https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

ಪೇರಿಯಂಡ ಪೆಮ್ಮಯ್ಯ ದೇವಕ್ಕಿ ಹೆಸರಿನ ದತ್ತಿ ನಿಧಿ ಸ್ಥಾಪನೆ

News, Informatin , Enteetinement and Advertisement
29/05/202529/05/2025nadubadenews@gmail.comLeave a Comment on ಪೇರಿಯಂಡ ಪೆಮ್ಮಯ್ಯ ದೇವಕ್ಕಿ ಹೆಸರಿನ ದತ್ತಿ ನಿಧಿ ಸ್ಥಾಪನೆ
Spread the love


ಮಡಿಕೇರಿ, ಮೇ.29: (nadubadenews): ಕೊಡಗು ಜಿಲ್ಲೆಯ ವಕೀಲರಾದ ಪೇರಿಯಂಡ ಪಿ ಪೆಮ್ಮಯ್ಯ ಮತ್ತು ಶ್ರೀಮತಿ ಜಿ.ಕೆ ದೇವಕಿ ಪೆಮ್ಮಯ್ಯ ರವರು ಕೊಡಗಿನ ಲೇಖಕರಿಗಾಗಿ ದತ್ತಿ ಪ್ರಶಸ್ತಿ ಸ್ಥಾಪಿಸಿರುತ್ತಾರೆ. ಕೊಡಗು ಜಿಲ್ಲೆಯ ಲೇಖಕರಿಗೆ ಮಾತ್ರ ಸೀಮಿತವಾಗಿರುವ ಈ ಪ್ರಶಸ್ತಿಗಾಗಿ ಇವರು ಒಂದು ಲಕ್ಷ ರೂಗಳ ದತ್ತಿಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮುಖಾಂತರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಠೇವಣಿ ಇಡುವ ಮೂಲಕ ಸ್ಥಾಪಿಸಿದ್ದಾರೆ.
ಕೊಡಗು ಜಿಲ್ಲೆಯ ಲೇಖಕರು ಪ್ರಕಟಿಸಿರುವ ಕಥೆ, ಕಾದಂಬರಿ, ಕಥಾ ಸಂಕಲನ, ಕವನ ಸಂಕಲನ, ವೈಚಾರಿಕ ಲೇಖನಮಾಲೆ, ಲೇಖನಗಳ ಗುಚ್ಚಗಳಲ್ಲಿ ಹಿಂದಿನ ಐದು ವರ್ಷಗಳ ಒಳಗಾಗಿ ಪ್ರಕಟಗೊಂಡಿರುವ ಉತ್ತಮ ಕೃತಿ ಆಯ್ಕೆ ಮಾಡಿ ಪ್ರಶಸ್ತಿ ನೀಡುವುದು ಈ ದತ್ತಿಯ ಉದ್ದೇಶ. ಕೊಡಗು ಜಿಲ್ಲೆಯ ಲೇಖಕರಿಗೆ ಮಾತ್ರ ಸೀಮಿತವಾಗಿರುವ ದತ್ತಿ ಪ್ರಶಸ್ತಿ ಇದಾಗಿದೆ. ಈಗಾಗಲೇ ಕೊಡಗು ಜಿಲ್ಲೆಯ ಲೇಖಕರುಗಳಿಗಾಗಿ ಮೂರು ಪ್ರಶಸ್ತಿಗಳು ಇದ್ದು ಇದು ನಾಲ್ಕನೇ ಪ್ರಶಸ್ತಿ ಆಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Post navigation

ಬೆಂಗಳೂರ್ ಸಮಾಜ ಚುನಾವಣೆ ಬೋಂಡ, ಮಾಸಭೆ ಕಾಕೋಕ್‌ ಕಾಗದ ಚಳುವಳಿ…
ಪ್ರವಾಸೋದ್ಯಮ  ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ…

Related Posts

ಕನ್ನಡ ಸಾಹಿತ್ಯ ಭವನ ಪೋಷಕರಾಗಲು ಎಲ್.ಎ.ಸಿ. ಹಾಗೂ  ಶಾಸಕ ಪೊನ್ನಣ್ಣರಿಗೆ ಮನವಿ

ಕನ್ನಡ ಸಾಹಿತ್ಯ ಭವನ ಪೋಷಕರಾಗಲು ಎಲ್.ಎ.ಸಿ. ಹಾಗೂ  ಶಾಸಕ ಪೊನ್ನಣ್ಣರಿಗೆ ಮನವಿ

07/08/202507/08/2025nadubadenews@gmail.com
ಕೊಡಗು ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ  ನಾಪಂಡ ರವಿಕಾಳಪ್ಪ ಅವರಿಗೆ ಅಭೀನಂದನೆಗಳು

ಕೊಡಗು ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ನಾಪಂಡ ರವಿಕಾಳಪ್ಪ ಅವರಿಗೆ ಅಭೀನಂದನೆಗಳು

20/06/202520/06/2025nadubadenews@gmail.com

   ಜಿಲ್ಲೆಯಲ್ಲಿ ಭಾರೀ ವಾಹನ  ಸಂಚಾರ ನಿರ್ಬಂಧ…

27/05/202527/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version