ವಿರಾಜಪೇಟೆ, ಜು.17;(nadubadenews): ಕೊಡಗಿನ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಾದ ತಲೆಕಾವೇರಿ ಮತ್ತು ಸೂರ್ಲಬ್ಬಿ ನಡುವೆ ಈ ಭಾರಿಯೂ ಹೆಚ್ಚು ಮಳೆಗಾಗಗಿ ಸ್ಪರ್ಧೆ ಏರ್ಪಟ್ಟಂತಿದೆ. ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಈ ಎರಡೂ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ತಲೆಕಾವೇರಿ ಈಗಾಗಲೆ 206.28 ಇಂಚು ದಾಖಲಾದರೆ, ಸೂರ್ಲಬ್ಬಿ 192.45 ಇಂಚುಗಳನ್ನು ತಲುಪಿದೆ.
2024ರ ಇದೇ ಸಮಯಕ್ಕೆ ತಲೆಕಾವೇರಿಯಲ್ಲಿ 141.77 ಎಂಚು, ಸೂರ್ಲಬ್ಬಿಗೆ175.23 ಇಂಚು ಮಳೆಯಾಗಿದ್ದು, ಈ ಭಾರಿ ತಲೆಕಾವೇರಿ 13.83 ಇಂಚುಗಳಿಂದ ಮುನ್ನಡೆಯಲಿದ್ದರೆ, ಕಳೆದ ವರ್ಷ ಸೂರ್ಲಬ್ಬಿ 33.46 ಇಂಚುಗಳಿಂದ ಮುನ್ನಡೆ ಕಾಯ್ದುಕೊಂಡಿತ್ತು. ಕಳೆದ 2024ರಲ್ಲಿ ಜನವರಿಯಿಂದ ಡಿಸೆಂಬರ್ ವರೆಗೆ ಸೂರ್ಲಬ್ಬಿಗೆ 263.700 ಇಂಚು ಮಳೆಯಾಗಿದ್ದರೆ, ತಲೆಕಾವೇರಿಯ ನಿಖರ ಮಾಹಿತಿ ಲಭ್ಯವಾಗಿಲ್ಲ. ಸಧ್ಯಕ್ಕೆ ಈ ತಲೆಕಾವೇರಿ ಮತ್ತು ಸೂರ್ಲಬ್ಬಿ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಾದರೂ ಕೊಡಗಿನಲ್ಲಿ ಇವೆರಡಕಿಂತಲೂ ಹೆಚ್ಚು ಮಳೆಯಾಗುವ
ಪಷ್ಚಿಮ ಘಟ್ಟ ಸಾಲಿನ ಪುಷ್ಪಗಿರಿ ಮತ್ತು ಬ್ರಹ್ಮಗಿರಿ ಅರಣ್ಯ ಪ್ರದೇಶಕ್ಕೆ ಒಳಪಡುವ ಈ ಎರಡೂ ಪ್ರದೇಶಗಳು, ಮಳೆಯಲ್ಲಿ ಮುಂಚೂಣಿಯಲ್ಲಿದ್ದರೂ, ಅಭಿವೃದ್ದಿಯಲ್ಲಿ ಹಿಂದುಳಿದ ಪ್ರದೇಶಗಳಾಗಿಯೇ ಇವೆ.
ಪುಷ್ಪಗಿರಿ ಮತ್ತು ಬ್ರಹ್ಮಗಿರಿ ಅರಣ್ಯ ಮತ್ತು ಘಟ್ಟ ಪ್ರದೇಶಗಳಲ್ಲಿ ಬೀಳುವ ಮಳೆಯಿಂದಾಗಿಹೆ ದಕ್ಷಿಣ ಕರ್ನಾಟಕ ಅರಲ್ಲೂ ರಾಜ್ಯಧಾನಿ ಬೆಂಗಳೂರು ಸೇರಿದಂತೆ ಬಹುಪಾಲು ಜಿಲ್ಲೆಗಳು ತಮ್ಮ ಜನ ಜಾನು ವಾರು, ಹೊಲ ಬೆಳೆಗಳನ್ನು ಬೆಳೆದು, ಕುಡಿದು ಹಸನಾದರೂ, ಈ ಭಾಗಕ್ಕೆ ಬರುವ ಅನುದಾನ ಸೌಲಭ್ಯಗಳು ಮಾತ್ರ ಬಿಡಿಗಾಸಿನ ಲೆಕ್ಕವೇ. ಈ ಪ್ರದೇಶದಲ್ಲಿನ ಅತಿ ಹೆಚ್ಚು ಕಾಡು ಪ್ರಾಣಿಗಳು ಮತ್ತು ಮಳೆಯಿಂದಾಗುವ ನಷ್ಟದ ಹೊರತಾಗಿಯೂ ಇಲ್ಲಿನ ರೈತಾಪಿ ವರ್ಗ ತಮ್ಮ ಕೃಷಿಯೊಂದಿಗೆ ಸಮಗ್ರ ಅರಣ್ಯವನ್ನೂ ಕಾಯ್ದುಕೊಂಡು, ಪ್ರಕೃತಿಯೊಂದಿಗೆ ಬದುಕುತಿದ್ದಾರೆ, ನೇರ ಇರುವವರಿಗೇ ಪೆಟ್ಟು ಮೊದಲು ಎನ್ನುವಂತೆ ಸರ್ಕಾರದ ಆಡಳಿತ ವ್ಯವಸ್ಥೆ ನಾನಾ ತರದಲ್ಲಿ ಈ ಭಾಗದ ಮತ್ತು ರೈತರ ಮೇಲೆ ನಿರಂತರ ಧಾಳಿ ನಡೆಸುತ್ತಲೇ ಬರುತ್ತಿದೆ. ಅಮಾಯಕ ಜನತೆ ಮಾತ್ರ ಚಾತಕ ಪಕ್ಷಿಗಳನ್ನೇ ಬದಲಾವಣೆಯೊಂದಿಗಿನ ಅಭಿವೃದ್ದಿಯ ನಿರೀಕ್ಷೆಯಲ್ಲೇ ದಿನ ಕಳೆಯುತಿದ್ದಾರೆ.