ಸೋಮವಾರಪೇಟೆ, ಜು.13;(nadubadenews): ಪಟ್ಟಣದ ಪಿಎಂ ಶ್ರೀ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ hp ಕಂಪನಿಯ ಸಹಾಯದೊಂದಿಗೆ ಸುಮಾರು 40 ಲಕ್ಷ ವೆಚ್ಚದ ಆಧುನಿಕ ಕಂಪ್ಯೂಟರ್ ಕೊಠಡಿಯನ್ನು ಉದ್ಘಾಟಿಸಲಾಯಿತು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್.ಪಿ. ಕಂಪನಿಯ ಸಿಇಓ ವಿಜಯ್ ಕುಮಾರ್ ಅವರು ಹಾಗೂ ಅವರ ತಾಯಿ ಲಲಿತ ರಂಗಸ್ವಾಮಿ ಮತ್ತು ಅವರ ಸಹೋದರ ವೇಣುಗೋಪಾಲ್, ಕರ್ನಾಟಕ ಹಾಕಿ ತಂಡದ ತರಬೇತುದಾರ ದೇವದಾಸ್, ಶಾಲಾ ಎಸ್ಟಿ.ಎಂ.ಸಿಯ ಅಧ್ಯಕ್ಷ ದಿನೇಶ್, ಕಂಪ್ಯೂಟರ್ ಕೊಠಡಿ ನಿರ್ಮಿಸಲು ಪ್ರಮುಖ ಕಾರಣೀಕರ್ತರಾದ, ಚೌಡ್ಲು ಗ್ರಾಮಪಂಚಾಯತಿ ಮಾಜಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಶಾಲಾ ಮುಖ್ಯೋಪಾಧ್ಯಾಯರದ ಯಶೋಧ, ಬಿ ಆರ್ ಸಿ ಪ್ರೇಮ ಹಾಗೂ ಶಾಲಾ ಶಿಕ್ಷಕರು ಮತ್ತು ಪೋಷಕ ವರ್ಗದವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.