ಮಡಿಕೇರಿ ಮೇ.14(Nadubade News): ಆರ್‍ಜಿಎಚ್‍ಸಿಎಲ್ ಬೆಂಗಳೂರು ಇವರ ಸೂಚನೆಯಂತೆ ಜಿಲ್ಲೆಯ ಮಡಿಕೇರಿ ನಗರಸಭೆ, ಕುಶಾಲನಗರ ಮತ್ತು ವಿರಾಜಪೇಟೆ ಪುರಸಭೆ ಹಾಗೂ ಸೋಮಾರಪೇಟೆ ಪಟ್ಟಣ ಪಂಚಾಯತಿಗಳಲ್ಲಿ 2021-22 ನೇ ಸಾಲಿನ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ನಗರ ಯೋಜನೆಯಡಿ (ಬಿಎಲ್‍ಸಿ) ಆಯ್ಕೆಯಾಗಿ ಇದುವರೆಗೂ ಮನೆ ನಿರ್ಮಾಣ ಕಾಮಗಾರಿ ಆರಂಭಿಸದೇ ಇರುವ ಫಲಾನುಭವಿಗಳು ಕಾಮಗಾರಿಯನ್ನು ಆರಂಭಿಸಿ ಜಿಯೋಟ್ಯಾಗ್ ಮಾಡಿಸಿಕೊಳ್ಳಲು ಮೇ 31 ರವರೆಗೆ ಅಂತಿಮ ಅವಕಾಶ ನೀಡಲಾಗಿದೆ. ಈ ಪಿಎಂಎವೈ(ಯು) ಯೋಜನೆಯಡಿ 2015-16 ರಿಂದ 2021-22 ನೇ ಸಾಲಿನವರೆಗೆ ಆಯ್ಕೆಯಾಗಿ ಇದುವರೆಗೂ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸದೇ ಇರುವ ಫಲಾನುಭವಿಗಳು ಜುಲೈ, 31 ರೊಳಗೆ ಕಾಮಗಾರಿ ಪೂರ್ಣಗೊಳಿಸಲು ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಸತಿ ಯೋಜನೆಯ ವಿಷಯ ನಿರ್ವಾಹಕರು ಮತ್ತು ಸಿಎಲ್‍ಟಿಸಿ ಸಿಬ್ಬಂಧಿಗಳನ್ನು ಸಂಪರ್ಕಿಸಬಹುದು ಎಂದು ಕೊಡಗು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ ಅವರು ತಿಳಿಸಿದ್ದಾರೆ.