
ಕಿಕ್ಕೆರೆ; ಜು.31;(nadubadenews): ಕರ್ನಾಟಕ ರಾಜ್ಯ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ (ರಿ) ಕೊಡಗು ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆ ಜುಲೈ 30ರಂದು ಕಿಕ್ಕರೆ ಇರ್ಷಾದುಲ್ ಇಸ್ಲಾಂ ಮದ್ರಸ ಹಾಲ್ ನಲ್ಲಿ ಜರಗಿತು. ಕರ್ನಾಟಕ ಸುನ್ನಿ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿಗಳೂ ಕೊಡಗು ಜಿಲ್ಲಾ ನಾಇಬ್ ಖಾಝಿಗಳಾಗಿದ್ದ ಶೈಖುನಾ ಮಹ್ಮೂದ್ ಉಸ್ತಾದರ ಝಿಯಾರತ್ ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. SJM ಕೊಡಗು ಜಿಲ್ಲಾಧ್ಯಕ್ಷ ಮುಸ್ತಫ ಸಖಾಫಿ ರವರ ಅಧ್ಯಕ್ಷತೆಯಲ್ಲಿ ರಾಜ್ಯಾಧ್ಯಕ್ಷರಾದ ಅಬ್ದುರ್ರಹ್ಮಾನ್ ಮದನಿ ಜೆಪ್ಪು ಕೌನ್ಸಿಲ್ ಉದ್ಘಾಟಿಸಿದರು.
ರಾಜ್ಯ SJM ಪ್ರ. ಕಾರ್ಯದರ್ಶಿ KKM ಕಾಮಿಲ್ ಸಖಾಫಿ ಹಾಗೂ ಕಿಕ್ಕರೆ ಜುಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷರಾದ ಬಶೀರ್ ಕೈ ವೈ,ಶುಭ ಹಾರೈಸಿದರು. ಮುಹ್ಯುದ್ದೀನ್ ಸಅದಿ ತೋಟ್ಟಾಲ್ ಕೌನ್ಸಿಲ್ ನ ವೀಕ್ಷಕರಾಗಿದ್ದರು. ವಿಭಾಗವಾರು ವರದಿಗಳನ್ನು ಶಂಸುದ್ದೀನ್ ಅಂಜದಿ (ಪರೀಕ್ಷಾ) ನೌಷಾದ್ ಲತೀಫಿ (ವೆಲ್ಫೇರ್) ನಝೀರ್ ಸಖಾಫಿ (ಮಿಶನರಿ) ಹಂಝ ರಹ್ಮಾನಿ (ಮ್ಯಾಗಝಿನ್) ಹಾಗೂ ಹಸೈನಾರ್ ಮುಸ್ಲಿಯಾರ್ (ಟ್ರೈನಿಂಗ್) ಮಂಡಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಖಾಫಿ ವಾರ್ಷಿಕ ವರದಿ ಮತ್ತು ಫಿನಾನ್ಸ್ ಕಾರ್ಯದರ್ಶಿ ಅಬ್ದುಲ್ಲ ಸಖಾಫಿ ಕೊಳಕೇರಿ ಲೆಕ್ಕಪತ್ರ ಮಂಡಿಸಿದರು.
ನೂತನ ಸಮಿತಿ : ಅಬ್ದುಲ್ಲ ಸಖಾಫಿ ಕೊಳಕೇರಿ (ಅಧ್ಯಕ್ಷರು) ಶಂಸುದ್ದೀನ್ ಅಂಜದಿ (ಪ್ರಧಾನ ಕಾರ್ಯದರ್ಶಿ) ಅಶ್ರಫ್ ಸಖಾಫಿ (ಫಿನಾನ್ಸ್ ಕಾರ್ಯದರ್ಶಿ) ಮುನೀರ್ ಸಅದಿ ಹಾಗೂ ಹಂಝ ರಹ್ಮಾನಿ (ಪರೀಕ್ಷಾ ಹಾಗೂ ವೆಲ್ಫೇರ್ ವಿಭಾಗ) ರಝಾಖ್ ಸಖಾಫಿ ಹಾಗೂ ಯಾಕೂಬ್ ರಝ್ವಿ (ಮ್ಯಾಗಝಿನ್ ವಿಭಾಗ) ಹಸೈನಾರ್ ಮುಸ್ಲಿಯಾರ್ ಹಾಗೂ ನಝೀರ್ ಸಖಾಫಿ (ಪಿಂಚಣಿ ವಿಭಾಗ) ಮುಸ್ತಫ ಸಖಾಫಿ ಹಾಗೂ ರಝಾಖ್ ಸಅದಿ (ಟ್ರೈನಿಂಗ್ ಮತ್ತು ಮಿಶನರಿ ವಿಭಾಗ) ಸಬಾಹ್ ಸಖಾಫಿ, ಜಅಫರ್ ಮಿಸ್ಬಾಹಿ, ಯೂನುಸ್ ಮರ್ಝುಖಿ, ಉನೈಸ್ ಸುಲ್ತಾನಿ, ಹಸೈನಾರ್ ಸಅದಿ, ಹಸೈನಾರ್ ಸಖಾಫಿ, ಕಬೀರ್ ಝುಹ್ರಿ, ಜಲೀಲ್ ಇಂದಾದಿ ಹಾಗೂ ನೌಷಾದ್ ಲತೀಫಿ (ಸದಸ್ಯರು)
ಜಿಲ್ಲಾ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಖಾಫಿ ಸ್ವಾಗತಿಸಿ ನೂತನ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಅಂಜದಿ ವಂದಿಸಿದರು.