https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಅರೆಭಾಷೆ ಗೌಡ ಜನಾಂಗಕ್ಕೆ ಅನುಕೂಲ ಮಾಡಿದ್ದು  ಕಾಂಗ್ರೆಸ್‌ ಮಾತ್ರ; ಸೂರ್ತಲೆ ಸೋಮಣ್ಣ ಅಭಿಮತ

ಅರೆಭಾಷೆ ಗೌಡ ಜನಾಂಗಕ್ಕೆ ಅನುಕೂಲ ಮಾಡಿದ್ದು  ಕಾಂಗ್ರೆಸ್‌ ಮಾತ್ರ; ಸೂರ್ತಲೆ ಸೋಮಣ್ಣ ಅಭಿಮತ

News, Informatin , Enteetinement and Advertisement
22/07/202522/07/2025nadubadenews@gmail.comLeave a Comment on ಅರೆಭಾಷೆ ಗೌಡ ಜನಾಂಗಕ್ಕೆ ಅನುಕೂಲ ಮಾಡಿದ್ದು  ಕಾಂಗ್ರೆಸ್‌ ಮಾತ್ರ; ಸೂರ್ತಲೆ ಸೋಮಣ್ಣ ಅಭಿಮತ
Spread the love
ಅರೆಭಾಷೆ ಗೌಡ ಜನಾಂಗಕ್ಕೆ ಅನುಕೂಲ ಮಾಡಿದ್ದು  ಕಾಂಗ್ರೆಸ್‌ ಮಾತ್ರ; ಸೂರ್ತಲೆ ಸೋಮಣ್ಣ ಅಭಿಮತ

ಬೆಂಗಳೂರು,ಜು.22(nadubawenews); ಇಲ್ಲಿಯತನಕ ಅರೆ ಭಾಷೆ ಗೌಡ ಸಮಾಜಕ್ಕೆ ಕಾಂಗ್ರೆಸ್ ಪಕ್ಷವೇ ಅನುಕೂಲ ಮಾಡಿದೆ ಅರೆಭಾಷೆಗೌಡ ಸಮಾಜದ ಪ್ರಮುಖರಾದ ಸೂರ್ತಲೆ ಸೋಮಣ್ಣ ಹೇಳಿದ್ದಾರೆ.   ಇಂದು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ   ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರನ್ನು ಅವರ ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾಗಿ,  ಇತ್ತೀಚೆಗೆ ಭಾಗಮಂಡಲ ಗೌಡ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಮಾನ್ಯ ಶಾಸಕರು ₹ 1 ಕೋಟಿ ಅನುದಾನ ಮಂಜೂರು ಭರವಸೆ ನೀಡಿರುವುದಕ್ಕೆ ಧನ್ಯವಾದ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಈ ಹಿಂದಿನ ಸರಕಾರದಲ್ಲಿ ಮಾನ್ಯ ಸಿದ್ದರಾಮಯ್ಯರವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ, ಗೌಡ ಸಮಾಜಕ್ಕೆ ₹75 ಲಕ್ಷ ಅನುದಾನ ನೀಡಿದ್ದರು. ಇಲ್ಲಿಯವರೆಗೆ ಕಾಂಗ್ರೆಸ್‌ ಪಕ್ಷ ಮಾತ್ರ ನಮ್ಮ ಜನಾಂಗಕ್ಕೆ ಹೆಚ್ಚಿನ ಅನುದಾನ ಮತ್ತು ಅನುಕೂಲತೆ ಮಾಡಿ ಕೊಟ್ಟಿದೆ ಎಂದು  ಕೊಡಗು ಗೌಡ ಸಮಾಜಗಳ ಒಕ್ಕೂಟದ ಮಾಜೀ ಅಧ್ಯಕ್ಷರೂ ಆಗಿರುವ ಸೂರ್ತಲೆ ಸೋಮಣ್ಣ ಸ್ಮರಿಸಿದರು.

ಇದೇ ಸಂದರ್ಭದಲ್ಲಿ, ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ಅರೆಭಾಷೆ ಗೌಡ ಜನಾಂಗಕ್ಕೆ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಕ್ರೀಡಾ ಕೇಂದ್ರದ ಸ್ಥಾಪನೆಗಾಗಿ ಮದೆನಾಡು ಗ್ರಾಮದ ಸರ್ವೆ ನಂಬರ್ 98/1 ರ ಪೈಸಾರಿ ಜಾಗದಲ್ಲಿ ಖಾಲಿ ಇರುವ 13 ಎಕರೆ ಜಾಗವನ್ನು, ಕೊಡಗು ಗೌಡ ಸಮಾಜ – ಮಡಿಕೇರಿ, ಇವರಿಗೆ ಮಂಜೂರು ಮಾಡುವಂತೆಯೂ,  ಹಾಗೂ  ಸಮಾಜದ ಇನ್ನಿತರ ಹಲವು ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು. ಮನವಿಯನ್ನು ಸ್ವೀಕರಿಸಿದ ಶಾಸಕರು, ಸಮಾಜದ ಮನವಿಯನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.      

ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಗೌಡ ಸಮಾಜದ ಪ್ರಮುಖರಾದ ಸೋಮಣ್ಣ, ಗಿರೀಶ್, ಬಿಎಸ್ ಆನಂದ್, ರಾಜೇಂದ್ರ, ಅನಂತ್ ಕುಮಾರ್, ವಸಂತ, ಸಂದೀಪ್, ಸೀತಾರಾಮ್, ಶ್ರೀಮತಿ ದಮಯಂತಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Post navigation

ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿಗೆ ಅರ್ಜಿ ಆಹ್ವಾನ
ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ವಿ.ಪೇಟೆ ತಾಲೂಕು ಅಧ್ಯಕ್ಷರಾಗಿ ಮುಕ್ಕಾಟಿರ ಕಾವೇರಮ್ಮ ಆಯ್ಕೆ

Related Posts

ಕಟ್ಟೆಮಾಡ್ ‌ ಪ್ರಕರಣ ಮತ್ತೆ ಜಿಲ್ಲಾಧಿಕಾರಿ ಅಂಗಳಕ್ಕೆ…

ಕಟ್ಟೆಮಾಡ್ ‌ ಪ್ರಕರಣ ಮತ್ತೆ ಜಿಲ್ಲಾಧಿಕಾರಿ ಅಂಗಳಕ್ಕೆ…

11/02/202511/02/2025nadubadenews@gmail.com
ಮುದ್ದಂಡಕಪ್ಹಾಕಿನಮ್ಮೆ. ಮಾ.28 ರಂದು ಅದ್ದೂರಿ ಉದ್ಘಾಟನೆ

ಮುದ್ದಂಡಕಪ್ಹಾಕಿನಮ್ಮೆ. ಮಾ.28 ರಂದು ಅದ್ದೂರಿ ಉದ್ಘಾಟನೆ

26/03/202526/03/2025nadubadenews@gmail.com
ಕರಾಮಸಾಪ ತಾಲೂಕು ಅಧ್ಯಕ್ಷರುಗಳ ನೇಮಕ

ಕರಾಮಸಾಪ ತಾಲೂಕು ಅಧ್ಯಕ್ಷರುಗಳ ನೇಮಕ

24/02/202524/02/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version