
ಪೊನ್ನಂಪೇಟೆ, ಮೇ.23(Nadubade News): ಜೂನ್ 7 ಹಾಗೂ 8 ರಂದು, ಜೂನಿಯರ್ ಕಾಲೇಜ್ ಮೈದಾನ ಪೊನ್ನಂಪೇಟೆಯಲ್ಲಿ, ತೂಚಮಕೇರಿ ಪೆಮ್ಮಂಡ ಒಕ್ಕದ ವತಿಯಿಂದ ಆಯೋಜಿಸಿರುವ, ಕೊಡವ ಕುಟುಂಬಗಳ ನಡುವಿನ ತೋಕ್ ನಮ್ಮೆ 2025 ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ಲಾಂಛನವನ್ನು ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಆವರು ಬಿಡುಗಡೆ ಮಾಡಿದರು.
ಕೊಡಗು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಅಂತರ್ ಕುಟುಂಬದ ಈ ಸ್ಪರ್ಧಾ ಕೂಟದ ಲಾಂಛನ ಬಿಡುಗಡೆ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಹಾಗೂ ಈ ಸ್ಪರ್ಧಾ ಕೂಟದ ಆಯೋಜಕ ಪೆಮ್ಮಂಡ ಮಂಜು ಪೊನ್ನಪ್ಪ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಬೆಂಗಳೂರಿನ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಾನ್ಯ ಶಾಸಕರು ಈ ಲಾಂಛನವನ್ನು ಬಿಡುಗಡೆಗೊಳಿಸಿದರು.