https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಸೋಮವಾರಪೇಟೆ ಪಟ್ಟಣ ಪಂಚಾಯತಿ, ಮಳಿಗೆ ಹರಾಜು ಅನುಷ್ಟಾನಕ್ಕೆ ಹೈಕೋರ್ಟ್ ತಡೆಯಾಜ್ಞೆ

ಸೋಮವಾರಪೇಟೆ ಪಟ್ಟಣ ಪಂಚಾಯತಿ, ಮಳಿಗೆ ಹರಾಜು ಅನುಷ್ಟಾನಕ್ಕೆ ಹೈಕೋರ್ಟ್ ತಡೆಯಾಜ್ಞೆ

Uncategorized
08/01/202508/01/2025nadubadenews@gmail.comLeave a Comment on ಸೋಮವಾರಪೇಟೆ ಪಟ್ಟಣ ಪಂಚಾಯತಿ, ಮಳಿಗೆ ಹರಾಜು ಅನುಷ್ಟಾನಕ್ಕೆ ಹೈಕೋರ್ಟ್ ತಡೆಯಾಜ್ಞೆ
Spread the love
ಸೋಮವಾರಪೇಟೆ ಪಟ್ಟಣ ಪಂಚಾಯತಿ, ಮಳಿಗೆ ಹರಾಜು ಅನುಷ್ಟಾನಕ್ಕೆ ಹೈಕೋರ್ಟ್ ತಡೆಯಾಜ್ಞೆ

‌            ಸೋಮವಾರಪೇಟೆ, ಜ.08: ಇಲ್ಲಿನ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳಿಗೆ ನಡೆದಿದ್ದ ಹರಾಜು ಪ್ರಕ್ರಿಯೆಗೆ ರಾಜ್ಯ ಉಚ್ಚನ್ಯಾಯಾಲಯ ತಡೆಯಾಜ್ಞೆ ನೀಡಿದೆ.

            ಇತ್ತೀಜೆಗೆ ನಡೆದಿದ್ದ ಪಟ್ಟಣ ಹರಾಜು ಪ್ರಕೃಇಯೆಯಲ್ಲಿ ವ್ಯಾಪಕ ಅಕ್ರಮ ಎಸಗಲಾಗಿದೆ ಎಂಬ ಆರಫಗಳು ಕೇಳಿ  ಬಂದಿತ್ತು. ಆ ನಂತರ ಪಟ್ಟಣ ಪಂಚಾಯತಿ ಸಾಮನ್ಯ ಸಭೆಯಲ್ಲೂ ವಿಚಾರ ಪ್ರಸ್ತಾಪವಾಗಿ, ಮರು ಈ ಟೆಂಡರ್‌ ಮಾಡಲು, ನಿರ್ಣಯ ಮಾಡಲಾಗಿತ್ತಾದರೂ, ಮತ್ತೇ ಅದೇ ಹರಾಜನ್ನು ಮುಂದುವರೆಸಲಾಗಿತ್ತು.

ಇದರಿಂದ ಅಸಮಧಾಘೊಂಡ ವರ್ತಕ ಸೂರಜ್‌ ಗೋಂವಿಂದರಾಜ್‌ ಅವರು ತಮ್ಮ ವಕೀಲರ ಮೂಲಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು.  ಪಿಚಾರಣೆ ನಡೆಸಿದ ನ್ಯಾಯಾಲಯವು, ಮುಂದಿನ ವಿಚಾರಣೆವರೆಗೆ ಯಾವುದೇ ಹರಾಜು ಅನುಷ್ಟಾನ ಮಾಡದಂತೆ ಮದ್ಯಂತರ ತಡೆ ನೀಡಿ, ಪ್ರಕರಣದ ಮುಂದಿ ವಿಚಾರಣೆಯನ್ನು 07/02/2025ಕ್ಕೆ ಮುಂದೂಡಿದ್ದಾರೆ.

ಪಟ್ಟಣದ ಖಾಸಗೀ ಬಸ್‌ಸ್ಟಾಂಡ್‌ ಸೇರಿದಂತೆ ಹಲವು ವಾಣಿಜ್ಯ ಮಾರುಕಟ್ಟೆಗಳಿಗೆ ಪಟ್ಟಣ ಪಂಚಾಯತಿ ಹರಾಜು ಪ್ರಕ್ರಿಯೆ ನಡೆಸಿತ್ತು. ಈ ಟೆಂಡರ್‌ನಲ್ಲಿ ವರ್ತಕರಿಗಿಂತ ಹೆಚ್ಚಾಗಿ ಮದ್ಯವರ್ತಿಗಳೇ  ಬಿಡ್‌ ಹಾಕಿದ್ದರು. ಆ ನಂತರ ಹಲವು ವರ್ತಕರಿಂದ ಬಿಡ್‌ ಹಿಂಪಡೆಯಲು ದುಪ್ಪಟ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮದ್ಯವರ್ತಿಗಳ ಬೇಡಿಕೆಗೆ ಒಪ್ಪದ ವರ್ತಕರು ವ್ಯಾಪಾರ ನಡೆಸುತಿದ್ದ ಮಳಿಗೆಗಳನ್ನು  ಬೇಕಾಬಿಟ್ಟಿ ದರಕ್ಕೆ ಕೂಗಲಾಗಿತ್ತು, ಒಂದು ಮಳಿಗೆಯನ್ನು ಕೇವಲ ನಾಲ್ಕು ಸಾವಿರ ತಿಂಗಲ ಬಾಡಿಗೆಗೆ ಕೂಗಿದರ ಅದರ ಒತ್ತಿನ ಕೇವಲ 12×12 ಅಳತೆಯ ಮಳಿಗೆಗೆ 44000 ತಿಂಗಳ ಬಾಡಿಗೆಯವರೆಗೆ ಹರಾಜು ಕೂಗಲಾಗಿತ್ತು.  ಇದು ಪಟ್ಟಣ ಪಂಚಾಯತಿಯ ಅವೈಜ್ಞಾನಿಕ ಕಾರ್ಯವಿಧಾನ ಅಲ್ಲದೆ, ದಲ್ಲಾಳಿಗಳ ಹಣ ಮಾಡುವ ದಂಧೆಗೆ ಪೂರಕ ನಡೆ ಎಂದು ವರ್ತಕರು ಅಸಮಧಾನ ವ್ಯಕ್ತಪಡಿಸಿ, ಇದರ ಬದಲಿಗೆ  ಹಾಲೀ ವ್ಯಾಪಾರ ನಡೆಯುತ್ತಿರುವ ಮಳಿಗೆಗಳನ್ನು ಹರಾಜಿಗೆ ಒಳಪಡಿಸದೇ, ಪ್ರಸ್ತುತ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳಿಗೇ ಮುಂಗಡ ಮತ್ತು ಬಾಡಿಗೆಯನ್ನು ಕಾನೂನಿನ ಅನ್ವಯ ಹೆಚ್ಚಿಸಿ ಮುಂದರುವರೆಯಲು ಬಿಡಿ ಎಂಬ ಬೇಡಿಕೆಯೂ ವ್ಯಕ್ತವಾಗಿತ್ತು. ಆದರೆ ಪಟ್ಟಣ ಪಂಚಾಯತಿ ಮಾತ್ರ ಅವೈಜ್ಞಾನಿಕ ಮತು ಅಜ್ಞಾನದಿಂದ ವರ್ತಿಸಿದ್ದು ಹಾಲೀ ವ್ಯಾಪಾರಿಗಳ  ಬದುಕು ಬೀದಿಗೆ ಬಿದ್ದರೆ,  ಜಿದ್ದಿಗೆ ಬಿದ್ದು ಅಧಿಕ ದರದ ಹರಾಜು ಕೂಗಿದವರು ಆಕಾಶ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Post navigation

ಸರ್ವೇ ಮತ್ತು ನೋಂದಣಿ ಇಲಾಖೆಗಳ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ  ಶಾಸಕ ಡಾ.ಮಂಥರ್‌ ಗೌಡ ಚಾಲನೆ
ನದಿ ನೀರು ಮಲೀನಗೊಳಿಸುತಿದ್ದ ಅಸ್ಸಾಂ ಕಾರ್ಮಿಕರು, ದಂಡ ಜಡಿದ ಕಕ್ಕಬ್ಬೆ ಪಂಚಾಯತಿ. ಪರಿಸರ ಪ್ರೇಮಿಗಳ ಮೆಚ್ಚುಗೆ.

Related Posts

ಮಹೇಶ್‌ ತಿಮ್ಮಯ್ಯ,  ಯುವಮೋರ್ಚಾ ಅಧ್ಯಕ್ಷರು, ಬಿಜೆಪಿ, ಕೊಡಗು.

ಮಹೇಶ್‌ ತಿಮ್ಮಯ್ಯ, ಯುವಮೋರ್ಚಾ ಅಧ್ಯಕ್ಷರು, ಬಿಜೆಪಿ, ಕೊಡಗು.

01/01/202501/01/2025nadubadenews@gmail.com
ಕಟ್ಟೆಮಾಡ್ ಊರ್‌ ಮಂದಿನಲ್ಲಿ ಊರೊರ್ಮೆ, ಕೊಡವ ಅಕಾಡೆಮಿ, ಸಂಘಟನೆಗಳ ಪ್ರಮುಖರು ಭಾಗಿ…

ಕಟ್ಟೆಮಾಡ್ ಊರ್‌ ಮಂದಿನಲ್ಲಿ ಊರೊರ್ಮೆ, ಕೊಡವ ಅಕಾಡೆಮಿ, ಸಂಘಟನೆಗಳ ಪ್ರಮುಖರು ಭಾಗಿ…

20/01/202520/01/2025nadubadenews@gmail.com
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌ – 13

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌ – 13

10/01/202510/01/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us