https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕೊಡವಾಮೆಯ ಬೇರು ಗಟ್ಟಿಗೊಳಿಸುವಲ್ಲಿ, ಏಳ್‌ನಾಡ್‌ ಕೊಡವರು  ಜವಾಬ್ದಾರಿ ತೋರಬೇಕಿದೆ: ಚಾಮೆರ ದಿನೇಶ್‌ಬೆಳ್ಯಪ್ಪ

ಕೊಡವಾಮೆಯ ಬೇರು ಗಟ್ಟಿಗೊಳಿಸುವಲ್ಲಿ, ಏಳ್‌ನಾಡ್‌ ಕೊಡವರು  ಜವಾಬ್ದಾರಿ ತೋರಬೇಕಿದೆ: ಚಾಮೆರ ದಿನೇಶ್‌ಬೆಳ್ಯಪ್ಪ

Uncategorized
04/01/202504/01/2025nadubadenews@gmail.comLeave a Comment on ಕೊಡವಾಮೆಯ ಬೇರು ಗಟ್ಟಿಗೊಳಿಸುವಲ್ಲಿ, ಏಳ್‌ನಾಡ್‌ ಕೊಡವರು  ಜವಾಬ್ದಾರಿ ತೋರಬೇಕಿದೆ: ಚಾಮೆರ ದಿನೇಶ್‌ಬೆಳ್ಯಪ್ಪ
Spread the love
ಕೊಡವಾಮೆಯ ಬೇರು ಗಟ್ಟಿಗೊಳಿಸುವಲ್ಲಿ, ಏಳ್‌ನಾಡ್‌ ಕೊಡವರು  ಜವಾಬ್ದಾರಿ ತೋರಬೇಕಿದೆ: ಚಾಮೆರ ದಿನೇಶ್‌ಬೆಳ್ಯಪ್ಪ

ಮಕ್ಕಂದೂರು,ಜ.04:  ಕೊಡಗಿನ ಆದಿ ಮೂಲ ನಿವಾಸಿ  ಜನಾಂಗವಾಗಿರುವ ಕೊಡವರು, ಇಂದು ತಮ್ಮ ಅಸ್ತಿತ್ವಕ್ಕಾಗಿ ತಮ್ಮ ತಾಯಿನೆಲದಲ್ಲಿಯೇ ಹೋರಾಡಬೇಕಾದ ಅನಿವಾರ್ಯತೆ ಶೃಷ್ಟಿಯಾಗಿದೆ. ತಮ್ಮತನವನ್ನು ಕಾಯ್ದುಕೊಳ್ಳಲು, ಕೊಡವಾಮೆಯ ಬೇರನ್ನು ಗಟ್ಟಿಗೊಳಿಸುವಲ್ಲಿ ಏಳ್‌ನಾಡ್‌ ಕೊಡವರ ಜವಾಬ್ದಾರಿ ಅಧಿಕವಾಗಿದ್ದು, ಈ ನಿಟ್ಟಿನಲ್ಲಿ ಈ ಭಾಗಕ್ಕೆ ಅಡಗಿರುವ ನಾಲಕ್ಕು ಕೊಡವ ಸಮಾಜಗಳು ಒಮ್ಮತದ ಯೋಜನೆ ತಯಾರಿಸಬೇಕಿದೆ ಎಂದು ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷರು, ನಡುಬಾಡೆ ಸಂಪಾದಕರೂ ಆಗಿರುವ ಚಾಮೆರ ದಿನೇಶ್‌ ಬೆಳ್ಯಪ್ಪ ಅಭೀಪ್ರಾಯಿಸಿದರು.

          ಮಕ್ಕಂದೂರು ಕೊಡವ ಸಮಾಜದ ಆಶ್ರಯದಲ್ಲಿ ನಡೆದ ಉಮ್ಮೇಟಿ ಕೋಲ್‌ ಮಂದ್‌ ಮತ್ತು ಪುತ್ತರಿ ಊರೋರ್ಮೆ ಕಾರ್ಯಕ್ರಮವನ್ನು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಚಾಲನೆ ನೀಡಿ, ನಂತರ ನಡೆದ ಸಭಾಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು,  ಏಳ್‌ನಾಡ್‌ ಎಂದರೆ ಕೊಡವಾಮೆಯ ಗೂಡು ಎನ್ನುವ ನಂಬಿಕೆ ಇದೆ. ಆದರೆ ಅದು ಇಂದಿನ ಕಾಲದಲ್ಲಿ ಎಷ್ಟರ ಮಟ್ಟಿಗೆ ಆ ಗೂಡನ್ನ ನಾವು ಉಳಿಸಿಕೊಂಡಿದ್ದೇವೆ ಎನ್ನುವುದನ್ನ ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಸಮಯ ಬಂದಿದೆ ಎಂದರು. ಕೊಡಗಿನ ಮೂರು ಪ್ರಮುಖ ಭಾಗಗಳಾದ ಕ್‌ಗ್ಗಟ್ಟ್, ಮೇಂದಲೆ, ಮತ್ತು ಏಳ್‌ನಾಡ್‌ ಭಾಗಗಳನ್ನು ತುಲನೆ ಮಾಡಿದರೆ, ಪದ್ದತಿ ಪರಂಪರೆ, ಆಟ್‌ ಪಾಟ್‌ಗಳಲ್ಲಿ ಏಳ್‌ನಾಡ್‌ ಮುಂಚೂಣಿಯಲ್ಲಿ ಇದೆ. ಆದರೆ ಕೊಡವಾಮೆಗೆ ಸಂಭಂದಿಸಿದ ಹೋರಾಟದ ವಿಚಾರಕ್ಕೆ ಬಂದಾಗ ನಾವು ಸಾಕಷ್ಟು ಹಿಂದೆ ಇದ್ದೇವೆ. ಮೇಂದಲೆ ಮತ್ತು ಕ್‌ಗ್ಗಟ್ಟ್‌ ನಾಡಿನೊಂದಿಗೆ ನಾವೂ ಈ  ವಿಚಾರದಲ್ಲಿ ಒಗ್ಗಟ್ಟಿನಿಂದ ಕೈ ಜೋಡಿಸಿದರೆ ಕೊಡವಾಮೆಯ ಬೆಳವಣಿಗೆಗೆ ಮತ್ತಷ್ಟು ಪ್ರಖರತೆ ದೊರೆಯಲಿದೆ ಎಂದರು. ಆಟ್‌ ಪಾಟ್‌, ಪದ್ದತಿ ವಿಚಾರದಲ್ಲೂ ಏಳ್‌ನಾಡ್‌ ತನ್ನ ಘತ ವೈಭವವನ್ನು ಕಳೆದುಕೊಳ್ಳುತ್ತಿದ್ದು, ಕಲೆ ಸಂಸ್ಕೃತಿಯ ಜೊತೆಗೆ ಕೊಡವಾಮೆಯ ಉಳಿವಿಗೂ ನಾವು ಕೈಜೋಡಿಸಬೇಕಿದೆ ಎಂದರು. 

          ಕೊಡಗಿನ ಇತಿಹಾಸಕ್ಕೆ ಏಳ್‌ನಾಡಿನ ಕೊಡುಗೆ ಮಹತ್ತರವಾಗಿದ್ದು, ಇತಿಹಾಸದ ಪುಟಗಳಲ್ಲಿ ಗೋಛರವಾಗುವುದು ತೀರಾಕಡಿಮೆ. ನಮ್ಮ ನಾಡಿನ ಬಗ್ಗೆ ನಮಗಿರುವ ಅಭಿಮಾನದ ಕೊರತೆಯೇ ಇದಕ್ಕೆ ಮೂಲ ಕಾರಣವಾಗಿದ್ದು, ಈ ಅಭಿಮಾನವನ್ನು ಬೆಳೆಸುವತ್ತ ನಾವುಗಳು ಮುಂದಡಿ ಇಡಬೇಕು ಎಂದರು.

          ಕೊಡವಾಮೆಯ ಭೀರ್ಯ ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ಇಂದಿನಿಂದಲೇ ಮಕ್ಕಳನ್ನು ಕೊಡವ ಪರಂಪರೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆಯಬೇಕು. ಈ ಜವಾಬ್ದಾರಿ ತಾಯಂದಿರ ಮೇಲೆ ಹೆಚ್ಚಿದ್ದು, ಕೇವಲ ಶಾಲೆ ಮತ್ತು ಅಂಕ ಪಡೆಯುವತ್ತಲೇ ಗಮನ ಕೇಂದ್ರೀಕರಿಸದೆ, ನಮ್ಮ ಮೂಲತನದ ಉಳಿವಿಗೆ ಸಂಸ್ಖೃತಿಯ ಅರಿವು ಮೂಡಿಸುವುದೂ ಅನಿವಾರ್ಯವಿದೆ ಎಂದರು.

          ಈ ನಿಟ್ಟಿನಲ್ಲಿ ಏಳ್‌ನಾಡ್‌ ಭಾಗದ ಪ್ರಮುಖ ಸಮಾಜಗಳಾದ ಮಡಿಕೇರಿ, ಮಕ್ಕಂದೂರು, ಮಾದಾಪುರ, ಗರ್ವಾಲೆ ಕೊಡವ ಸಮಾಜಗಳು ಒಮ್ಮತದ ಯೋಜನೆಯನ್ನು ತಯಾರಿಸುವ ಮೂಲಕ, ಮುಂದಿನ ದಿನಗಳಲ್ಲಿ, ಕ್‌ಗ್ಗಟ್ಟ್‌ ಮತ್ತು ಮೇಂದಲೆ ನಾಡ್‌ಗಳೊಂದಿಗೆ ಕೈ ಜೋಡಿಸಿದರೆ, ಕೊಡವರ ಒಗ್ಗಟ್ಟಿಗೆ ಮತ್ತಷ್ಟು ಬಲ ಬರಲಿದೆ ಈ ನಿಟ್ಟಿನಲ್ಲಿ ಚಿಂತಿಸುವಂತಾಗಲಿ ಎಂದರು.

          ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿದ, ಮಕ್ಕಂದೂರು ಕೊಡವ ಸಮಾಜ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ ಅವರು ಮಾತನಾಡಿ, ಜನಾಂಗದ ಏಳಿಗೆಗೆ ಮಕ್ಕಂದೂರು ಕೊಡವ ಸಮಾಜ ಎಂದಿಗೂ ಮುಂದೆ ನಿಂತಿದ್ದು, ಮುಂದೆಯೂ ಯಾವುದೇ ಸಂದರ್ಭದಲ್ಲಿಯೂ ನಾವು ಜನಾಂಗದ ಜೊತೆ ನಿಲ್ಲಲಿದ್ದೇವೆ ಎಂದರು. ಮುಂದಿನ ದಿನಗಳಲ್ಲಿ ಯುವಕರನ್ನು ಕೊಡವಾಮೆಯತ್ತ ಸೆಳೆಯಲು ಹಲವು ಯೋಜನೆಗಳನ್ನು ಸಿದ್ದಪಡಿಸುವ ಚಿಂತನೆ ಇದ್ದು, ಈ ನಿಟ್ಟಿನಲ್ಲಿ ಕೊಡವ ಸಮಾಜದ ಮಹಿಳಾಘಟಕ ಮತ್ತು ಯುವಘಟಕ ಶ್ರಮಿಸುತ್ತಿದೆ. ಸರ್ವರೂ ಸಹಕರಿಸಿದರೆ ಕೆಲವೇ ವರ್ಷಗಳಲ್ಲಿ ಪ್ರಬುದ್ದ ಕೊಡವಾಭಿಮಾನದ ಸಮಾಜವಾಗಿ ರೂಪಿಸಲು ಪಣತೊಡುವುದಾಗಿ ಭರವಸೆಯಿತ್ತರು.

          ವೇದಿಕೆಯಲ್ಲಿ ಮಕ್ಕ್ನಾಡ್‌ ತಕ್ಕರಾದ ಸಬ್ಬುಡ ದಿನೇಶ್‌, ಪಾಲೇರಿ ನಾಡ್‌ ತಕ್ಕರಾದ  ಐಮುಡಿಯಂಡ ದೇವಯ್ಯ, ಬದಿಗೇರಿ ನಾಡ್‌ತಕ್ಕರಾದ ಶಾಂತೆಯಂಡ ರಾಜೇಶ್‌ ಕಾವೇರಪ್ಪ, ಮಕ್ಕಂದೂರು ಕೊಡವ ಸಮಾಜ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು,  ಮಹಿಳಾಘಟಕ, ಯುವ ಘಟಕದ ಪಧಾದಿಕಾರಿಗಳು ಮತ್ತು ಸದಸ್ಯರು, ಸಮಾಜ ವ್ಯಾಪ್ತಿಯ  ಕೊಡವಾಭಿಮಾನಿಗಳು ಹಾಜರಿದ್ದರು. ಸಮಾಜ ಕಾರ್ದರ್ಶಿ ಮುಲುವೆರ ಬಿದ್ದಪ್ಪ ಕಾರ್ಯಕ್ರಮ ನಿರ್ವಹಿಸಿದರು.

          ಕಾರ್ಯಕ್ರಮದ ಮೊದಲಿಗೆ ಶ್ರೀ ಭದ್ರಕಾಳೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಉಮ್ಮೇಟಿ ಮಂದ್‌ನಲ್ಲಿ ಕೋಲಾಟ ಆಡುವ ಮೂಲಕ ಸಂಭ್ರಮಿಸಲಾಯಿತು. ನೆರೆದಿದ್ದ ಸವರ್ವರಿಗೂ ಸಮಾಜದ ವತಿಯಿಂದ ಊಟೋಪಚಾರ ಆಯೋಜಿಸಲಾಗಿತ್ತು.

Post navigation

ಕಾಫಿ ಕ್ರಾಪ್‌ ಕೇರ್‌ ಮೊಬೈಲ್‌ ಅಪ್ಲಿಕೇಶನ್‌ ಹೊರ ತಂದ CIT ಪೊನ್ನಂಪೇಟೆ
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್‌ ನಾಳ್‌….

Related Posts

ಅತೀ ಸಣ್ಣ ಜನಾಂಗಗಳ ಏಳಿಗೆಗೆ ಶ್ರಮಿಸುವುದು ನಮ್ಮ ಹೊಣೆ: ಅರಮನೆ ಪಾಲೆ ಜನಾಂಗದ ಕ್ರೀಡಾಕೂಟದಲ್ಲಿ ಶಾಸಕ ಮಂಥರ್‌ಗೌಡ

ಅತೀ ಸಣ್ಣ ಜನಾಂಗಗಳ ಏಳಿಗೆಗೆ ಶ್ರಮಿಸುವುದು ನಮ್ಮ ಹೊಣೆ: ಅರಮನೆ ಪಾಲೆ ಜನಾಂಗದ ಕ್ರೀಡಾಕೂಟದಲ್ಲಿ ಶಾಸಕ ಮಂಥರ್‌ಗೌಡ

08/12/202408/12/2024nadubadenews@gmail.com
ಬೆಳಿಗ್ಗೆ ನೀನಿರದೇ ಇದ್ದಿದ್ದರೆ ನಾನೀಗ ಹೋಗಿ ಬಿಡುತಿದ್ದೆ ಎಂದು ಹಾಸ್ಯಮಾಡಿದ್ದ ಅಪ್ಪ, ಸಂಜೆಯ ಸಮಯಕ್ಕೆ ಹೋಗಿಯೇ ಬಿಟ್ಟರು.

ಬೆಳಿಗ್ಗೆ ನೀನಿರದೇ ಇದ್ದಿದ್ದರೆ ನಾನೀಗ ಹೋಗಿ ಬಿಡುತಿದ್ದೆ ಎಂದು ಹಾಸ್ಯಮಾಡಿದ್ದ ಅಪ್ಪ, ಸಂಜೆಯ ಸಮಯಕ್ಕೆ ಹೋಗಿಯೇ ಬಿಟ್ಟರು.

25/11/202425/11/2025nadubadenews@gmail.com
ಭಾರತತದಲ್ಲಿ ಚೀನಾದ ನಿಶೇದಿತ  ಬೆಳ್ಳುಳ್ಳಿ, ಪತ್ತೆ ಹಚ್ಚೋದು ಹೇಗೆ…?

ಭಾರತತದಲ್ಲಿ ಚೀನಾದ ನಿಶೇದಿತ  ಬೆಳ್ಳುಳ್ಳಿ, ಪತ್ತೆ ಹಚ್ಚೋದು ಹೇಗೆ…?

30/09/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us