https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮಡಿಕೇರಿ ನಗರದಲ್ಲಿ ನಿತ್ಯ ಕಸ ಸಂಗ್ರಹಕ್ಕೆ ನಿವಾಸಿಗಳ ಆಗ್ರಹ

ಮಡಿಕೇರಿ ನಗರದಲ್ಲಿ ನಿತ್ಯ ಕಸ ಸಂಗ್ರಹಕ್ಕೆ ನಿವಾಸಿಗಳ ಆಗ್ರಹ

News, Informatin , Enteetinement and Advertisement
11/07/202511/07/2025nadubadenews@gmail.comLeave a Comment on ಮಡಿಕೇರಿ ನಗರದಲ್ಲಿ ನಿತ್ಯ ಕಸ ಸಂಗ್ರಹಕ್ಕೆ ನಿವಾಸಿಗಳ ಆಗ್ರಹ
Spread the love
ಮಡಿಕೇರಿ ನಗರದಲ್ಲಿ ನಿತ್ಯ ಕಸ ಸಂಗ್ರಹಕ್ಕೆ ನಿವಾಸಿಗಳ ಆಗ್ರಹ

ಮಡಿಕೇರಿ,ಜು.11; (nadubadenews): ಮಡಿಕೇರಿಯಲ್ಲಿ  ನಗರಸಭೆ ವತಿಯಿಂದ ಪ್ರತಿ ಮನೆಗೆ ತೆರಳಿ ಕಸ  ಸಂಗ್ರಹಿಸುತ್ತಿದ್ದರು. ಆದರೆ ಇತ್ತೀಚೆಗೆ,  ಹಸಿ ಹಾಗೂ ಒಣ  ಕಸವನ್ನು ಪ್ರತ್ಯೇಕಿಸಿ ನೀಡುವಂತೆ  ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು. ಆದರೆ ಕಸವವನ್ನು ನಿತ್ಯ ಸ್ಗಹರಹಿಸದಿರುವ ಕಾರಣ ಮನೆಯಲ್ಲೇ ಕಸ ಸಂಗ್ರಹವಾಗುವ ಪರಿಣಾಮವಾಗಿ ಸಾರ್ವಜನಿಕರಲ್ಲಿ ಅಸಮಾಧಾನ ಉಂಟಾಗಿದ್ದು, ಕೆಲವರು ಕಸದ ಚೀಲಗಳನ್ನು ರಸ್ತೆಯಲ್ಲಿ  ಬಿಸಾಕುತ್ತಿದ್ದಾರೆ. ಇದು ಪರಿಸರ ಮಾಲಿನ್ಯ ಮತ್ತು ಸೊಳ್ಳೆಗಳ ಸಮಸ್ಯೆ ತರುವ ಸಾಧ್ಯತೆ ಹೆಚ್ಚಾಗಿದೆ.

ಹಸಿ ಕಸ, ಒಣ ಕಸ ಬೇರೆ ಬೇರೆ ಕೊಡುವ ನಿಯಮವನ್ನು ಅನುಸರಿಸಲು  ಸಾರ್ವಜನಿಕರಿಗೆ ಸಮ್ಮತಿ ಇದ್ದು. ಈ ವ್ಯವಸ್ಥೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು ಪ್ರತಿದಿನವೂ ಮನೆ ಮನೆಗೆ ತೆರಳಿ ಕಸ ಸಂಗ್ರಹ ಮಾಡುವಂತೆ ಸಾರ್ವಜನಿಕರು ಕೋರಿದ್ದಾರೆ. ವಾರಕ್ಕೆ ಕೇವಲ ಎರಡು ಬಾರಿ ಮಾತ್ರ ಕಸ ತೆಗೆದುಕೊಂಡರೆ, ಮನೆಗಳಲ್ಲಿ ಕಸ ಸಂಗ್ರಹವಾಗುತ್ತದೆ. ಇದರಿಂದ ನಾಗರಿಕರು  ರಸ್ತೆಯಲ್ಲಿ ಕಸ ಎಸೆಯುವ ಅನಿವಾರ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಕಸ ಸಂಗ್ರಹಿಸುವ ವಾಹನ ಪ್ರತಿನಿತ್ಯ ಕಸ ಸಂಗ್ರಹಿಸಲು ಅನುವು ಮಾಡಿ ಕೊಡುವಂತೆ ನಗರಸಭೆಯ ಆಡಳಿತವನ್ನು  ಮನವಿ ಮಾಡಿದ್ದಾರೆ.

Post navigation

ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಗುರುವಂದನ ಕಾರ್ಯಕ್ರಮ
ಯುವನಿಧಿ ಯೋಜನೆ; ಆ.07 ರವರೆಗೆ ವಿಶೇಷ ನೋಂದಣಿ ಅಭಿಯಾನ

Related Posts

ಬೂಕರ್‌ ವಿಜೇತೆ ದೀಪಾಭಾಸ್ತಿ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯೆ…

ಬೂಕರ್‌ ವಿಜೇತೆ ದೀಪಾಭಾಸ್ತಿ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯೆ…

11/06/202511/06/2025nadubadenews@gmail.com
ಮಡಿಕೇರಿ-ಸಂಪಾಜೆವರೆಗೆ, ತಡೆಗೋಡೆ ನಿರ್ಮಾಣಕ್ಕೆ 94ಕೋಟಿ ಕೇಂದ್ರದಿಂದ ಅನುಮೋದನೆ

ಮಡಿಕೇರಿ-ಸಂಪಾಜೆವರೆಗೆ, ತಡೆಗೋಡೆ ನಿರ್ಮಾಣಕ್ಕೆ 94ಕೋಟಿ ಕೇಂದ್ರದಿಂದ ಅನುಮೋದನೆ

16/03/202516/03/2025nadubadenews@gmail.com
ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗೆ ಸಂಘಟಿತ ಪ್ರಯತ್ನ ಅಗತ್ಯ, ಜನರೆಡೆಗೆ ಕನ್ನಡದ ಅಸ್ಮಿತೆಯನ್ನು ಪಸರಿಸಬೇಕಿದೆ :ಟಿ.ಜಿ.ಪ್ರೇಮಕುಮಾರ್…

ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗೆ ಸಂಘಟಿತ ಪ್ರಯತ್ನ ಅಗತ್ಯ, ಜನರೆಡೆಗೆ ಕನ್ನಡದ ಅಸ್ಮಿತೆಯನ್ನು ಪಸರಿಸಬೇಕಿದೆ :ಟಿ.ಜಿ.ಪ್ರೇಮಕುಮಾರ್…

06/05/202506/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us