https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕಾರ್ಮಿಕ ಸೋಗಿನ ನುಸುಳುಕೋರರ ಬಗ್ಗೆ ಎಚ್ಚರ ವಹಿಸಿ, ಎಸ್.ಪಿ ರಾಮರಾಜನ್ ಸೂಚನೆ…

ಕಾರ್ಮಿಕ ಸೋಗಿನ ನುಸುಳುಕೋರರ ಬಗ್ಗೆ ಎಚ್ಚರ ವಹಿಸಿ, ಎಸ್.ಪಿ ರಾಮರಾಜನ್ ಸೂಚನೆ…

News, Informatin , Enteetinement and Advertisement
03/07/202503/07/2025nadubadenews@gmail.comLeave a Comment on ಕಾರ್ಮಿಕ ಸೋಗಿನ ನುಸುಳುಕೋರರ ಬಗ್ಗೆ ಎಚ್ಚರ ವಹಿಸಿ, ಎಸ್.ಪಿ ರಾಮರಾಜನ್ ಸೂಚನೆ…
Spread the love
ಕಾರ್ಮಿಕ ಸೋಗಿನ ನುಸುಳುಕೋರರ ಬಗ್ಗೆ ಎಚ್ಚರ ವಹಿಸಿ, ಎಸ್.ಪಿ ರಾಮರಾಜನ್ ಸೂಚನೆ…

ಮಡಿಕೇರಿ ಜು03 (Nadubade News): ಕಳೆದ ಹಲವು ತಿಂಗಳಿನಿಂದ ಕೊಡಗು (Kodagu) ಜಿಲ್ಲೆಗೆ ಆಗಮಿಸುತ್ತಿರುವ ಅಸ್ಸಾಂ ಮೂಲದ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು, ಈ ಪೈಕಿ ಕೆಲವು ಬಾಂಗ್ಲಾ ನುಸುಳುಕೋರರು (Bangladeshi Infiltrators) ಇದ್ದಾರೆ ಅನ್ನೋ ಶಂಕೆ ವ್ಯಕ್ತವಾಗಿದೆ.

    ಕೊಡಗು ಜಿಲ್ಲೆಯ ಮಡಿಕೇರಿ, ಸುಂಟಿಕೊಪ್ಪ, ಕುಶಾಲನಗರ, ವಿರಾಜಪೇಟೆ, ಗೋಣಿಕೊಪ್ಪಲು, ನಾಪೋಕ್ಲು ಸೇರಿದಂತೆ ಕೊಡಗಿನ ಪ್ರಮುಖ ಪಟ್ಟಣಗಳಲ್ಲಿ ನಡೆಯುವ ವಾರದ ಸಂತೆಗಳಲ್ಲಿ ಹೊಸ ಮುಖಗಳೇ ಹೆಚ್ಚಾಗಿ ಕಂಡುಬರುತ್ತಿವೆ. ಸಂತೆಗಳಲ್ಲಿ ವ್ಯಾಪಾರ ಮಾಡುವುದರಿಂದ ಆರಂಭಿಸಿ ಹೋಂ ಸ್ಟೇ, ರೆಸಾರ್ಟ್ ಗಳಲ್ಲಿ ರೂಮ್ ಬಾಯ್ ತನಕವೂ ಹೊರ ರಾಜ್ಯದ ಕಾರ್ಮಿಕರೇ ಹೆಚ್ಚಾಗಿ ಕಂಡುಬರುತ್ತಿದ್ದಾರೆ. ಇತ್ತೀಚೆಗೆ ಕೆಲವು ಅಪರಾಧ ಪ್ರಕರಣಗಳಲ್ಲೂ ಹೊರ ರಾಜ್ಯದವರೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ನಿಗಾ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

   ಕೊಡಗಿಗೆ ಬರುವ ವಲಸೆ ಕಾರ್ಮಿಕರು ಜಿಲ್ಲಾದ್ಯಂತ ಚದುರಿ ಹೋಗುತ್ತಿದ್ದಾರೆ. ಇದರಿಂದ ಅಕ್ರಮ ವಲಸಿಗರನ್ನು ಪತ್ತೆ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ಕೆಲಸ ನೀಡುವ ಕಾಫಿ ತೋಟದ ಮಾಲೀಕರು, ಕಾರ್ಮಿಕರನ್ನು ಕರೆ ತರುವ ದಲ್ಲಾಳಿಗಳು ಆಯಾ ಕಾರ್ಮಿಕರ ಪೂರ್ವಾಪರ ವಿಚಾರಿಸಿ ಬಳಿಕ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ಎಚ್ಚರಿಸಿದ್ದಾರೆ.

   ಒಂದು ವೇಳೆ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುವಂತೆ ಕೊಡಗು ಎಸ್ಪಿ ರಾಮರಾಜನ್ ಮನವಿ ಮಾಡಿದ್ದಾರೆ.

Post navigation

ಪ್ರಕೃತಿ ವಿಕೋಪದವಾದರೆ ನಮ್ಮೊಂದಿಗೆ ಸಹಕರಿಸಿ ; ಎಸ್ಪಿ ಮನವಿ
ವಿಟಿಯು ಸೆನೆಟರ್‌ ಆಯಿತ್‌ ಡಾ. ಮುಂಜಾಂದಿರ ಚೆಂಗಪ್ಪ

Related Posts

ಮುದ್ದಂಡ ಹಾಕಿ, ಸೆಮಿಫೈನಲ್‌ನತ್ತ  ಬಲಿಷ್ಠ 4 ತಂಡಗಳು…

ಮುದ್ದಂಡ ಹಾಕಿ, ಸೆಮಿಫೈನಲ್‌ನತ್ತ  ಬಲಿಷ್ಠ 4 ತಂಡಗಳು…

25/04/202525/04/2025nadubadenews@gmail.com
 ಮಡಿಕೇರಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನೋತ್ಸವ…

 ಮಡಿಕೇರಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನೋತ್ಸವ…

01/06/202501/06/2025nadubadenews@gmail.com
ಬೇಟೋಳಿ  ಸರ್ಕಾರಿಶಾಲೆಗೆ‌ ಪುಷ್ಟಿ ಯೋಜನೆಯ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ

ಬೇಟೋಳಿ ಸರ್ಕಾರಿಶಾಲೆಗೆ‌ ಪುಷ್ಟಿ ಯೋಜನೆಯ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ

12/04/202512/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us