
ಕರಡ: ಜೂ.06: (nadubade news) ವರದಿ: ಅಶ್ರಫ್:- ನಾಪೋಕ್ಲು ವ್ಯಾಪ್ತಿಯ, ಕರಡ, ಚೆಯ್ಯಂಡಾಣೆ, ನಾಲಡಿ, ಕಕ್ಕಬ್ಬೆಯ ಶಾಲಾ ಆವರಣದಲ್ಲಿ ವಿಶ್ವಪರಿಸರ ದಿನಾಚರಿಸಲಾಗಿದೆ.
ಕರಡ: ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಅಮ್ಮನ ಹೆಸರಿನಲ್ಲಿ ಒಂದು ಮರ ಎಂಬ ಧ್ಯೇಯ ವಾಕ್ಯದಂತೆ ವಿದ್ಯಾರ್ಥಿಗಳು ಇಕೋ ಕ್ಲಬ್ ವತಿಯಿಂದ ನೀಡಿದ ಸಸಿಗಳನ್ನು ನೆಟ್ಟರು. ಶಾಲೆಯ ಮುಖ್ಯ ಶಿಕ್ಷಕಿ ಲೀಲಾವತಿ ಪರಿಸರ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿ ಗಿಡಗಳನ್ನು ಪೋಷಿಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಈ ಸಂದರ್ಭ ಅತಿಥಿ ಶಿಕ್ಷಕಿ ಫಶೀಲಾ,ಸಿಬ್ಬಂದಿ ಕಾವೇರಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಚೆಯ್ಯಂಡಾಣೆ: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುದರ ಮೂಲಕ ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಎಚ್.ಆರ್.ಪ್ರೇಮಾಕುಮಾರಿ ಪರಿಸರ ಸಂರಕ್ಷಣೆಯ ಕುರಿತು ಮಾತನಾಡಿದರು. ಈ ಸಂದರ್ಭ ಶಿಕ್ಷಕರಾದ ಪೂರ್ಣೇಶ್, ದಮಯಂತಿ, ಜಯಪ್ರದ, ಸತ್ಯಮ್ಮ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಕ್ಕಬೆ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನ
ಕಕ್ಕಬ್ಬೆ: ಕಕ್ಕಬೆಯ ಡಾ:ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ರಝಿನಾ ವಿಶ್ವ ಪರಿಸರ ದಿನದ ಮಹತ್ವದ ಕುರಿತು ಮಾತನಾಡಿದರು. ಈ ಸಂದರ್ಭ ಶಾಲೆಯ ಶಿಕ್ಷಕಿಯರಾದ ಆಶಾ,ಜಲಜಾಕ್ಷಿ, ಸಿಬ್ಬಂದಿಗಳಾದ ಸಬಿತಾ, ಹೇಮಾವತಿ, ಜಯಂತಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಾಲಡಿ: ನಾಲಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಶಾಲೆಯ ವಠಾರದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟರು. ಈ ಸಂದರ್ಭ ಶಾಲೆಯ ಅತಿಥಿ ಶಿಕ್ಷಕಿ ಗೌರಮ್ಮ, ಸಾರಿಕಾ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.