https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
   ಖಿನ್ನತೆಗೊಳಗಾದ  ವ್ಯಕ್ತಿ ನೇಣು ಬಿಗಿದು ಆತ್ಮ ಹತ್ಯೆಗೆ ಶರಣು

   ಖಿನ್ನತೆಗೊಳಗಾದ  ವ್ಯಕ್ತಿ ನೇಣು ಬಿಗಿದು ಆತ್ಮ ಹತ್ಯೆಗೆ ಶರಣು

Uncategorized
25/10/202425/10/2024nadubadenews@gmail.comLeave a Comment on    ಖಿನ್ನತೆಗೊಳಗಾದ  ವ್ಯಕ್ತಿ ನೇಣು ಬಿಗಿದು ಆತ್ಮ ಹತ್ಯೆಗೆ ಶರಣು
Spread the love
   ಖಿನ್ನತೆಗೊಳಗಾದ  ವ್ಯಕ್ತಿ ನೇಣು ಬಿಗಿದು ಆತ್ಮ ಹತ್ಯೆಗೆ ಶರಣು

Nadubadenews, ವಿರಾಜಪೇಟೆ:ಸ.25 : (ವರದಿ: ಕಿಶೋರ್ ಶೆಟ್ಟಿ) : ಮಾನಸಿಕ ಕಾಯಿಲೆ, ಕುಟುಂಬದಲ್ಲಿ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನು ನೇಣಿಗೆ ಶರಣಾದ ಘಟನೆ ವಿರಾಜಪೇಟೆ ಕೆ. ಬೋಯಿಕೇರಿ ಗ್ರಾಮದಲ್ಲಿ ನಡೆದಿದೆ.

ವಿರಾಜಪೇಟೆ ತಾಲ್ಲೂಕು ಕದನೂರು ಗ್ರಾಮ ಪಂಚಾಯತಿ  ಕೆ. ಬೋಯಿಕೇರಿ,ಗ್ರಾಮದ ನಿವಾಸಿ ದಿವಂಗತ ಸಿದ್ಧಯ್ಯ ಅವರ ಪುತ್ರ ಸುಕ್ರು ದೇವಯ್ಯ ಪ್ರಾಯ ೫೫ ವರ್ಷ ನೇಣಿಗೆ ಶರಣಾದ ವ್ಯಕ್ತಿ.

ಮೃತ ಸುಕ್ರು ದೇವಯ್ಯ ಅಡುಗೆ ಭಟ್ಟರಾಗಿದ್ದು ಸಾಂದರ್ಭಿಕವಾಗಿ ಕೂಲಿ ಕೆಲಸಕ್ಕೆ ತೆರಳುತಿದ್ದರು. ಪತ್ನಿ ಸುನೀತಾ ಕೂಲಿ ಕಾರ್ಮಿಕರಾಗಿದ್ದಾರೆ. ಓರ್ವ ಮಗಳನ್ನು ಹೊಂದಿದ್ದು ಮಗಳು ವಿವಾಹವಾಗಿದ್ದಾರೆ. ಇಂದು ಮೃತರ ಪತ್ನಿ ಸುನೀತಾ ಎಂದಿನಂತೆ ನಗರದ ಹೊರಭಾಗದಲ್ಲಿ ಕೂಲಿ ಕೆಲಸಕ್ಕೆ ಎಂದು ತೆರಳಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಕೋಣೆಯೋಂದರಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸಕ್ಕೆ ಎಂದು ತೆರಳಿದ ಪತ್ನಿ ಸುನೀತಾ ಮನೆಗೆ ಹಿಂದುರುಗಿದ್ದಾರೆ. ಮನೆಯ ಕೋಣೆಯಲ್ಲಿ ಪತಿ ನೇಣು ಬಿಗಿದ ಸ್ಥಿತಿಯಲ್ಲಿ ಗೋಚರಿಸಿದ್ದಾರೆ.  ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪತ್ನಿ ಸುನೀತಾ ಅವರು ನೀಡಿದ ದೂರಿನ ಮೇರೆಗೆ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Post navigation

ಏಷ್ಯನ್‌ ಪಂಜಕುಸ್ತಿಯಲ್ಲಿ ದೇಶಕ್ಕೆ ಕಂಚು ತಂದ, ಕೊಡಗಿನ ಹಸನ್‌
ಧಾರವಾಹಿ, ನಾಳ್-3: ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌…..

Related Posts

ವಿರಾಜಪೇಟೆ ನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಪೂಜಾ ಮಹೋತ್ಸವ

ವಿರಾಜಪೇಟೆ ನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಪೂಜಾ ಮಹೋತ್ಸವ

29/12/202429/12/2024nadubadenews@gmail.com
ಉಲಗ ದಾಖಲೆರ ಅಯ್ಯನೆರವಂಡ ಪ್ರಿತುನ್‌ ಪೂವಣ್ಣಂಗ್ ಪಂಚಾಯತಿ ತೊಮ್ಮಾನ…

ಉಲಗ ದಾಖಲೆರ ಅಯ್ಯನೆರವಂಡ ಪ್ರಿತುನ್‌ ಪೂವಣ್ಣಂಗ್ ಪಂಚಾಯತಿ ತೊಮ್ಮಾನ…

26/09/202426/09/2024nadubadenews@gmail.com
ಕೃಷಿ ಭಾಗ್ಯ ಯೋಜನೆಯಡಿ, ಕ್ಷೇತ್ರ ಬದು, ಕೃಷಿ ಹೊಂಡ, ತಂತಿ ಬೇಲಿ, ಪಾಲಿಥೀನ್‌ ಹೊದಿಕೆ, ಪಂಪ್‌ ಸೆಟ್‌, ತುಂತುರು ನೀರಾವರಿ ಯೋಜನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

ಕೃಷಿ ಭಾಗ್ಯ ಯೋಜನೆಯಡಿ, ಕ್ಷೇತ್ರ ಬದು, ಕೃಷಿ ಹೊಂಡ, ತಂತಿ ಬೇಲಿ, ಪಾಲಿಥೀನ್‌ ಹೊದಿಕೆ, ಪಂಪ್‌ ಸೆಟ್‌, ತುಂತುರು ನೀರಾವರಿ ಯೋಜನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

03/10/202403/10/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us