https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕೊಡಗಿನ BSNL ಸಮಸ್ಯೆಯನ್ನು ದೆಹಲಿಗೆ ಹೊತ್ತೊಯ್ದ ಸಂಸದ ಯಧುವೀರ್‌ ಒಡೆಯರ್

ಕೊಡಗಿನ BSNL ಸಮಸ್ಯೆಯನ್ನು ದೆಹಲಿಗೆ ಹೊತ್ತೊಯ್ದ ಸಂಸದ ಯಧುವೀರ್‌ ಒಡೆಯರ್

News, Informatin , Enteetinement and Advertisement
18/06/202518/06/2025nadubadenews@gmail.comLeave a Comment on ಕೊಡಗಿನ BSNL ಸಮಸ್ಯೆಯನ್ನು ದೆಹಲಿಗೆ ಹೊತ್ತೊಯ್ದ ಸಂಸದ ಯಧುವೀರ್‌ ಒಡೆಯರ್
Spread the love
ಕೊಡಗಿನ BSNL ಸಮಸ್ಯೆಯನ್ನು ದೆಹಲಿಗೆ ಹೊತ್ತೊಯ್ದ ಸಂಸದ ಯಧುವೀರ್‌ ಒಡೆಯರ್

ದೆಹಲಿ, ಜೂ.18: (nadubadenews): ಕೊಡಗಿನಲ್ಲಿ ಹೆಚ್ಚಾಗಿರುವ ಬಿಎಸ್‌ಎನ್‌ಎಲ್‌ ಸಂಪರ್ಕ ಜಾಲ ವ್ಯವಸ್ಥೆಯನ್ನು ಸರಿಪಡಿಸಬೇಕು. ಈ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಯದುವೀರ್‌, ಕೊಡಗಿನಲ್ಲಿ ಈಗ ಅತ್ಯಂತ ತುರ್ತಾಗಿ ಈ ಸಮಸ್ಯೆ ಪರಿಹರಿಸಬೇಕು ಎಂದು ಮಾಡಿದರು. ಕೊಡಗಿನಲ್ಲಿ ಇತ್ತೀಚೆಗೆ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದ ವಿದ್ಯುತ್‌ ಕಂಬಗಳು, ಟೆಲಿಫೋನ್‌ ಕಂಬಗಳು ನೆಲಕ್ಕುರುಳಿವೆ. ಅವುಗಳ ದುರಸ್ತಿಗೂ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದು, ಕೊಡಗಿನಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸೇವೆ ಅತ್ಯಂತ ಕಳಪೆಯಾಗಿದೆ. ಇಲ್ಲಿ ಟವರ್‌ಗಳನ್ನು ಬದಲಿಸಬೇಕು, ಉತ್ತಮ ಕನೆಕ್ಟೆವಿಟಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಈ ಬಗ್ಗೆಯೂ ಸಚಿವರ ಗಮನಕ್ಕೆ ತರಲಾಗಿದೆ ಎಂದು ಸಂಸದರು ವಿವರಿಸಿದ್ದಾರೆ.

ಕೊಡಗಿನಲ್ಲಿ ನನ್ನ ಗಮನಕ್ಕೆ ಬಂದಿರುವ ಪ್ರಮುಖ ವಿಷಯ ಎಂದರೆ ಪವರ್‌ ಬ್ಯಾಕ್‌ ಅಪ್‌. ಬ್ಯಾಕ್‌ ಅಪ್‌ ಬ್ಯಾಟರಿಗಳು ಸಂಪೂರ್ಣ ನಿಷ್ಕ್ರಿಯವಾದರೆ, ಅವುಗಳನ್ನು ಮತ್ತೆ ಸರಿಪಡಿಸಲು ಸಾಕಷ್ಟು ಸಮಯ ಮತ್ತು ಪ್ರಯಾಸದ ಕೆಲಸವಾಗಿದೆ. ಕಳೆದ ಮಾರ್ಚ್‌ 8ರಂದು ದಿಶಾ ಸಭೆ ನಡೆಸಿದ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿ ಎಲ್ಲವನ್ನೂ ಸರಿಪಡಿಸಲು ತಿಳಿಸಿದ್ದೆ. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಯದುವೀರ್‌ ವಿವರಿಸಿದ್ದಾರೆ.

ಕೊಡಗಿನಲ್ಲಿರುವ ಈ ಸಮಸ್ಯೆಯನ್ನು ಅತ್ಯಂತ ತ್ವರಿತವಾಗಿ ಪರಿಹರಿಸಲು ಸಚಿವರು ಕೂಡ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಆದಷ್ಟು ಬೇಗ ಇದರ ಬಗ್ಗೆ ಗಮನ ಹರಿಸುವ ಭರವಸೆ ನೀಡಿದ್ದಾರೆ ಎಂದು ಸಂಸದ ಯದುವೀರ್‌ ಒಡೆಯರ್‌ ಮಾಹಿತಿ ನೀಡಿದ್ದಾರೆ.

Post navigation

ಅಲ್ಪ ಸಂಖ್ಯಾತರ ಅಭಿವೃದ್ದಿ, ಎ.ಎಸ್.‌ ಪೊನ್ನಣ್ಣ ಮನವಿಗೆ, ಸಚಿವ ಜಮೀರ್‌ ಸ್ಪಂದನೆ
ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮರು ಆದೇಶ ಸ್ವೀಕರಿಸಿದ ನಾಪಂಡ ರವಿ ಕಾಳಪ್ಪ

Related Posts

ಕನ್ನಡ ಸಾರಸ್ಪತ ಲೋಕ ಒಂದು ಅದ್ಭುತ ಚೇತನವನ್ನು ಕಳೆದುಕೊಂಡಿದೆ-  ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂತಾಪ…  

ಕನ್ನಡ ಸಾರಸ್ಪತ ಲೋಕ ಒಂದು ಅದ್ಭುತ ಚೇತನವನ್ನು ಕಳೆದುಕೊಂಡಿದೆ-  ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂತಾಪ…  

07/05/202507/05/2025nadubadenews@gmail.com
ಐನ್‌ಮನೆಗಳಿಗೆ ಪ್ಯಾಕೇಜ್‌ ಕೊಡಬಹುದಿತ್ತು : ಭಾರತೀಶ್

ಐನ್‌ಮನೆಗಳಿಗೆ ಪ್ಯಾಕೇಜ್‌ ಕೊಡಬಹುದಿತ್ತು : ಭಾರತೀಶ್

06/03/202606/03/2026nadubadenews@gmail.com
ಮತ್ಯಾಂದ್‌ ನಾರಾಚೆ, ಸರ್ಕಾರಕ್‌, ಬೆಂಗಳೂರ್‌ ಸಮಾಜತ್‌ ತೊಮ್ಮಾನ…

ಮತ್ಯಾಂದ್‌ ನಾರಾಚೆ, ಸರ್ಕಾರಕ್‌, ಬೆಂಗಳೂರ್‌ ಸಮಾಜತ್‌ ತೊಮ್ಮಾನ…

13/06/202513/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us