೈನ್ಸಸ್/ಟೆಕ್ನಾಲಜಿ, ಮೆಡಿಸಿನ್, ಹ್ಯುಮ್ಯಾನಿಟೀಸ್ ಮತ್ತು ಸೋಸಿಯಲ್ ಸೈನ್ಸಸ್) ವ್ಯಾಸಂಗಕ್ಕೆ ಪ್ರವೇಶ ಪಡೆದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ಗರಿಷ್ಠ 15.00ಲಕ್ಷ ರೂ.ಗಳ ಮಿತಿಯಲ್ಲಿರಬೇಕು. ವಿದ್ಯಾರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಶೇ.60ಕ್ಕಿಂತಲೂ ಹೆಚ್ಚಿನ ಅಂಕ ಪಡೆದಿರಬೇಕು. QS World Ranking 1000 ರೊಳಗೆ ಬರುವ ವಿಶ್ವ ವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆದಿರಬೇಕು. ವಾರ್ಷಿಕ ಗರಿಷ್ಠ 25 ಲಕ್ಷ ರೂ.ಗಳು ಹಾಗೂ ಪೂರ್ಣ ಕೋರ್ಸ್ನ ಅವಧಿಗೆ 50 ಲಕ್ಷ ರೂ.ಗಳ ಸಾಲವನ್ನು ಬಡ್ಡಿರಹಿತವಾಗಿ ಒದಗಿಸಲಾಗುವುದು. ಸಾಲದ ಭದ್ರತೆಗೆ ನಿಗಮಕ್ಕೆ ಅರ್ಜಿದಾರ/ಜಾಮೀನುದಾರ/ಪೋಷಕರ ಸ್ಥಿರಾಸ್ತಿಯನ್ನು ನಿಗಮಕ್ಕೆ ಆಧಾರ ಮಾಡಬೇಕು. ಅರ್ಜಿಯ ಜೊತೆಯಲ್ಲಿ ವಿದೇಶಿ ವಿಶ್ವ ವಿದ್ಯಾಲಯದ ಪ್ರವೇಶ ಪತ್ರ (ಆಪರ್ ಲೆಟರ್) ವಿದ್ಯಾರ್ಥಿಯ ವೀಸಾ ಪಾಸ್ ಪೋರ್ಟ್ ಮತ್ತು ಏರ್ ಟಿಕೇಟ್ ಪ್ರತಿ ಒದಗಿಸಬೇಕು. ಸ್ನಾತಕೋತ್ತರ ಕೋರ್ಸ್ ಗಳಿಗೆ ವಯೋಮಿತಿ 32, ಪಿಎಚ್ಡಿ ಕೋರ್ಸ್ಗಳಿಗೆ 35 ವರ್ಷಗಳ ವಯೋಮಿತಿಯೊಳಗೆ ಇರಬೇಕು.
ಆಸಕ್ತರು ಸೇವಾ ಸಿಂಧು ತಂತ್ರಾಂಶದ ಮುಕಾಂತರ ಅರ್ಜಿ ಸಲ್ಲಿಸಬಹುದು.