2024-25 ನೆ ಸಾಲಿಗೆ ಸಂಬಾರ ಮಂಡಳಿ ಸೋಮವಾರಪೇಟೆ ಕಛೇರಿವತಿಯಿಂದ ಏಲಕ್ಕಿ ತೋಟದ ಅಭಿವೃದಿ ಪಡಿಸುವ ದೃಷ್ಟಿಯಿಂದ, ಏಲಕ್ಕಿ ಮರು ನಾಟಿ ಮತ್ತು ನರ್ಸರಿ ಮಾಡುವ ಬೆಳೆಗಾರರಿಂದ, ಹಾಗೂ ಕಾಳು ಮೆಣಸು ಬಿಡಿಸುವ ಯಂತ್ರ ಮತ್ತು ಸ್ಪೈಸ್ ಕ್ಲೀನರ್, ಗ್ರೇಡರ್ಗಳ ಸಹಾಯಧನಕ್ಕಾಗಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಆ ಸಕ್ತರು ಈ ಕೆಳಗಿನ ದಾಖಲಾತಿಯೋಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/10/2024. ಮೊದಲು ಬಂದವರಿಗೆ ಮೊದಲ ಆದ್ಯತೆ.
ಏಲಕ್ಕಿ ಮರುನಾಟಿ ಯೋಜನೆಗೆ (Replantation Scheme) ಬೇಕಾದ ದಾಖಲಾತಿಗಳ ವಿವರ :
1. ಆಧಾರ್ ಕಾರ್ಡ್
2. ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್.
3. 2024-25 ನೇ ಸಾಲಿನ ಪಹಣಿ.
4. ತೋಟದ ನಕ್ಷೆ (Survey sketch)
5.ಏಲಕ್ಕಿ CRC / ತೋಟಗಾರಿಕೆ ಇಲಾಖೆಯಿಂದ ದೃಡೀಕರಣ ಪತ್ರ
6. ಜಾತಿ ಪ್ರಮಾಣ ಪತ್ರ (SC/ST ಬೆಳೆಗಾರರಿಗೆ )
ಏಲಕ್ಕಿ ನರ್ಸರಿ ಯೋಜನೆಗೆ ಬೇಕಾದ ದಾಖಲಾತಿಗಳ ವಿವರ :
1. ಆಧಾರ್ ಕಾರ್ಡ್
2. ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್.
3. 2024-25 ನೇ ಸಾಲಿನ ಪಹಣಿ.
ಕಾಳು ಮೆಣಸು ಬಿಡಿಸುವ ಯಂತ್ರ ಮತ್ತು ಸ್ಪೈಸ್ ಕ್ಲೀನರ್, ಗ್ರೇಡರ್
ದಾಖಲಾತಿಗಳ ವಿವರ :
1. ಆಧಾರ್ ಕಾರ್ಡ್
2. ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್.
3. 2024-25 ನೇ ಸಾಲಿನ ಪಹಣಿ.
4.ಕ್ವೇಟೇಷನ್ (ಅನುಮೋದಿತ ತಯಾರಕರಿಂದ )
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸಂಬಾರ ಮಂಡಳಿ ಕಛೇರಿಯನ್ನು ಅಥವಾ ಮೊಬೈಲ್ ನಂ: 7479346062ಯನ್ನು ಸಂಪರ್ಕಿಸಲು ಕ್ಷೇತ್ರಾಧಿಕಾರಿಗಳಾದ ಎನ್. ಬಿ. ಲೋಕೇಶ್ ಅವರು ಕೋರಿದ್ದಾರೆ