ಸುಂಟಿಕೊಪ್ಪ, ಅ.08: ಸುಂಟಿಕೊಪ್ಪ ಮಾದಾಪುರ ರಸ್ತೆಯ ಪನ್ಯದಲ್ಲಿರುವ, ಸಂದೇಶ್ ಎಂಬಡರಿಗೆ ಸೇರಿದ ತೋಟದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸಿಕ್ಕಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಗೆ ಸಹಕರಿಸುವಂತೆ ಪೊಲೀಸರು ಈ ಕೆಳಗಿನಂತೆ ಪ್ರಕಟಣೆ ಹೊರಡಿಸಿ, ಮನವಿ ಮಾಡಿದ್ದಾರೆ.
ಈ ದಿನ ದಿನಾಂಕ 8. 10.24 ರಂದು ಸುಂಟಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಪನ್ಯ ಕಾಫಿ ಎಸ್ಟೇಟ್ ಒಳಗೆ (ಸುಂಟಿಕೊಪ್ಪ ಮಾದಾಪುರ ರಸ್ತೆಯ ಎಡ ಬದಿ )ಒಬ್ಬ ಅಪರಿಚಿತ ಗಂಡಸಿನ ಮೃತ ದೇಹ ಅರ್ಧ ಸುಟ್ಟ ಸ್ಥಿತಿಯಲ್ಲಿ ದೊರಕಿದ್ದು ಮೃತ ದೇಹದ ಗುರುತು ಪರಿಚಯ ತಿಳಿದುಬಂದಿರುವುದಿಲ್ಲ. ಆದರೆ ಅದರ ಪಕ್ಕದಲ್ಲೇ ಒಂದು NEEMAN ಕಂಪನಿಯ ಒಂದು ಕಪ್ಪು ಬಣ್ಣದ ಎಡಗಾಲಿನ 8 ಸೈಜಿನ ಶೂ ದೊರಕಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ ದಾಖಲಾಗಿರುತ್ತದೆ. ಈ ರೀತಿಯ ಶೂ ಯಾವದೇ ಸಾರ್ವಜನಿಕರ ಸಂಬಂಧಿಗಳದ್ದು, ಸ್ನೇಹಿತರದ್ದು ಅಥವಾ ತಿಳಿದವರದ್ದೋ ಆಗಿದ್ದಲ್ಲಿ ಕೂಡಲೇ ಸುಂಟಿಕೊಪ್ಪ ಠಾಣೆಯನ್ನು ಸಂಪರ್ಕಿಸುವುದು.
ಪಿಎಸ್ಐ ಸುಂಟಿಕೊಪ್ಪ ಪೊಲೀಸ್ ಠಾಣೆ ಫೋನ್ ನಂಬರ್ 9480804953 / 9743071969