ಮಡಿಕೇರಿ ನ.04:- ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯ ವ್ಯಾಪ್ತಿಯಲ್ಲಿ, ಪ್ರತೀ ವರ್ಷ ಸಂಪ್ರದಾಯದಂತೆ ನಡೆಸಿಕೊಂಡು ಬರುತ್ತಿರುವ ‘ವಿಷ್ಣುಮೂರ್ತಿ ಕೋಲ’(ಚಾಮುಂಡಿ ಉತ್ಸವ)ವು ನವೆಂಬರ್, 08 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಸಾರ್ವಜನಿಕ ಭಕ್ತಾಧಿಗಳು ‘ವಿಷ್ಣುಮೂರ್ತಿ ಕೋಲ’ ಉತ್ವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ, ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ, ಆಡಳಿತಾಧಿಕಾರಿಗಳ ಪರವಾಗಿ , ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ಕೋರಿದ್ದಾರೆ