https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮುದ್ದಂಡ ಕಪ್ ಹಾಕಿ ಉತ್ಸವ,  ಫೈನಲ್ಸ್ ಗೆ ಶ್ರೇಷ್ಠ ದಿಗ್ಗಜರ  ಆಗಮನ, ಉತ್ಸವ ಸಮಿತಿಯಿಂದ ಸನ್ಮಾನ…

ಮುದ್ದಂಡ ಕಪ್ ಹಾಕಿ ಉತ್ಸವ, ಫೈನಲ್ಸ್ ಗೆ ಶ್ರೇಷ್ಠ ದಿಗ್ಗಜರ ಆಗಮನ, ಉತ್ಸವ ಸಮಿತಿಯಿಂದ ಸನ್ಮಾನ…

News, Informatin , Enteetinement and Advertisement
19/04/202519/04/2025nadubadenews@gmail.comLeave a Comment on ಮುದ್ದಂಡ ಕಪ್ ಹಾಕಿ ಉತ್ಸವ, ಫೈನಲ್ಸ್ ಗೆ ಶ್ರೇಷ್ಠ ದಿಗ್ಗಜರ ಆಗಮನ, ಉತ್ಸವ ಸಮಿತಿಯಿಂದ ಸನ್ಮಾನ…
Spread the love
ಮುದ್ದಂಡ ಕಪ್ ಹಾಕಿ ಉತ್ಸವ,  ಫೈನಲ್ಸ್ ಗೆ ಶ್ರೇಷ್ಠ ದಿಗ್ಗಜರ  ಆಗಮನ, ಉತ್ಸವ ಸಮಿತಿಯಿಂದ ಸನ್ಮಾನ…


ಮಡಿಕೇರಿ ಏ.19 : ಮುದ್ದಂಡ ಕಪ್ ಹಾಕಿ ಉತ್ಸವದ ಫೈನಲ್ ಪಂದ್ಯಾವಳಿ ಮತ್ತು ಸಮಾರೋಪ ಸಮಾರಂಭ ನಡೆಯುವ ಏ.27 ರಂದು ಪ್ರತಿಷ್ಠಿತ ಪ್ರಶಸ್ತಿ ವಿಜೇತ, ಶ್ರೇಷ್ಠ ಆಟಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮುದ್ದಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ತಿಳಿಸಿದ್ದಾರೆ.

1975ರ ವಿಶ್ವಕಪ್ ಹಾಕಿ ವಿಜೇತ, ವಿಶ್ವದಲ್ಲೇ ಅತಿ ಹೆಚ್ಚು ಪದಕ ಗಳಿಸಿರುವ ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ಕೊಡಗಿನ ಸಿಡಿಲಮರಿ ಖ್ಯಾತಿಯ ಬಿ.ಪಿ.ಗೋವಿಂದ ಅವರು ಮುದ್ದಂಡ ಹಾಕಿ ಹಬ್ಬಕ್ಕೆ ಆಗಮಿಸಲಿದ್ದಾರೆ. 1972 ಮ್ಯುನಿಚ್ ಒಲಂಪಿಕ್ಸ್, 1973 ವಿಶ್ವಕಪ್, 1976 ಮಾಂಟ್ರಿಲ್ ಒಲಂಪಿಕ್ಸ್ ನ ಎಲ್ಲಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪದಕ ಗಳಿಸಿದ ಖ್ಯಾತಿ ಇವರದ್ದು. ವಿಶ್ವಕಪ್ ಹಾಕಿ ಭೂಪಟದಲ್ಲಿ ಭಾರತ ಹಾಕಿ ತಂಡದ ಹೆಸರನ್ನು ಅಜರಾಮರಗೊಳಿಸಿದ ಕೊಡಗಿನ ವೀರ, 1975 ವಿಶ್ವಕಪ್ ಹಾಕಿ ವಿಜೇತ ತಂಡದ ಆಟಗಾರ ಪೈಕೇರ ಕಾಳಯ್ಯ, 1980 ಮಾಸ್ಕೋ ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನಾಯಕ, ಭಾರತ ತಂಡದ ತರಬೇತುದಾರ, ವಿಶ್ವಕಪ್ ಹಾಗೂ ಒಲಂಪಿಕ್ಸ್ ನಲ್ಲಿ ಹೆಸರು ಗಳಿಸಿದ, ದಕ್ಷಿಣ ರೈಲ್ವೆ ತಂಡದ ಅದ್ಭುತ ಆಟಗಾರ ಪದ್ಮಶ್ರೀ ಪುರಸ್ಕೃತ ವಾಸುದೇವ ಭಾಸ್ಕರ್, 1980 ಮಾಸ್ಕೋ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತ, 1984 ಲಾಸ್ ಏಂಜಲೀಸ್ ಒಲಂಪಿಕ್ಸ್, 1988 ಸಿಯೋಲ್ ಒಲಂಪಿಕ್ಸ್ ನ ನಾಯಕ, ವಿಶ್ವಕಪ್ ಚಾಂಪಿಯನ್ಸ್ ಟ್ರೋಫಿ ಹಾಗೂ ಇನ್ನು ಹಲವು ಪಂದ್ಯಾವಳಿಗಳಲ್ಲಿ ಆಡಿದ ಕೊಡಗಿನ ಏಕೈಕ ಆಟಗಾರ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಎಂ.ಎಂ.ಸೋಮಯ್ಯ ಆಗಮಿಸಲಿದ್ದಾರೆ.

1968 ಒಲಂಪಿಕ್ಸ್ ನ ಗೋಲ್ ಕೀಪರ್ ಆಗಿ ಪ್ರತಿನಿಧಿಸಿದ ಆಟಗಾರ. ಒಲಂಪಿಕ್ಸ್, ವಿಶ್ವಕಪ್, ಚಾಂಪಿಯನ್ ಟ್ರೋಫಿ, ಏಷ್ಯನ್ ಗೇಮ್ಸ್ ಗಳಲ್ಲಿ ಟೆಕ್ನಿಕಲ್ ಅಫಿಶಿಯಲ್ ಆಗಿ ಬಹಳಷ್ಟು ವರ್ಷ ಸೇವೆ ಸಲ್ಲಿಸಿದ ಹಾಗೂ ಹಾಕಿ ಪಂದ್ಯಾವಳಿಯ ಬಗ್ಗೆ ಅಪಾರ ಅನುಭವವಿರುವ ಮುನೀರ್ ಸೇಟ್, 1996 ಹಾಗೂ 2000 ಒಲಂಪಿಕ್ಸ್ ಆಟಗಾರ. ಏಷ್ಯನ್ ಗೇಮ್ಸ್, ವಿಶ್ವಕಪ್ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಮಹಮ್ಮದ್ ರಿಯಾಜ್ ಅವರು ಆಗಮಿಸಲಿದ್ದಾರೆ.
ಈ ಹಾಕಿ ದಿಗ್ಗಜರನ್ನು ಅರ್ಥಪೂರ್ಣವಾಗಿ ಬರಮಾಡಿಕೊಂಡು ತೆರೆದ ಜೀಪಿನಲ್ಲಿ ಕೊಡಗಿನ ಸಾಂಪ್ರದಾಯಿಕ ದುಡಿಕೊಟ್ ಪಾಟ್ ನೊಂದಿಗೆ ಮೈದಾನದ ಸುತ್ತ ಮೆರವಣಿಗೆ ಮಾಡಲಾಗುವುದು ಎಂದು ರಶಿನ್ ಸುಬ್ಬಯ್ಯ ಮಾಹಿತಿ ನೀಡಿದರು.
ಕೊಡವ ಕೌಟುಂಬಿಕ ಹಾಕಿ ಮೂರು ಬಾರಿ ಲಿಮ್ಕಾ ದಾಖಲೆ, ಒಂದು ಬಾರಿ ಗಿನ್ನಿಸ್ ದಾಖಲೆ ನಿರ್ಮಿಸಿದೆ. ಇಂದು ಕೊಡವ ಹಾಕಿ ವಿಶ್ವ ವಿಖ್ಯಾತ ಪಡೆದಿದೆ. ಎಲ್ಲಾ ಕ್ರೀಡಾ ಪ್ರೇಮಿಗಳು ಮುದ್ದಂಡ ಹಾಕಿ ಹಬ್ಬದ ಕೊನೆಯ ದಿನದ ಅದ್ಭುತ ಕ್ಷಣವನ್ನು ವೀಕ್ಷಿಸಬೇಕು ಎಂಬುವುದು ಮುದ್ದಂಡ ಕುಟುಂಬಸ್ಥರು ಹಾಗೂ ಕೊಡವ ಹಾಕಿ ಅಕಾಡೆಮಿಯ ಬಯಕೆ ಎಂದು ಅವರು ಹೇಳಿದರು.

ಕೊಡವ ಹಾಕಿ ಜನಕನ ಕನಸು ನನಸು

ಕೌಟುಂಬಿಕ ಹಾಕಿಯ ಜನಕ ಪಾಂಡಂಡ ಕುಟ್ಟಪ್ಪ ಅವರು ವಿಶ್ವಕಪ್ ವಿಜೇತರು ಹಾಗೂ ಒಲಂಪಿಕ್ ನಲ್ಲಿ ಚಿನ್ನ ಗೆದ್ದ ಕೊಡಗಿನ ಆಟಗಾರರನ್ನು ಒಂದೇ ವೇದಿಕೆಗೆ ಕರೆತರಬೇಕೆಂಬ ಕನಸು ಕಂಡಿದ್ದರು, ಅದು ಇಂದು ನನಸಾಗುತ್ತಿದೆ.
ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ, ವಿಶ್ವಕಪ್ ವಿಜೇತರಾದ ಕಾಳಯ್ಯ ಹಾಗೂ ಗೋವಿಂದ ಅವರು ವಿಶ್ವಕಪ್ ಗೆದ್ದು 50 ವರ್ಷ ತುಂಬಿದ ಸಡಗರದಲ್ಲಿದ್ದಾರೆ. ಇದೇ ಪ್ರಥಮ ಬಾರಿಗೆ ಹಾಕಿ ಪ್ರೇಮಿಗಳ ಸಮ್ಮುಖದಲ್ಲಿ ಇವರನ್ನು ಗೌರವಿಸಬೇಕು ಎಂಬ ತೀರ್ಮಾನವನ್ನು ಕೊಡವ ಹಾಕಿ ಅಕಾಡೆಮಿ ಹಾಗೂ ಮುದ್ದಂಡ ಕುಟುಂಬದವರು ತೆಗೆದುಕೊಂಡಿದ್ದಾರೆ ಎಂದು ರಶಿನ್ ಸುಬ್ಬಯ್ಯ ತಿಳಿಸಿದರು. 1980ರ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು 45 ವರ್ಷಗಳು ತುಂಬಿದ ಸಂಭ್ರಮದಲ್ಲಿರುವ ಪದ್ಮಶ್ರೀ ಪುರಸ್ಕೃತ ವಾಸುದೇವ ಭಾಸ್ಕರನ್ ಹಾಗೂ ಕೊಡಗಿನವರಾದ ಮನೆಯಪಂಡ ಸೋಮಯ್ಯ ಅವರನ್ನು ಕೂಡ ಸನ್ಮಾನಿಸಿ ಗೌರವಿಸಲಾಗುವುದು ಎಂದರು.

Post navigation

ಅಮಿತ್‌ ಶಾರಿಂದ ಗೌರವ ಸ್ವೀಕರಿಸಿದ  CRPF ಕಮಾಂಡರ್ ಕೊಡಗಿನ ಆದರ್ಶ್  ಶಾಸ್ತ್ರಿ
ಜನಿವಾರ ವಿವಾದ, ಕುಶಾಲನಗರದಲ್ಲಿ ಪ್ರತಿಭಟನೆ…

Related Posts

ಹೊಸ್ಕೇರಿ  ದೈವಿಕ ಜಲಪಾತ ಅಶುದ್ದಿ: ಕ್ರಮಕ್ಕೆ ಚೀಯಂಡಿರ ಕಿಶನ್ ಉತ್ತಪ್ಪ ಒತ್ತಾಯ…

ಹೊಸ್ಕೇರಿ ದೈವಿಕ ಜಲಪಾತ ಅಶುದ್ದಿ: ಕ್ರಮಕ್ಕೆ ಚೀಯಂಡಿರ ಕಿಶನ್ ಉತ್ತಪ್ಪ ಒತ್ತಾಯ…

13/04/202513/04/2025nadubadenews@gmail.com
 ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪ್ರಶಸ್ತಿಗೆ ಬೊಪ್ಪಂಡ  ದಿಯಾ ಭೀಮಯ್ಯ …

 ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪ್ರಶಸ್ತಿಗೆ ಬೊಪ್ಪಂಡ  ದಿಯಾ ಭೀಮಯ್ಯ …

05/08/202505/08/2025nadubadenews@gmail.com
ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ…

ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ…

07/06/202507/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us