ವಿರಾಜಪೇಟೆ ಇ.ಸಿ.ಹೆಚ್.ಎಸ್ ಮಾಹಿತಿ…

ವಿರಾಜಪೇಟೆ ,ಮೇ.01: ವಿರಾಜಪೇಟೆ ECHS ಪಾಲಿಕ್ಲಿನಿಕ್ ನ ವೈದ್ಯಾಧಿಕಾರಿ ಡಾ.  ಅರ್ಚನಾರವರು ತಾ. 03 ಮತ್ತು 05 ಮೇ 2025 ರಂದು ಲಭ್ಯವಿರುವುದಿಲ್ಲ ಹಾಗೂ ಲ್ಯಾಬ್ ಟೆಕ್ನಿಷಿಯನ್ ತಾ 05 ರಿಂದ 07 ಮೇ 2025 ವರೆಗೆ ಲಭ್ಯವಿರುವುದಿಲ್ಲ ಎಂದು ಪಾಲಿಕ್ಲಿನಿಕ್ ಅಧಿಕಾರಿ ತಿಳಿಸಿರುತ್ತಾರೆ.

Continue Reading

ಕೊಡಗು ಜಿಲ್ಲಾ  ಅಹಿಂದ ಸಂಘಟನೆಗೆ ನೂತನ  ಪದಾಧಿಕಾರಿಗಳು…

 ಮಡಿಕೇರಿ, ಮೇ,01: ಕೊಡಗು ಜಿಲ್ಲಾ ಅಹಿಂದ ಸಂಘಟನೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಅಹಿಂದ ಸಂಘಟನೆಯ   ರಾಜ್ಯಾಧ್ಯಕ್ಷರಾದ ಪ್ರಭುಲಿಂಗ ದೊಡ್ಡನಿ ಅವರ ಆದೇಶದ ಮೇರೆಗೆ  ಅಹಿಂದ ಕೊಡಗು ಜಿಲ್ಲಾಧ್ಯಕ್ಷರಾಗಿ ರವಿಗೌಡ. ಗೌರವ ಅಧ್ಯಕ್ಷರಾಗಿ ಟಿ.ಎಂ.ಅಯ್ಯಪ್ಪ. ಕಾರ್ಯಧ್ಯಕ್ಷರಾಗಿ ವಿನೋದ್ ಗಣೇಶ್ ದೊಡ್ಮನೆ ಹಾಗೂ ಸುಧಯ್ ನಾಣಯ್ಯ. ಉಪಾಧ್ಯಕ್ಷರಾಗಿ ಹರೀಶ್.ಹೆಚ್. ಜಿ ಹಾಗೂ ಸೋಮನಾಥ್.  ಐ. ಪ್ರಧಾನ ಕಾರ್ಯದರ್ಶಿ ಸುಲೇಮಾನ್. ಎಂ. ವೈ. ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಎಚ್ ಎಲ್ ಸಲಹೆಗಾರರಾಗಿ .ಜಹೀರ್ ಅಹ್ಮದ್  ಎಂ.ಬಿ ಅವರುಗಳನ್ನು  ಕೊಡಗು ಜಿಲ್ಲಾ […]

Continue Reading

ನಾಳೆ ಪ್ರಕಟಗೊಳ್ಳಲಿದೆ  ಎಸ್.ಎಸ್.ಎಲ್.ಸಿ-1ರ ಫಲಿತಾಂಶ…

      ಮಡಿಕೇರಿ, ಮೇ.01: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸಿದ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಮೇ 2 ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು karresults.nic.in ಅಥವಾ kseab.karnataka.gov.in ವೆಬ್‌ಸೈಟ್‌ಗಳಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು. SMS ಮೂಲಕವೂ ಫಲಿತಾಂಶ ಪಡೆಯಬಹುದು.       ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸುವ ಎಸ್ಎಸ್​​ಎಲ್​ಸಿ ಪರೀಕ್ಷೆ-1 (SSLC Exam-1) ಮುಕ್ತಾಯಗೊಂಡಿದ್ದು, ವಿದ್ಯಾರ್ಥಿಗಳು ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ಈಗಾಗಲೇ ಮೌಲ್ಯಮಾಪನ ಕೂಡ ಮುಕ್ತಾಯಗೊಂಡಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಶುಕ್ರವಾರ […]

Continue Reading

ಬಾಳೆಕುಟ್ಟಿರ ಕೇರ್‌ ಬಲಿ ನಮ್ಮೆ ನಾಳೆಂಜ…

 ಅರಮೇರಿ, ಏ.30: ಕೊಡವ ಕೇರ್ ಬಲಿ ಅಕಾಡೆಮಿರ ಆದನೆಲ್,  ಕೊಡವ ಒಕ್ಕೊಡೊಕ್ಕಡ  4ನೇ ಕಾಲತ ಕೇರ್‌ ಬಲಿ ನಮ್ಮೆಈ ಕುರಿ ಮೈತಾಡಿ  ಬಾಳೆಕುಟ್ಟಿರ ಒಕ್ಕಕಾರ ನಡ್ತಿಯಂಡುಂಡ್. ಇದೇ ನಾಳಂಕೆ  ಮೇ  1, 2 ಪಿಂಞ 3ಲ್‌ ಎಸ್.ಎಂ.ಎಸ್. ವಿದ್ಯಾಪೀಠ ಕಳಿಪರಂಬು, ಅರಮೇರಿಲ್  ಪೈಪೋಟಿ ನಡ್‌ಪ. 1ನೇ ನಾಳಂಕೆ ಪೊಲಾಕ 9.30 ಗಂಟೆಕ್ ಉದ್ಘಾಟನ ಕಾರ್ಬಾರ್‌ ‌ ಒಕ್ಕ ಫಂಡ್‌ ಅಧ್ಯಕ್ಷಂಗಳಾನ  ಬಾಳೆಕುಟ್ಟಿರ ಎಂ. ಮಂದಣ್ಣ ಅಯಿಂಗಡ ಕೊರವುಕಾರಿಕೆಲ್ ನಡ್ಪ. ಮುಖ್ಯ ಬೆಂದುವಳಾಯಿತ್, ಕರ್ನಾಟಕ ಸರ್ಕಾರ ಮುಖ್ಯಮಂತ್ರಿರ ಕಾನೂನ್ […]

Continue Reading

ಬಸವಣ್ಣನವರ ತತ್ವ,ಆದರ್ಶಗಳನ್ನು ಪಾಲಿಸೋಣ, ಶಾಸಕ ಡಾ. ಮಂತರ್‌ ಗೌಡ ಕರೆ…

 ಸೋಮವಾರಪೇಟೆ, ಏ.30: ಇಲ್ಲಿನ ಬಸವ ಬಳಗ, ತಾಲ್ಲೋಕು ಆಡಳಿತ,ಹಿರಿಯ ನಾಗರಿಕರ ಟ್ರಸ್ಟ್, ಸಾಹಿತ್ಯ ಪರಿಷತ್ತು,ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಾಗೂ ಪಟ್ಟಣದ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಬಸವೇಶ್ವರ ವೃತ್ತದಲ್ಲಿ  ಆಯೋಜಿಸಲಾಗಿದ್ದ ಬಸವೇಶ್ವರರ 892 ನೆ ಜಯಂತಿ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.    12ನೆ ಶತಮಾನದಲ್ಲಿಯೇ ಬಸವಣ್ಣನವರು ಜಾತ್ಯಾತೀತ ಸಮಾಜ ನಿರ್ಮಾಣದ ಸಂಕಲ್ಪ ತೊಟ್ಟಿದ್ದರು. ಇಂದು ನಾವು ಅವರ ಜಯಂತಿ ಆಚರಿಸುವುದು ಮಾತ್ರವಲ್ಲ ಅವರ ತತ್ವ,ಆದರ್ಶಗಳನ್ನು ಪಾಲಿಸಬೇಕು,ಜಾತ್ಯಾತೀತ ಮನೋಭಾವನೆ ರೂಡಿಸಿಕೊಳ್ಳಬೇಕು ಎಂದರು. ವಿಶ್ವದಲ್ಲಿ ಮೊದಲ ಭಾರಿಗೆ […]

Continue Reading

ಮೌಲಾನಾ ಆಜಾದ್ ಮಾದರಿ ಶಾಲೆ, 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ…

ಮಡಿಕೇರಿ ಏ.30: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿರುವ ಮೌಲಾನಾ ಆಜಾದ್ ಮಾದರಿ ಶಾಲೆಗೆ (ಆಂಗ್ಲ ಮಾಧ್ಯಮ) 6ನೇ ತರಗತಿ ಉಚಿತ ಪ್ರವೇಶಾತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.     ಅರ್ಹ ವಿದ್ಯಾರ್ಥಿಗಳು https://sevasindhuservices.karnataka.gov.in  ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಕೂಡಲೇ ಇದರ ಸದುಪಯೋಗ ಪಡಿಸಿಕೊಳ್ಳಲು ಈ ಮೂಲಕ ಕೋರಿದೆ.       ಅರ್ಜಿ ಸಲ್ಲಿಸಲು ಮೇ, 10 ಕೊನೆಯ ದಿನವಾಗಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶೇ.75 ರಷ್ಟು, […]

Continue Reading

ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ, ಅಹವಾಲು ಸಲ್ಲಿಕೆಗೆ ಅವಕಾಶ…

ಮಡಿಕೇರಿ,ಏ.29: ಗೌರವಾನ್ವಿತ ನ್ಯಾಯಮೂರ್ತಿ ಡಾ.ಎಚ್.ಎನ್.ನಾಗಮೋಹನ ದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಪಟ್ಟಂತೆ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ನಡೆಯಲಿದೆ.  ಅದರಂತೆ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆಯು ಒಟ್ಟು ಮೂರು ಹಂತಗಳಲ್ಲಿ ನಡೆಯಲಿದೆ. ಮೇ, 05 ರಿಂದ 17 ರವರೆಗೆ ಗಣತಿದಾರರು ಮನೆ ಮನೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳಲಿದ್ದಾರೆ. ಮೇ, 19 ರಿಂದ 21 ರವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಕೈಗೊಳ್ಳಲಿದ್ದಾರೆ. ಮೇ, 19 […]

Continue Reading

ವಸತಿ ಯೋಜನೆ ಆದೇಶ ಪತ್ರ ವಿತರಣಾ ಸಮಾರಂಭ ಮೇ,02 ರಂದು…

  ಮಡಿಕೇರಿ ಏ.29: -ರಾಜೀವ್ ಗಾಂಧಿ ವಸತಿ ನಿಗಮ, ಕೊಡಗು ಜಿಲ್ಲಾ ಪಂಚಾಯತ್, ಮಡಿಕೇರಿ ತಾಲ್ಲೂಕು ಪಂಚಾಯತ್, ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲ್ಲೂಕಿನ ಎಂಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಸವ ವಸತಿ ಯೋಜನೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆ(ಹೆಚ್ಚುವರಿ)ಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಕಾಮಗಾರಿ ಆದೇಶ ಪತ್ರ ವಿತರಿಸುವ ಸಮಾರಂಭವು ಮೇ, 02 ರಂದು ಬೆಳಗ್ಗೆ 10.30 ಗಂಟೆಗೆ ಕೊಡಗು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.

Continue Reading

ವಸತಿ ಯೋಜನೆ ಆದೇಶ ಪತ್ರ ವಿತರಣಾ ಸಮಾರಂಭ ಮೇ,02 ರಂದು…

     ಮಡಿಕೇರಿ ಏ.29: -ರಾಜೀವ್ ಗಾಂಧಿ ವಸತಿ ನಿಗಮ, ಕೊಡಗು ಜಿಲ್ಲಾ ಪಂಚಾಯತ್, ಮಡಿಕೇರಿ ತಾಲ್ಲೂಕು ಪಂಚಾಯತ್, ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲ್ಲೂಕಿನ ಎಂಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಸವ ವಸತಿ ಯೋಜನೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆ(ಹೆಚ್ಚುವರಿ)ಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಕಾಮಗಾರಿ ಆದೇಶ ಪತ್ರ ವಿತರಿಸುವ ಸಮಾರಂಭವು ಮೇ, 02 ರಂದು ಬೆಳಗ್ಗೆ 10.30 ಗಂಟೆಗೆ ಕೊಡಗು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.

Continue Reading

ವಿದ್ಯುತ್‌ ಸರಬರಾಜಿನಲ್ಲಿ ಅಡಚಣೆ ಸಹಾಯವಾಣಿ ಕೇಂದ್ರ ಆರಂಭ…

 ಮಡಿಕೇರಿ ಏ.29 : ಕೊಡಗು ಜಿಲ್ಲೆಯಾದ್ಯಂತ ಆಗಾಗ ಮಳೆ ಬೀಳುತ್ತಿದ್ದು, ಗಾಳಿಯೂ ಸಹ ಇದೆ. ಹೆಚ್ಚಿನ ಬಿರುಗಾಳಿಯಿಂದ ವಿದ್ಯುತ್‌ ಸರಬರಾಜಿನಲ್ಲಿ ಅಡಚಣೆಗಳು ಉಂಟಾಗುತ್ತಿದ್ದು, ವಿದ್ಯುತ್ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ತಿಳಿಸಿದ್ದಾರೆ. ಸಾರ್ವಜನಿಕರು ಯಾವುದೇ ರೀತಿಯ ವಿದ್ಯುತ್ ಜಾಲದ ವ್ಯತ್ಯಯಗಳನ್ನು (ವಿದ್ಯುತ್ ಮಾರ್ಗದ ತಂತಿ ಹಾಗೂ ಕಂಬಗಳು ತುಂಡಾಗುವುದು) ಗಮನಿಸಿದಲ್ಲಿ, ಸ್ವತಃ ಕ್ರಮಕೈಗೊಳ್ಳದೇ (ವಿದ್ಯುತ್ ತಂತಿ ಸ್ಪರ್ಶಿಸದೇ) ತಕ್ಷಣ ಚಾ.ವಿ.ಸ.ನಿನಿ.ಯ ದೂರವಾಣಿ ಸಂಖ್ಯೆಗಳಲ್ಲಿ ತಮ್ಮ ದೂರುಗಳನ್ನು ದಾಖಲಿಸುವಂತೆ […]

Continue Reading